Advertisement

Central Government ಯೋಜನೆಗಳ ಮಾಹಿತಿ ಗ್ರಾ.ಪಂ.ಗಳಲ್ಲೂ ಸಿಗಲಿ: ಸಚಿವೆ ಶೋಭಾ

11:02 PM Sep 25, 2023 | Team Udayavani |

ಮಣಿಪಾಲ: ಕೇಂದ್ರ ಸರಕಾರದ ಸಾಲಸೌಲಭ್ಯ ಯೋಜನೆ ಗಳ ಮಾಹಿತಿಯನ್ನು ಎಲ್ಲ ಗ್ರಾ.ಪಂ.ಗಳಲ್ಲಿ ಸಿಗುವಂತೆ ಮಾಡ ಬೇಕು ಮತ್ತು ಬ್ಯಾಂಕ್‌ಗಳಲ್ಲಿಯೂ ಯೋಜನೆಗಳ ಮಾಹಿತಿ ಕರಪತ್ರ ಇಡುವ ವ್ಯವಸ್ಥೆ ಆರಂಭಿಸ ಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.

Advertisement

ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಭೆ ನಡೆಸಿ, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಮುದ್ರಾ, ಪಿಎಂ ಸ್ವನಿಧಿ ಸಹಿತ ವಾಗಿ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇರುವುದಿಲ್ಲ. ಇಂತಹ ಯೋಜನೆ ಯಡಿ ಬ್ಯಾಂಕ್‌ಗಳಿಂದ ನೀಡುವ ಸಾಲಸೌಲಭ್ಯದ ಬಗ್ಗೆ ಕರಪತ್ರ ಸಿದ್ಧಪಡಿಸಿ ಗ್ರಾ.ಪಂ.ಗಳಲ್ಲಿ ಇರಿಸಿ ನಿತ್ಯ ಅಲ್ಲಿಗೆ ಬರುವ ಜನರಿಗೆ ಅದು ಸಿಗು ವಂತೆ ಮಾಡಬೇಕು. ಹಾಗೆಯೇ ಬ್ಯಾಂಕ್‌ಗಳಲ್ಲೂ ಸರಕಾರದ ಯೋಜನೆ ಗಳ ಬಗ್ಗೆ ಸರಳೀಕೃತ ಮಾಹಿತಿಯನ್ನು ಒದಗಿಸಬೇಕು ಎಂದರು.

ಕನ್ನಡಿಗ ಸಿಬಂದಿ: ಸೂಚನೆ
ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಭಾಷೆ ಮಾತನಾಡುವವರ ಕೊರತೆ ಇರುವು ದರಿಂದ ಬ್ಯಾಂಕಿಂಗ್‌ ಪರೀಕ್ಷೆಗೆ ನಮ್ಮ ಲ್ಲಿಂದಲೂ ಹೆಚ್ಚೆಚ್ಚು ಮಂದಿ ಆಯ್ಕೆ ಯಾಗುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲು ತರಬೇತಿ ಸಂಸ್ಥೆಗಳನ್ನು ಸಜ್ಜುಗೊಳಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವವರು ಇಲ್ಲದೇ ಇದ್ದಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಭಾಷಾಂತರ ಮಾಡುವವರೊಬ್ಬರನ್ನು ನೇಮಿಸಿಕೊಳ್ಳಬೇಕು ಎಂದರು.

ವರದಿ ಸಲ್ಲಿಸಿ
ಪಿಎಂಇಜಿಪಿ, ಕೃಷಿ ಮೂಲ ಸೌಕರ್ಯ ಯೋಜನೆ, ಮೀನುಗಾರಿಕೆ ಚಟುವಟಿಕೆ ಗಳಿಗೆ ಕೆಸಿಸಿ, ಮುದ್ರಾ, ಪಿಎಂಸ್ವನಿಧಿ, ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಹಾಗೂ ಅಟಲ್‌ ಪಿಂಚಣಿ ಯೋಜನೆಯಡಿಯಲ್ಲಿ ಯಾವುದೇ ಅರ್ಜಿಯನ್ನು ಸಕಾರಣ ಇಲ್ಲದೇ ಬಾಕಿ ಇರಿಸಿಕೊಳ್ಳುವುದು, ತಿರಸ್ಕರಿಸು ವುದು ಆಗಬಾರದು. ಬ್ಯಾಂಕ್‌ ಹಂತದಲ್ಲಿ ಯಾವುದೇ ಅರ್ಜಿಯನ್ನು ಸೂಕ್ತ ಕಾರಣ ಇಲ್ಲದೆ ತಿರಸ್ಕರಿಸಬಾರದು. ಮುದ್ರಾ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಒದಗಿಸಬೇಕು ಎಂದರು.

