Advertisement

ವಿಶ್ವಾಸಾರ್ಹತೆ ಗಳಿಕೆಗೆ ಇನ್ಫೋಸಿಸ್‌ಗೆ ಹೊಸ ಛೇರ್ಮನ್‌ ಬೇಕು

03:45 AM Feb 11, 2017 | Team Udayavani |

ಇನ್ಫೋಸಿಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಲೇ ಇರುವ ಕಂಪೆನಿಯ ಮಾಜಿ ಆಡಳಿತಾತ್ಮಕ ಅಧಿಕಾರಿ (ಸಿಎಫ್ಒ) ಮೋಹನ್‌ದಾಸ್‌ ಪೈ ಅವರು, ಆಡಳಿತ ಮಂಡಳಿಗೆ ಮೂವರು ಸಂಸ್ಥಾಪಕರು ಬರೆದಿರುವ ಪತ್ರದ ಕ್ರಮ ಸರಿಯಾದುದಲ್ಲ ಎಂದಿದ್ದಾರೆ. ಆದರೆ ಈ ವಿವಾದದಲ್ಲಿ ಕಂಪನಿ ಸಿಇಒ ವಿಶಾಲ್‌ ಸಿಕ್ಕಾ ಅವರನ್ನು ಎಳೆದು ತರಲ್ಲ ಎಂದೂ ಹೇಳಿದ್ದಾರೆ. 

Advertisement

ಆಂಗ್ಲ ವೆಬ್‌ಸೈಟ್‌ವೊಂದಕ್ಕೆ ಮೋಹನ್‌ದಾಸ್‌ ಪೈ ಅವರು ನೀಡಿರುವ ಸಂದರ್ಶನದ ಸಾರಾಂಶವಿದು.

ಸಂಸ್ಥಾಪಕರ ಮಾತು ಕೇಳಬೇಕಿತ್ತು
    ಮಂಡಳಿಯ ನಿರ್ಧಾರ ಬಗ್ಗೆ  ಮೂರ್ತಿ ಅವರು ಬರೆದ ಮೇಲ್‌ಗೆ ಮುಖ್ಯಸ್ಥ ಶೇಷಸಾಯಿ ಉತ್ತರ ಕೊಡಬೇಕಿತ್ತು. ಆದರೆ ಅವರು ಅದನ್ನು ತೆಗೆದು ಪಕ್ಕಕ್ಕಿರಿಸಿದರು. ಮೂರ್ತಿ ಮತ್ತು ಶೇಷಸಾಯಿ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ಕಂಪೆನಿಯ ಫೌಂಡರ್‌ಗಳನ್ನು ಈ ರೀತಿ ನಡೆಸಿಕೊಳ್ಳಬಹುದೇ? ನಿರ್ಧಾರಗಳು ಪಾರದರ್ಶಕವಾಗಿರಬೇಕಿತ್ತು ಅಲ್ಲವೇ?

ಸಾರ್ವಜನಿಕಗೊಳ್ಳಬೇಕಿತ್ತೇ?
    ಕಂಪನಿ ಪತ್ರಿಕಾ ಹೇಳಿಕೆ ಮೂಲಕ ಹೊರಹಾಕಿದ್ದು ಕೆಟ್ಟ ಸಂಪ್ರದಾಯ. ಅಲ್ಲದೆ ಇದರಲ್ಲಿ ಷೇರುದಾರರ ಪ್ರಶ್ನೆಗಳಿಗೆ ಉತ್ತರಿಸಲು ವಕೀಲರನ್ನು ನೇಮಕ ಮಾಡುವುದಾಗಿ ಕಂಪನಿ ಹೇಳಿದೆ. ಆದರೆ ಸಹ ಸಂಸ್ಥಾಪಕರ ಪ್ರಶ್ನೆಗಳಿಗೆ ಉತ್ತರಿಸಲು ಕಂಪನಿ ಹೊಸ ವಕೀಲರನ್ನು ನೇಮಿಸಿದ್ದೇಕೆ? ಇದರಿಂದ ಕಂಪನಿಯ ಹಣವನ್ನು ಪೋಲು ಮಾಡಿದಂತೆ ಆಗಲಿಲ್ಲವೇ? 

ಹಣದ ಖಾಸಗಿ ಬಳಕೆ
    ಈ ವಿಚಾರದಲ್ಲಿ ನಾನು ಯಾರ ಹೆಸರನ್ನೂ ಹೇಳಿಲ್ಲ. ಆದರೆ ಖಾಸಗಿ ಉದ್ದೇಶಕ್ಕಾಗಿ ಬೋರ್ಡ್‌ ನಿಂದ ಹಣ ಬಳಕೆಯಾಗಿದೆ. ಅಂದರೆ ಕುಟುಂಬ ಸದಸ್ಯರ ವಿಮಾನ ಪ್ರಯಾಣಕ್ಕೆ ಹಣ ಬಳಕೆಯಾಗಿದ್ದು, ಇದು ಸಲ್ಲದು. 

