Advertisement

ಗಾಯ: ಮೊದಲೆರಡು ಟೆಸ್ಟ್‌ಗೆ ಪೃಥ್ವಿ ಶಾ ಗೈರು

06:00 AM Dec 06, 2018 | |

ಅಡಿಲೇಡ್‌: ಹಿಮ್ಮಡಿ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಜನಪ್ರಿಯ ಕಿರಿಯ ಕ್ರಿಕೆಟಿಗ ಪೃಥ್ವಿ ಶಾ ಅವರು ಸದ್ಯಕ್ಕೆ ಆಸೀಸ್‌ ವಿರುದ್ಧ ಮೊದಲೆರಡು ಟೆಸ್ಟ್‌ನಲ್ಲಿ ಆಡುವುದಿಲ್ಲ. ಆದರೆ ಮೆಲ್ಬರ್ನ್ನಲ್ಲಿ ನಡೆಯುವ 3ನೇ ಟೆಸ್ಟ್‌ ಹೊತ್ತಿಗೆ ಚೇತರಿಸಿಕೊಂಡು

Advertisement

ಮೈದಾನಕ್ಕಿಳಿಯಬಹುದೆಂದು ನಿರೀಕ್ಷಿಸಲಾಗಿದೆ. ಇದನ್ನು ತರಬೇತುದಾರ ರವಿಶಾಸ್ತ್ರಿ ಅವರೇ ಖಚಿತಪಡಿಸಿದ್ದಾರೆ. ಕ್ರಿಕೆಟ್‌ ಆಸ್ಟ್ರೇಲಿಯ ಅಧ್ಯಕ್ಷರ ಮಂಡಳಿ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವಾಗ ಪೃಥ್ವಿ ಕಾಲಿಗೆ ಏಟು ಮಾಡಿಕೊಂಡು ಮೈದಾನದಿಂದ ಹೊರಬಿದ್ದಿದ್ದರು. ಆ ವೇಳೆ ನಡೆದಿದ್ದ ಸ್ಕ್ಯಾನಿಂಗ್‌ನಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next