Advertisement
ಇದನ್ನೂ ಓದಿ:ನಿಲುವಳಿ ಸೂಚನೆ ಮಂಡಿಸುವುದು ಏಕೆ ಹೇಳಿ?: ಸಭಾಧ್ಯಕ್ಷರಿಗೆ ಸಿದ್ದರಾಮಯ್ಯ ಪ್ರಶ್ನೆ
Related Articles
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಹಸ್ಯವಾಗಿ ಎರಡನೇ ಉದ್ಯೋಗ ಮಾಡುವುದು, ಹಗಲಿನ ಪಾಳಿಯಲ್ಲಿ ಒಂದು ಕಂಪನಿ ಕೆಲಸ, ರಾತ್ರಿ ಪಾಳಿಯಲ್ಲಿ ಮತ್ತೊಂದು ಕಂಪನಿ(ಅರೆಕಾಲಿಕ) ಕೆಲಸ ಮಾಡುವುದನ್ನು ಮೂನ್ ಲೈಟಿಂಗ್ ಅಂತ ಕರೆಯುತ್ತಾರೆ.
Advertisement
ಇನ್ಫೋಸಿಸ್ ಎಚ್ ಆರ್ ಡಿಪಾರ್ಟ್ ಮೆಂಟ್ ಕಳುಹಿಸಿರುವ ಇ-ಮೇಲ್ ಸಬ್ಜೆಕ್ಟ್ ಲೈನ್ ನಲ್ಲಿ, “No two timing- no Moonlighting” ಎಂದು ನಮೂದಿಸಿತ್ತು. ಮೂನ್ ಲೈಟಿಂಗ್ ಅಭ್ಯಾಸ ದ್ರೋಹ ಎಸಗಿದಂತೆ ಎಂದು ವಿಪ್ರೋ ಅಧ್ಯಕ್ಷರಾದ ಅಜೀಂ ಪ್ರೇಮ್ ಜಿ ಕಳೆದ ತಿಂಗಳು ಆರೋಪಿಸಿದ್ದರು.
“ಕಂಪನಿಯ ಕೆಲಸದ ವೇಳೆಯಲ್ಲಿ ಉದ್ಯೋಗಿಗಳು ಯಾವುದೇ ರೀತಿಯಲ್ಲೂ ಮತ್ತೊಂದು ಕೆಲಸವನ್ನು ಮಾಡುವಂತಿಲ್ಲ. ಎರಡು ಉದ್ಯೋಗ ಮಾಡುವುದು ನಿಯಮ ಬಾಹಿರವಾದದ್ದು ಎಂದು ಇನ್ಫೋಸಿಸ್ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಸ್ಪಷ್ಟಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಿಮ್ಮ ಆಫರ್ ಲೆಟರ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಇನ್ಫೋಸಿಸ್ ಒಪ್ಪಿಗೆ ಇಲ್ಲದೆ ಯಾವುದೇ ಸಂಸ್ಥೆಯ ನಿರ್ದೇಶಕ/ಪಾಲುದಾರ/ಸದಸ್ಯ/ಉದ್ಯೋಗಿಯಾಗಿ ಯಾವ ಚಟುವಟಿಕೆಯಲ್ಲೂ ಪೂರ್ಣಕಾಲಿಕ ಅಥವಾ ಅರೆಕಾಲಿಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ಷರತ್ತನ್ನು ನೀವು(ಉದ್ಯೋಗಿಗಳು) ಒಪ್ಪಿಕೊಂಡಿದ್ದೀರಿ.
ಕಂಪನಿಯು ಸೂಕ್ತ ಎಂದು ಭಾವಿಸುವ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆಯನ್ನು ನೀಡಬಹುದು ಮತ್ತು ಕಂಪನಿಯು ಯಾವುದೇ ಸಮಯದಲ್ಲಿಯೂ ತನ್ನ ವಿವೇಚನೆಯಿಂದ ಒಪ್ಪಿಗೆಯನ್ನು ವಾಪಸ್ ಪಡೆಯಬಹುದಾಗಿದೆ ಎಂದು ಇನ್ಫೋಸಿಸ್ ಇ-ಮೇಲ್ ನಲ್ಲಿ ತಿಳಿಸಿದೆ.
ಕೋವಿಡ್ 19 ಸಂದರ್ಭದಲ್ಲಿ ದೂರದ ಊರಿನ ಉದ್ಯೋಗಿಗಳಿಗೆ ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿತ್ತು. ಮುಖ್ಯವಾಗಿ ಈ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳು ಇತರ ಕಂಪನಿಯ ಕೆಲಸವನ್ನೂ ಮಾಡುತ್ತಿರುವುದು ಗಮನಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ.
ಆಹಾರ ಸರಬರಾಜು ಫ್ಲ್ಯಾಟ್ ಫಾರಂ ಸ್ವಿಗ್ಗಿ ಭಾರತದಲ್ಲಿ ಮೂನ್ ಲೈಟಿಂಗ್ ಗೆ ಅವಕಾಶ ಮಾಡಿಕೊಟ್ಟ ಮೊದಲ ಕಂಪನಿಯಾಗಿದೆ. ಸ್ವಿಗ್ಗಿ ಇಂಡಸ್ಟ್ರಿಯಲ್ಲಿ ಮೂನ್ ಲೈಟಿಂಗ್ ನೀತಿಗೆ ಅನುಮತಿ ನೀಡಿದ್ದು, ಇದರಿಂದಾಗಿ ತನ್ನ ಉದ್ಯೋಗಿಗಳಿಗೆ ಕೆಲವೊಂದು ಷರತ್ತಿನ ಮೇಲೆ ಎರಡನೇ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿಕೊಟ್ಟಿತ್ತು ಎಂದು ವರದಿ ತಿಳಿಸಿದೆ.