Advertisement

ಉದ್ಯೋಗಿಗಳಿಗೆ 5.11ಲಕ್ಷಕ್ಕೂ ಅಧಿಕ ಷೇರು ಹಂಚಿದ ಇನ್ಫೋಸಿಸ್ 

09:45 PM May 16, 2023 | Shreeram Nayak |

ನವದೆಹಲಿ: ಜಾಗತಿಕ ದೈತ್ಯಸಂಸ್ಥೆಗಳೆಲ್ಲ ಉದ್ಯೋಗ ಕಡಿತಕ್ಕೆ ಮುಂದಾಗಿರುವ ನಡುವೆಯೇ, ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾಸಂಸ್ಥೆ ಇನ್ಫೋಸಿಸ್‌, ಸಂಸ್ಥೆಗೆ ಅತ್ಯುತ್ತಮ ಕೊಡುಗೆ ನೀಡಿರುವ ತನ್ನ ಅರ್ಹ ಉದ್ಯೋಗಿಗಳಿಗೆ 5.11 ಲಕ್ಷ ಷೇರುಗಳನ್ನು ಹಂಚಿಕೆ ಮಾಡಿರುವುದಾಗಿ ಘೋಷಿಸಿದೆ.

Advertisement

5,11,862 ಈಕ್ವಿಟಿ ಷೇರುಗಳ ಪೈಕಿ 2015ರ ಸ್ಟಾಕ್‌ ಇನ್ಸೆಂಟಿವ್‌ ಕಾಂಪನ್ಸೇಷನ್‌ ಪ್ಲಾನ್‌ ಅನ್ವಯ 1,04,335 ಷೇರುಗಳನ್ನು ಹಾಗೂ ಇನ್ಫೋಸಿಸ್‌ ಎಕ್ಸ್‌ಪ್ಯಾಂಡ್‌ ಸ್ಟಾಕ್‌ ಓನರ್‌ಶಿಪ್‌ ಪ್ರೋಗ್ರಾಮ್‌ 2019 ಅನ್ವಯ 4,07,527 ಷೇರುಗಳನ್ನು ಹಂಚಿಕೆ ಮಾಡಲಾಗಿದೆ ಪ್ರತಿ ಷೇರಿನ ಮೌಲ್ಯ 5. ರೂ.ಗಳಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ನಿರ್ದೇಶಕರು, ಖಾಯಂ ಉದ್ಯೋಗಿ ಇದಕ್ಕೆ ಅರ್ಹರು.

Advertisement

Udayavani is now on Telegram. Click here to join our channel and stay updated with the latest news.

Next