ನವ ದೆಹಲಿ : ಐಟಿ ಕ್ಷೇತ್ರದಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಇನ್ಫೋಸಿಸ್, ವಿಶ್ವದ ಅತಿದೊಡ್ಡ ಚಿನ್ನದ ಗಣಿಗಾರಿಕೆ ಕಂಪನಿಯಾದ ನ್ಯೂಮಾಂಟ್ ಕಾರ್ಪೊರೇಶನ್ ನೊಂದಿಗೆ ತನ್ನ ಕಾರ್ಯತಂತ್ರದ ಸಹಯೋಗವನ್ನು ಐದು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಮಾಹಿತಿ ನೀಡಿದೆ.
ಇನ್ಫೋಸಿಸ್ ಮತ್ತು ನ್ಯೂಮಾಂಟ್ ನಡುವಿನ ಈ ಸಂಬಂಧವು ತನ್ನ ಗಣಿ ತಾಣಗಳಲ್ಲಿ ವಿತರಣಾ ಮಾದರಿಗಳನ್ನು ಪ್ರಮಾಣೀಕರಿಸಲು ಮತ್ತು ಡಿಜಿಟಲೀಕರಣಗೊಳಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಬಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.
ಓದಿ : ಮಂಗಳೂರು-ಮಾ.27 ರಂದು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ: ರಹೀಂ ಉಚ್ಚಿಲ್
ಇದರ ಮೂಲಕ, ಇನ್ಫೋಸಿಸ್ ಬಿಪಿಎಂ ಆಟೋಮೆಷನ್, ಎಐ ಮತ್ತು ಡಿಸೈನ್ ಥಿಂಕಿಂಗ್ ನನ್ನು ಹೆಚ್ಚಿಸುತ್ತದೆ, ಇದು ನ್ಯೂಮಾಂಟ್ ವ್ಯವಹಾರ ಮೌಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಬಿಪಿಎಂ ಹೇಳಿದೆ.
ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಗಣಿ ಸೈಟ್ ಗಳಲ್ಲಿ ಪ್ರಕ್ರಿಯೆಗಳನ್ನು ಪ್ರಮಾಣಿಕರಿಸಲು ಮತ್ತು ಡಿಜಿಟಲ್ ಆಗಿ ಪರಿವರ್ತಿಸಲು ನ್ಯೂಮಾಂಟ್ ನೊಂದಿಗಿನ ನಮ್ಮ ಸಹೋಯೋಗವನ್ನು ಪಡೆಯಲು ನಾವು ಸಂತೋಷ ಪಡುತ್ತೇವೆ ಎಂದು ಇನ್ಫೋಸಿಸ್ ಬಿಪಿಎಮ್ ನ ವ್ಯವಸ್ಥಾಪಕ ನಿರ್ದೇಶಕ ಅನಂತ ರಾಧಕೃಷ್ಣನ್ ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಸಹಯೋಗದ ವಿಸ್ತರಣಾವಧಿಯಲ್ಲಿ ತಂತ್ರಜ್ಞಾನಗಳ ಸಾಮರ್ಥ್ಯಗಳಲ್ಲಿನ ಎಲ್ಲಾ ಸವಾಲುಗಳನ್ನು ಎದುರಿಸುವ ಜವಾಬ್ದಾರಿ ನಮ್ಮ ಮುಂದಿದೆ. ಮಾತ್ರವಲ್ಲದೇ, ಇದು ಡಿಜಿಟಲ್ ತಂತ್ರಜ್ಞಾನಗಳಲ್ಲಿನ ನಮ್ಮ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ” ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಏರಿಕೆ, 15,000 ಗಡಿ ದಾಟಿದ ನಿಫ್ಟಿ