Advertisement
ಶನಿವಾರ ಸಂಜೆ 6.30ರ ಸುಮಾರಿಗೆ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಆಗಮಿಸಿದ್ದರು. ಸುಮಾರು 30-45 ನಿಮಿಷ ಅಲ್ಲಿದ್ದು, ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಬಂದ ದಾರಿಯಲ್ಲಿ ಮರಳಿದ್ದರು.
ಶಂಕಿತರು ಭೇಟಿ ನೀಡಿದ ಮಾಹಿತಿ ತಿಳಿಯುತ್ತಲೇ ಸುಬ್ರಹ್ಮಣ್ಯ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಸಿಬಂದಿ ಆಗಮಿಸಿ ಆ ಮನೆಯವರಿಂದ ಮತ್ತು ಪರಿಸರದವರಿಂದ ಮಾಹಿತಿ ಕಲೆ ಹಾಕಿದರು. ರವಿವಾರ ಬೆಳಗ್ಗೆ ನಕ್ಸಲ್ ನಿಗ್ರಹ ದಳದ ಡಿವೈಎಸ್‌ಪಿ ರಾಘವೇಂದ್ರ, ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಅರುಣ್ ನಾಗೇಗೌಡ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಕಾರ್ತಿಕ್ ಸೇರಿದಂತೆ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ಸಿಬಂದಿ, ಗುಪ್ತದಳದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು. ಕೂಜಿಮಲೆಗೆ ಭೇಟಿ ಕೊಟ್ಟಿದ್ದೆವು…
ಶನಿವಾರ ಸಂಜೆ ಮಳೆ ಹನಿಯುತ್ತಿದ್ದಾಗ ಅರಣ್ಯ ಪ್ರದೇಶದಿಂದ ಕಾಡಂಚಿನ ಮನೆಯ ಬಳಿಗೆ ಶಂಕಿತರು ಆಗಮಿಸಿದ್ದು, ಶಂಕಿತರು ನಡೆದುಕೊಂಡು ಬರುವ ವೇಳೆ ತಂಡಕ್ಕೆ ವ್ಯಕ್ತಿಯೊಬ್ಬರು ಸಿಕ್ಕಿದ್ದು, ಆತನ ಬಳಿ ಮಾತನಾಡಿ ಬಳಿಕ ಅಲ್ಲಿಂದ ರಸ್ತೆಯ ಬದಿಯ ಮನೆಯೊಂದಕ್ಕೆ ತೆರಳುವವರಿದ್ದರು. ಆದರೆ ಆ ಮನೆಯ ವಠಾರಕ್ಕೆ ಸೋಲಾರ್ ಬೇಲಿ ಅಳವಡಿಸಿದ್ದರಿಂದ ಮತ್ತೊಂದು ಮನೆಗೆ ಭೇಟಿ ನೀಡಿದರು ಎನ್ನಲಾಗಿದೆ.
Related Articles
Advertisement
ಮುಂದುವರಿದ ಶೋಧಕಳೆದ ಶನಿವಾರ ಸಂಜೆ ಕೂಜಿಮಲೆಗೆ ನಕ್ಸಲರು ಭೇಟಿ ನೀಡಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಸೋಮವಾರ ಆರಂಭಿಸಿದ್ದ ಶೋಧ ಕಾರ್ಯ ರವಿವಾರವೂ ಮುಂದುವರಿದಿದೆ. ರವಿವಾರ ಶಂಕಿತರು ಭೇಟಿ ನೀಡಿದ ಅರಣ್ಯ ಪ್ರದೇಶದ ಆಸು ಪಾಸಿನಲ್ಲಿ ಶೋಧ ಕೈಗೊಳ್ಳಲಾಗಿದ್ದು, ಡ್ರೋಣ ಕೆಮರಾ ಬಳಸಿಯೂ ಶೋಧ ಕಾರ್ಯ ನಡೆಸಲಾಯಿತು.