Advertisement
ಉದ್ಯೋಗಿಗಳು ತಮ್ಮ ಕಂಪನಿಯ ಕೆಲಸಕ್ಕೆ ತೊಂದರೆಯಾಗದಂತೆ ಬಿಡುವಿನ ಸಮಯದಲ್ಲಿ ಬೇರೆ ಸಣ್ಣಪುಟ್ಟ ಕೆಲಸ(ಗಿಗ್ ವರ್ಕ್) ಮಾಡಲು ಅವಕಾಶವಿದೆ. ಆದರೆ, ಇದಕ್ಕೆ ಅವರು ಕಂಪನಿಯ ಮ್ಯಾನೇಜರ್‌ಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು ಕಂಪನಿ ಹೇಳಿದೆ.
ಕಂಪನಿಯ ಯಾವುದಾದರೂ ಉದ್ಯೋಗಿಯು ಗಿಗ್ ವರ್ಕ್(ಇತರೆ ಸಣ್ಣಪುಟ್ಟ ಕೆಲಸ) ಮಾಡಲು ಇಚ್ಛಿಸಿದರೆ, ಅದಕ್ಕೆ ಅವಕಾಶ ನೀಡುತ್ತೇವೆ. ಆದರೆ, ಅಂಥ ಕೆಲಸ ಮಾಡುವ ಮುನ್ನ ಮ್ಯಾನೇಜರ್ ಮತ್ತು ಬಿಪಿ-ಎಚ್‌ಆರ್ ಅನುಮತಿ ಪಡೆಯಬೇಕು. ಅಲ್ಲದೇ, ನೀವು ಬಿಡುವಿನ ವೇಳೆಯಲ್ಲಿ ಮಾಡುವ ಕೆಲಸವು, ಇನ್ಫೋಸಿಸ್ ಅಥವಾ ಇನ್ಫೋಸಿಸ್‌ನ ಕ್ಲೈಂಟ್‌ಗಳೊಂದಿಗೆ ಸ್ಪರ್ಧಿಸುವಂಥದ್ದಾಗಿರಬಾರದು. ಜತೆಗೆ, ಹೊರಗಿನ ಕೆಲಸವು ಇನ್ಫೋಸಿಸ್‌ನಲ್ಲಿನ ನಿಮ್ಮ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಿರಬಾರದು ಎಂಬ ಸಂದೇಶವನ್ನು ಉದ್ಯೋಗಿಗಳಿಗೆ ಕಂಪನಿ ರವಾನಿಸಿದೆ.