ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ವೀರಶೈವ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರಶೈವ ಸಮುದಾಯಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕಿತ್ತು. ಆದರೆ, ರಾಜ್ಯ ಖಾತೆ ಕೊಟ್ಟಿದ್ದು ಸರಿಯಲ್ಲ. ಯಡಿಯೂರಪ್ಪ ಈ ಬಗ್ಗೆ ಮೌನ ವಹಿಸಿದ್ದಾರೆ.
ಅವರ ಮುಖಂಡರು ತೆಗೆದುಕೊಂಡ ತೀರ್ಮಾನವಾದ್ದರಿಂದ ಅವರು ಸಮಾಧಾನ ಆಗಲೇಬೇಕು. ಹಿಂದೆ ಸಿದ್ದೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ರು. ಅದೂ ಕೂಡ ರಾಜ್ಯ ಖಾತೆ ಆಗಿತ್ತು. ಅದರಿಂದ ಕೇವಲ, ಕಾರು, ಮನೆ, ಫೋನ್ ಮಾತ್ರ ಸಿಗುತ್ತದೆ.
ಆದರೆ, ಸಂಪುಟ ದರ್ಜೆ ನೀಡಿದರೆ ಗೌರವ ಇರುತ್ತದೆ ಎಂದರು. ವೀರಶೈವ-ಲಿಂಗಾಯತ ಸಮುದಾಯಕ್ಕೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ಬೇಕು ಎಂಬುದು ನಮ್ಮ ಬೇಡಿಕೆ. ಮುಂದಿನ ದಿನಗಳಲ್ಲಾದರೂ ನಮ್ಮ ಸಮುದಾಯಕ್ಕೆ ಎರಡರಿಂದ ಮೂರು ಸಚಿವ ಸ್ಥಾನಗಳನ್ನು ನೀಡಲಿ ಎಂದು ಅವರು ಒತ್ತಾಯಿಸಿದರು.
ಮೈತ್ರಿ ಸರ್ಕಾರ ನಡೆಯುತ್ತಿದೆ. ನಡೆಯುವಷ್ಟು ಕಾಲ ನಡೆಯುತ್ತೆ. ಇನ್ನೂ ಒಂದು ವರ್ಷ, ಇಪ್ಪತ್ತು ತಿಂಗಳ ಕಾಲ ನಡೆಯಬಹುದು. ನಡೆಯಲಿ. ಮೈತ್ರಿ ಮುಂದುವರಿಯಬೇಕು ಅಷ್ಟೇ.
-ಶಾಮನೂರು ಶಿವಶಂಕರಪ್ಪ ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