Advertisement

ಆಹಾರ ಸಂಸ್ಕರಣೆಗೆ ಆದ್ಯತೆ ಇರಲಿ
ಕೃಷಿ ಮೂಲಸೌಕರ್ಯ ಯೋಜನೆ ಯಡಿ ಕೇವಲ ಗೋದಾಮುಗಳಿಗೆ ಸಾಲಸೌಲಭ್ಯ ನೀಡುವುದಲ್ಲ. ಆಹಾ ರೋತ್ಪನ್ನ ಸಂಸ್ಕರಣ ಘಟಕಗಳಿಗೆ ಸಾಲ ಸೌಲಭ್ಯ ನೀಡಬೇಕು. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಾಗು ತ್ತದೆ. 125 ಅರ್ಜಿಯಲ್ಲಿ 104 ವಿಲೇವಾರಿ ಮಾಡಿ 108 ಕೋಟಿ ರೂ. ಸಾಲವನ್ನು ಕೇವಲ ಗೋದಾಮು ಸ್ಥಾಪನೆಗೆ ನೀಡಿರುವುದು ಸರಿಯಲ್ಲ. ಮುಂದೆ ಸೂಕ್ತ ರೀತಿಯಲ್ಲಿ ವಿಂಗಡನೆ ಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆನರಾ ಬ್ಯಾಂಕ್‌ ಉಡುಪಿಯ ಪ್ರಾದೇಶಕ ವ್ಯವಸ್ಥಾಪಕ ಶ್ರೀಜಿತ್‌ ಕೆ. ಮಾತನಾಡಿ, ವರ್ಷದಿಂದ ವರ್ಷಕ್ಕೆ ಒಟ್ಟಾರೆ ಜಿಲ್ಲೆ ಬ್ಯಾಂಕ್‌ಗಳ ವ್ಯವಹಾರ ದಲ್ಲಿ ಶೇ. 9ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ ಸಾಲಸೌಲಭ್ಯ ವಿತರಣೆ ವ್ಯವಸ್ಥೆಯಲ್ಲೂ ಶೇ.7.52ರಷ್ಟು ವೃದ್ಧಿ ಯಾಗಿದೆ. ಬ್ಯಾಂಕ್‌ ಠೇವಣಿಯಲ್ಲೂ ಶೇ.9.85ರಷ್ಟು ಹೆಚ್ಚಾಗಿದೆ ಎಂದರು.

ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ಆರ್‌ಬಿಐ ಎಕ್ಸಿಕ್ಯೂಟಿವ್‌ ತನು ನಂಜಪ್ಪ, ನಬಾರ್ಡ್‌ ಪ್ರತಿನಿಧಿ ಸಂಗೀತಾ ಕರ್ತಾ, ಯೂನಿಯನ್‌ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮನೋಜ್‌ ಸಾಲ್ಯಾನ್‌, ಕರ್ಣಾಟಕ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ರಾಜಗೋಪಾಲ, ಎಸ್‌ಸಿಡಿಸಿಸಿ ಬ್ಯಾಂಕ್‌ ಮಂಗಳೂರು ಕೇಂದ್ರ ಕಚೇರಿಯ ಡಿಜಿಎಂ ನಿತ್ಯಾನಂದ ಉಪಸ್ಥಿತರಿದ್ದರು. ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಪಿ.ಎಂ. ಪಿಂಜಾರ ಸ್ವಾಗತಿಸಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next