Advertisement

ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಇನ್ಫಿಗೆ 3ನೇ ಸ್ಥಾನ

10:03 AM Sep 25, 2019 | sudhir |

ಹಲವು ವರ್ಷಗಳ ನಂತರ ಮೊದಲ ಬಾರಿಗೆ ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕಂಪೆನಿಯೊಂದು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಅಮೆರಿಕದ ಫೋಬ್ಸ್ì ಬ್ಯುಸಿನೆಸ್‌ ನಿಯತಕಾಲಿಕೆ ಸಮೀಕ್ಷೆ ನಡೆಸಿದ್ದು. ಅದರಲ್ಲಿ ಕಂಡುಕೊಂಡಿದ್ದೇನು? ಮಾಹಿತಿ ಇಲ್ಲಿದೆ.

Advertisement

ಏನಿದು ಸಮೀಕ್ಷೆ ?
ಸಾರ್ವಜನಿಕ ವಲಯಗಳಲ್ಲಿ ಅತ್ಯುತ್ತಮ ವ್ಯಾವಹಾರಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳನ್ನು ಗುರುತಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶ. ಕಂಪೆನಿಗಳ ಗುಣಮಟ್ಟವನ್ನು ಈ ಸಮೀಕ್ಷೆ ನಿರ್ಧರಿಸುತ್ತದೆ. ಅಮೆರಿಕಾದ ವ್ಯವಹಾರಿಕ ನಿಯತಕಾಲಿಕೆ ಫೋಬ್ಸ್ì ಹಾಗೂ ಜರ್ಮನ್‌ ಸ್ಟಾಟಿಸ್ಟಾ ಕಂಪೆನಿ ಸಮೀಕ್ಷೆಯನ್ನು ನಡೆಸಿದ್ದು, ವಾರ್ಷಿಕ ಅತ್ಯುತ್ತಮ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಾನದಂಡಗಳೇನು ?
ಕಂಪೆನಿಗಳು ಹೇಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ, ಕಂಪೆನಿಯ ಸಾಮಾಜಿಕ ನಡವಳಿಕೆ ಹೇಗಿದೆ, ಕಂಪೆನಿಗಳ ಉತ್ಪನ್ನಗಳ ಮತ್ತು ಸೇವೆಗಳ ಗುಣಮಟ್ಟ ಹಾಗೂ ಸಮಾಜದಲ್ಲಿ ಉದ್ಯೋಗದಾತರಾಗಿ ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶಗಳ ಆಧಾರದ ಮೇಲೆ ಶ್ರೇಯಾಂಕವನ್ನು ನಿರ್ಧರಿಸಲಾಗಿದೆ.

15 ಸಾವಿರ ಜನರ ಪ್ರತಿಕ್ರಿಯೆ
ಕಂಪೆನಿಗಳ ಗುಣಮಟ್ಟವನ್ನು ಅಳೆಯಲು ಸ್ಟ್ಯಾಟಿಸ್ಟಾ ಹಾಗೂ ಫೋಬ್ಸ್ì ಸಂಸ್ಥೆ 50 ಕ್ಕೂ ಹೆಚ್ಚು ದೇಶಗಳಿಂದ ದತ್ತಾಂಶವನ್ನು ಸಂಗ್ರಹ ಮಾಡಿದ್ದು, 15 ಸಾವಿರ ಜನರ ಪ್ರತಿಕ್ರಿಯೆಯನ್ನು ಕಲೆಹಾಕಿದೆ.

2000 ಕಂಪೆನಿಗಳ ಸ್ಪರ್ಧೆ
ಈ ಸಮೀಕ್ಷೆಯಲ್ಲಿ ಒಟ್ಟು 2000 ಕಂಪೆನಿಗಳು ಭಾಗವಹಿಸಿದ್ದು, ಅವುಗಳ ಪೈಕಿ ಸಾರ್ವಜನಿಕ ವ್ಯವಹಾರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 250 ಕಂಪೆನಿಗಳನ್ನು ಫೋಬ್ಸ್ì ನಿಯತಕಾಲಿಕೆ ಆರಿಸಿದೆ.

Advertisement

ಅಗ್ರಸ್ಥಾನ ಪಡೆದ ಇನ್ಫೋಸಿಸ್‌
ಹೌದು ಹಲವು ವರ್ಷಗಳ ನಂತರ ಮೊದಲ ಬಾರಿಗೆ ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕಂಪೆನಿ ಇನ್ಫೋಸಿಸ್‌ ಅಗ್ರಸ್ಥಾನ ಪಡೆದಿದ್ದು, ವಿಶ್ವದ ಐದು ಅತ್ಯುತ್ತಮ ಕಂಪೆನಿಗಳಲ್ಲಿ ಇನ್ಫೋಸಿಸ್‌ ಕೂಡ ಒಂದಾಗಿದೆ.

ಟಾಪ್‌ 5 ಕಂಪೆನಿಗಳಲ್ಲಿ 3 ನೇ ಸ್ಥಾನ
ಟಾಪ್‌ 5 ಕಂಪೆನಿಗಳ ಸಾಲಿನಲ್ಲಿ ಇನ್ಫೋಸಿಸ್‌ ಸಂಸ್ಥೆ ಮೂರನೇ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿ 31 ನೇ ಸ್ಥಾನ ಪಡೆದುಕೊಂಡಿತ್ತು ಎಂದು ವರದಿ ತಿಳಿಸಿದೆ.

ಟಾಟಾ-ಟಿಸಿಎಸ್‌ಗೆ 19 ನೇ ಸ್ಥಾನ
ಇನ್ಫೋಸಿಸ್‌ ಸೇರಿದಂತೆ ಇನ್ನು ಹತ್ತು ಹಲವಾರು ಕಂಪೆನಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಟೊಯೊಟೋ ಮೋಟಾರ್ 8 ನೇ ಸ್ಥಾನ ಪಡೆದುಕೊಂಡಿದ್ದರೆ, ಟಾಟಾ-ಟಿಸಿಎಸ್‌ ಕಂಪೆನಿಗಳು 19ನೇ ಸ್ಥಾನದಲ್ಲಿವೆ.

ಟಾಪ್‌ ಟೆನ್‌ ಕಂಪೆನಿಗಳು :
– ವೀಸಾ
– ಫೆರಾರಿ
– ಇನ್ಫೋಸಿಸ್‌
– ನೆಟ್‌ಫ್ಲಿಕ್ಸ್‌
– ಪೇಪಾಲ್‌
– ಮೈಕ್ರೋಸಾಫ್ಟ್
– ವಾಲ್ಟ್ ಡೆಸ್‌ನಿ
– ಟೊಯೊಟೋ ಮೋಟಾರ್
– ಮಾಸ್ಟರ್‌ಕಾರ್ಡ್‌
– ಕಾಸ್ಟೊ$Rà ಹೋಲ್‌ಸೇಲ್‌

Advertisement

Udayavani is now on Telegram. Click here to join our channel and stay updated with the latest news.

Next