Advertisement

ಬೂತ್‌ ಹೊರಗೆ ಮಾಹಿತಿ ಕೇಂದ್ರ: ಸೆಂಥಿಲ್‌

06:00 AM May 10, 2018 | |

ಮಂಗಳೂರು: ಜಿಲ್ಲೆಯಲ್ಲಿ ಶೇ. 80ರಷ್ಟು ಮತದಾರರಿಗೆ ಭಾವಚಿತ್ರವಿರುವ ಚೀಟಿ ವಿತರಿಸಲಾಗಿದೆ. ಮತದಾರರ ಚೀಟಿ ಇಲ್ಲದಿದ್ದರೂ ಮತದಾರರ ಗುರುತು ಚೀಟಿ ತೋರಿಸಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ. ಮತದಾರರಿಗೆ ನೆರವಾಗಲು ಮತಗಟ್ಟೆಯ ಹೊರಭಾಗದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ಇದರಲ್ಲಿ ಆಯಾ ಮತಗಟ್ಟೆಯ ಕ್ಷೇತ್ರದ ಬಗ್ಗೆ ವಿವರ, ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಲಗತ್ತಿಸಲಾಗುವುದು ಎಂದು ದ.ಕ. ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ಪರೀಕ್ಷಾ ಮತ
ಮತದಾರರು ವಿವಿಪ್ಯಾಟ್‌ನಲ್ಲಿ ಮತ ಚಲಾವಣೆ ಖಾತ್ರಿಪಡಿಸಿಕೊಳ್ಳುವಾಗ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಆಗಿಲ್ಲವೆಂದು ದೂರು ನೀಡಿದರೆ ಮತಗಟ್ಟೆಯ ಅಧ್ಯಕ್ಷಾಧಿಕಾರಿ ಮತದಾರನಿಂದ ಘೋಷಣೆ ಯನ್ನು ಪಡೆದು ಪರೀಕ್ಷೆ ಮತ (ಟೆಸ್ಟ್‌ ಓಟು) ಮಾಡಲು ಅವಕಾಶ ಕಲ್ಪಿಸುತ್ತಾರೆ. ಇದನ್ನು ಅಧ್ಯಕ್ಷಾಧಿ ಕಾರಿ ಹಾಗೂ ಚುನಾವಣಾ ಏಜೆಂಟ್‌ ಸಮ್ಮುಖ ದಲ್ಲಿ ನಡೆಸಲಾಗುವುದು. ಮತದಾರ ಸುಳ್ಳು ಮಾಹಿತಿ ನೀಡಿದಲ್ಲಿ ಐಪಿಸಿ ಕಲಂ 177ರ ಪ್ರಕಾರ 1,000 ರೂ. ದಂಡ ಹಾಗೂ ಜೈಲು ಶಿಕ್ಷೆ ಇದೆ ಎಂದವರು ಹೇಳಿದರು.

ಕ್ಲಿಷ್ಟ ಮತಗಟ್ಟೆಗಳು
ಜಿಲ್ಲೆಯಲ್ಲಿರುವ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳ ಪೈಕಿ 97 ಮತಗಟ್ಟೆಗಳಿಗೆ ವೆಬ್‌ ಕೆಮರಾಗಳನ್ನು ಅಳವಡಿಸ ಲಾಗಿದೆ. 221 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್ಸ್‌ ನೇಮಕ ಮಾಡಲಾಗಿದೆ ಹಾಗೂ ಉಳಿದ ಮತಗಟ್ಟೆಗಳಿಗೆ ಕೇಂದ್ರ ಅರೆ ಸೈನಿಕ ಪಡೆ ಸಿಬಂದಿ ಮತ್ತು ವೀಡಿಯೋಗ್ರಾಫರ್‌ಗಳನ್ನು ನಿಯೋ ಜಿಸ ಲಾಗುವುದು. ಈಗಾಗಲೇ 8 ಕ್ಷೇತ್ರಗಳಿಗೆ 6 ಮಂದಿ ಚುನಾವಣಾ ವೀಕ್ಷಕರಿದ್ದು, ಇದರೊಂದಿಗೆ ಮತ ಎಣಿಕೆಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ. ತಾಂತ್ರಿಕ ದೋಷಗಳು ಸಂಭವಿಸಿದಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಶೇ. 40ರಷ್ಟು ಇವಿಎಂ ಮತ್ತು ವಿವಿಪ್ಯಾಟ್‌ ಗಳನ್ನು ಹಾಗೂ ಶೇ.30ರಷ್ಟು ಕಂಟ್ರೋಲ್‌ ಯೂನಿಟ್‌ಗಳನ್ನು ಮೀಸಲಿರಿಸಲಾಗಿದೆ ಎಂದರು.