Advertisement

ನಾರಾಯಣ ಮೂರ್ತಿ ಪತ್ರಕ್ಕೆ ಪ್ರತಿಕ್ರಿಯೆ
    ಮೂರ್ತಿ ಅವರು, ಕಂಪನಿಯ ಕಾರ್ಪೊರೇಟ್‌ ಆಡಳಿತದಲ್ಲಿನ ಕೆಲವು ದೋಷಗಳನ್ನು ಎತ್ತಿಹಿಡಿದ್ದಾರೆ. ಇನ್ಫೋಸಿಸ್‌ನಲ್ಲಿ ಮೊದಲ ಬಾರಿಗೆ ಸಹ ಸಂಸ್ಥಾಪಕರು ಕೆಲವೊಂದು ಸುಧಾರಣಾ ನೀತಿ ಜಾರಿಗೆ ತಂದರು. ಇದರಲ್ಲಿ ಕಾರ್ಪೊರೇಟ್‌ ಆಡಳಿತ ವರದಿಯೂ ಒಂದು. ನೀವು ಎಲ್ಲಾದರೂ ಕಂಪೆನಿಯ ಸಿಎಫ್ಓ ಕೆಲಸ ಬಿಟ್ಟು ಹೋಗುವಾಗ 24 ತಿಂಗಳ ವೇತನ ಕೊಟ್ಟು ಕಳುಹಿಸುವುದು ಕೇಳಿದ್ದೀರೇ? ಆದರೆ 2016ರಲ್ಲಿ ಸಿಎಫ್ಓ ಕೆಲಸ ಬಿಟ್ಟು ಹೋದಾಗ ಅವರಿಗೆ ಕೊಟ್ಟ ವೇತನದ ಬಗ್ಗೆ ಕಾರ್ಪೊರೇಟ್‌ ಆಡಳಿತ ವರದಿಯಲ್ಲಿ ಉಲ್ಲೇಖ ಮಾಡಿಯೇ ಇರಲಿಲ್ಲ. ಇದನ್ನು ಏಕೆ ಮುಚ್ಚಿಟ್ಟಿದ್ದು?

ಮೂರ್ತಿ-ಶೇಷಸಾಯಿ ಸಾರ್ವಜನಿಕವಾಗಿ ಚರ್ಚೆ ಮಾಡಬೇಕೇ?
    ಕಂಪನಿಯ ಅಧ್ಯಕ್ಷರು ಮೂರ್ತಿ ಅವರ ಮೇಲ್‌ ಅನ್ನು ನಿರ್ಲಕ್ಷಿಸಿದ್ದಲ್ಲದೇ, ಅವರ ಪ್ರಶ್ನೆಗಳಿಗೆ ಉತ್ತರಿಸಲು ವಕೀಲರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ. ಆದರೆ ಮೂರ್ತಿ ಮತ್ತು ಇತರೆ ಸಹ ಸಂಸ್ಥಾಪಕರು ಈ ಕಂಪನಿಯ ಶೇ.13 ಷೇರು ಹೊಂದಿದ್ದಾರೆ. ಅಧ್ಯಕ್ಷರು ಕೇವಲ ನೇಮಕವಾದವರೇ ಹೊರತು, ಮಾಲೀಕರಲ್ಲ. ಹೀಗಾಗಿಯೇ ನಾನು ಮೂರ್ತಿ ಅವರ ಬಳಿ ಶೇಷಸಾಯಿ ಅವರು ಸಾರ್ವಜನಿಕವಾಗಿ ಚರ್ಚೆ ಮಾಡಲಿ ಎಂದು ಹೇಳಿದ್ದು.

ಶೇಷಸಾಯಿ ಮುಂದುವರಿಯಬಾರದೇ?
    ಮೂರ್ತಿ ಅವರ ಪ್ರಶ್ನೆಗಳಿಗೆ ಶೇಷಸಾಯಿ ಉತ್ತರಿಸಿಲ್ಲ. ಕಂಪನಿಯ ವಕೀಲರು ಕೆಲಸ ಬಿಟ್ಟು ಹೋಗುವಾಗ ನೀಡಿರುವ ಹಣ, ಮಾಜಿ ಸಿಎಫ್ಓಗೆ ನೀಡಿರುವ ಪರಿಹಾರ ಮೊತ್ತದ ಬಗ್ಗೆ ಗೊಂದಲಗಳಿವೆ. ಕಂಪನಿಯ ವಿಶ್ವಾಸಾರ್ಹತೆ ದೃಷ್ಟಿಯಿಂದ ಶೇಷಸಾಯಿ ಬದಲಾಗಬೇಕು. 

ಸಿಕ್ಕಾ ಬಗ್ಗೆ
    ಅವರ ಬಗ್ಗೆ ನನ್ನ ವಿರೋಧವಿಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next