ನಮಗೆ ಇಷ್ಟವಾದಂಥ ಒಂದು ಸಂಗತಿಯ ನೆನಪು ಕಣ್ಮುಂದೆ ಸದಾ ಇರಬೇಕು ಎಂದು ಹಲವರು ಇಚ್ಚಿಸುತ್ತಾರೆ. ಅದಕ್ಕಾಗಿ ಅವರೆಲ್ಲ ಟ್ಯಾಟೂಗಳ ಮೊರೆ ಹೋಗುವುದೇ ಹೆಚ್ಚು. ಇಷ್ಟದ ದೇವತೆ, ಇಷ್ಟದ ಹೀರೋ, ಹೀರೋಯಿನ್, ನೆಚ್ಚಿನ ಆರ್ಟ್, ಆ ಚಿತ್ರದೊಳಗೆ ಆಪ್ತರ ಹೆಸರು… ಮೈಮೇಲೆ ಹೀಗೆ ಅಚ್ಚು ಹಾಕಿಸಿಕೊಂಡರೆ, ಅದರ ಖದರೇ ಬೇರೆ ಇರುತ್ತೆ ಅನ್ನೋದು ಹಚ್ಚೆಪ್ರಿಯರ ನಂಬಿಕೆ.
ಈಗ ಹಚ್ಚೆ ಪ್ರಿಯರಿಗೆಲ್ಲ ಒಂದು ಹಬ್ಬ ಬಂದಿದೆ, ಅದು ಇಂಕ್‌ಸೋಲ್ ಟ್ಯಾಟೂ ಪೆಸ್ಟಿವಲ್! ದೇಶದ ನುರಿತ ಟ್ಯಾಟೂ ತಜ್ಞರೆಲ್ಲ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರಿಯೇಟಿವ್ ಕೈಚಳಕಕ್ಕೆ ಇದು ಸಾಕ್ಷಿಯಾಗಲಿದೆ. ಈ ಉತ್ಸವದಲ್ಲಿ ಮ್ಯೂಸಿಕ್ ಬ್ಯಾಂಡ್‌ಗಳ ಸಂಗೀತ ಅಬ್ಬರವೂ,
ಸಂತೆಯ ವೈವಿಧ್ಯ ಆಕರ್ಷಣೆಯೂ ಇರಲಿದೆ. ತಾಜಾ ತಿನಿಸುಗಳ ಪುಡ್ ಸ್ಟ್ರೀಟ್‌ಗಳೂ ಉತ್ಸವಕ್ಕೆ ಕಳೆತುಂಬಲಿವೆ. ಶುಕ್ರವಾರದಿಂದಲೇ ಶುರುವಾಗಿರುವ ಟ್ಯಾಟೂ ಉತ್ಸವ, ಭಾನುವಾರದ ವರೆಗೆ ಇರಲಿದೆ. ಅತಿ ಕಡಿಮೆ ದರದಲ್ಲಿ, ಒಳ್ಳೆಯ ಚಿತ್ರಗಳನ್ನು ಮೈಮೇಲೆ ಮೂಡಿಸಿಕೊಳ್ಳಲು ಇದೊಂದು ಅವಕಾಶ.
ಯಾವಾಗ?: ಮೇ 26- 27, ಶನಿವಾರ- ಭಾನುವಾರ
ಎಲ್ಲಿ?: ಮ್ಯಾನೊ ಕನ್ವೆನನ್ ಸೆಂಟರ್, ವೀರಣ್ಣ ಪಾಳ್ಯ, ನಾಗಾವರ ರಿಂಗ್‌ರೋಡ್
ದರ: 249 ರೂ.