ಜಿಪಿಎಸ್‌ ವ್ಯವಸ್ಥೆ
ಮತದಾನದ ಕೊನೆಯ 72 ಗಂಟೆಗಳಲ್ಲಿ ವಿವಿಧ ಜಾಗೃತ ತಂಡಗಳು ಸಕ್ರಿಯವಾಗಿ ಕಾರ್ಯ ನಿರ್ವ ಹಿಸುವಂತೆ ಕ್ರಮ ವಹಿಸಲಾಗಿದೆ. ಜಿಪಿಎಸ್‌ ಆಧಾರಿತ ವಾಹನ ವ್ಯವಸ್ಥೆ ಮಾಡಲಾಗಿದ್ದು, ಅವರ ಚಲನ ವಲನ ಗಳನ್ನು ಜಿಲ್ಲೆಯ ಕಂಟ್ರೋಲ್‌ರೂಂನಿಂದ ವೀಕ್ಷಿಸ ಲಾಗುವುದು. ಮತಗಟ್ಟೆಗಳಲ್ಲಿ ಸಮಸ್ಯೆ ತಲೆ  ದೋರಿ ದರೆ ಸಮೀಪವಿರುವ ಜಾಗೃತ ತಂಡಕ್ಕೆ ಜಿಪಿಎಸ್‌ ಮೂಲಕ ಮಾಹಿತಿ ನೀಡಲಾಗುವುದು ಎಂದರು.

ಮತದಾರರಿಗೆ ಬಸ್‌ ವ್ಯವಸ್ಥೆ
ಬಸ್‌ ಸಂಚಾರ ವಿರಳವಿರುವ ಕಡೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗುವುದು. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮುಂತಾದ ಕ್ಷೇತ್ರಗಳ 23 ರೂಟ್‌ಗಳನ್ನು ಗುರುತಿಸಲಾಗಿದೆ. 2ರಿಂದ 3 ಬಾರಿ ಬಸ್‌ ಸಂಚರಿಸುತ್ತವೆ. ಮತಗಟ್ಟೆಗಳಿಗೆ ಮತದಾನ ಸಾಮಗ್ರಿಗಳು ಹಾಗೂ ಸಿಬಂದಿ ಒಯ್ಯುವ ಬಸ್‌ಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

Advertisement

ಮೊಬೈಲ್‌ಗೆ ಅವಕಾಶವಿಲ್ಲ
ಮತದಾರ ಮತಗಟ್ಟೆಯೊಳಗೆ ಮೊಬೈಲ್‌ ಫೋನ್‌ ಒಯ್ಯಲು ಅವಕಾಶವಿಲ್ಲ. ಮತಗಟ್ಟೆ ಅಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ ಅನ್ನು ಸೈಲೆಂಟ್‌ ಮೋಡ್‌ನ‌ಲ್ಲಿ ಇರಿಸಬೇಕು ಹಾಗೂ ಇದನ್ನು ಚುನಾವಣಾ ಕರ್ತವ್ಯದ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಚುನಾವಣಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next