Advertisement

ಇನ್ಫಿ ಸಿಇಒ ವಿರುದ್ಧ ಆರೋಪ : ವ್ಯಕ್ತಿಯಿಂದ ನಿಲೇಕಣಿ, ಸ್ವತಂತ್ರ ನಿರ್ದೇಶಕರಿಗೆ ಪತ್ರ

11:00 AM Nov 14, 2019 | Team Udayavani |

ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್‌ ಕಂಪೆನಿ, ಇನ್ಫೋಸಿಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ಸಲಿಲ್‌ ಪಾರೇಖ್‌ ವಿರುದ್ಧ ಮತ್ತೂಮ್ಮೆ ಆರ್ಥಿಕ ಅವ್ಯವಹಾರಗಳ ದೂರು ಕೇಳಿ ಬಂದಿದೆ.

Advertisement

ಕಂಪೆನಿಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಎಂದು ಹೇಳಿ ಕೊಂಡಿರುವ ಅನಾಮಧೇಯ ವ್ಯಕ್ತಿ, ಸಂಸ್ಥೆಯ ಅಧ್ಯಕ್ಷ ಹಾಗೂ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಹಾಗೂ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪಾರೇಖ್‌ ಕಂಪೆನಿ ಸೇರಿ 1 ವರ್ಷ 8 ತಿಂಗಳು ಆಗಿದ್ದು, ಸಿಇಓ ಆಗಿ ಅವರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಬೇಕು.

ಆದರೆ, ಅವರು ಮುಂಬಯಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ನಿಮಿತ್ತ ತಿಂಗಳಲ್ಲಿ ಎರಡು ಬಾರಿ ಅವರು ಮುಂಬೈನಿಂದ ಬೆಂಗಳೂರಿಗೆ ಬರುತ್ತಾರೆ. ಇದಕ್ಕಾಗಿ ಸಾರಿಗೆ, ವಿಮಾನ ವೆಚ್ಚ ಸೇರಿ ಕಂಪೆನಿಗೆ 22 ಲಕ್ಷ ರೂ. ನಷ್ಟ ಉಂಟಾಗುತ್ತದೆ. ಮುಂಬಯಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಅವರಿಗೆ 2 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಹೀಗಿದ್ದರೂ ಅವರು ಸ್ಥಳಾಂತರಗೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಲಾಗಿದೆ. ಇತ್ತೀಚೆಗಷ್ಟೇ ಲೆಕ್ಕಪತ್ರಗಳಲ್ಲಿ ಮೋಸ ಮಾಡಲಾಗಿದೆ ಎಂದು ಬರೆದ ಅನಾಮಧೇಯ ಪತ್ರ ವಿವಾದ ಹುಟ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next