Advertisement
ಪೋಕೋ ಆರಂಭಿಕ ಮತ್ತು ಮಧ್ಯಮ ದರ್ಜೆಯ ಮೊಬೈಲ್ ಫೋನ್ ಗಳಿಗೆ ಹೆಸರಾಗಿದೆ. ಪೋಕೋ ಸಿ 50 ಮೊಬೈಲ್, ಕರೆ ಮಾಡುವುದಕ್ಕೆ, ವಾಟ್ಸಪ್ ನೋಡುವುದಕ್ಕೆ ಒಂದು ಸಾಧಾರಣ ಫೋನ್ ಇದ್ದರೆ ಸಾಕು ಎನ್ನುವಂಥ ಗ್ರಾಹಕರಿಗೆ ಸೂಕ್ತವಾದ ಫೋನ್ ಎನ್ನಬಹುದು.
Related Articles
Advertisement
ಕಾರ್ಯಾಚರಣೆ: ಈ ಫೋನ್ ಆಂಡ್ರಾಯ್ಡ್ 23 ಗೋ ಎಡಿಷನ್ ಹೊಂದಿದೆ. ಮಿಡಿಯಾಟೆಕ್ ಹೀಲಿಯೋ ಎ22 ಪ್ರೊಸೆಸರ್ ಹೊಂದಿದೆ. 32 ಜಿಬಿ ಆಂತರಿಕ ಸಂಗ್ರಹದಲ್ಲಿ 23 ಜಿಬಿ ಗ್ರಾಹಕರ ಬಳಕೆಗೆ ದೊರಕುತ್ತದೆ. ಹೆಚ್ಚುವರಿ ಸಂಗ್ರಹ ಬೇಕೆಂದರೆ 512 ಜಿಬಿವರೆಗೂ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳಬಹುದು. ಇದು ಆರಂಭಿಕ ಬೆಲೆಯ ಫೋನ್ ಆದ್ದರಿಂದ ಇದರ ಕಾರ್ಯಾಚರಣೆ ಸಹ ಸೀಮಿತವಾಗಿದೆ. ಸಾಮಾನ್ಯ ಕರೆ, ವಿಡಿಯೋ ಕಾಲ್, ಯೂಟ್ಯೂಬ್ ವೀಡಿಯೋ ವೀಕ್ಷಣೆ, ಸಂಗೀತ ಆಲಿಸಲು, ಮೇಲ್ ಗಳನ್ನು ಓದಲು, ವಾಟ್ಸಪ್ ನೋಡಲು ಸಾಕು. ಒಟ್ಟಿಗೇ ಕೆಲವು ಆಪ್ ಗಳನ್ನು ತೆರೆದಾಗ ಇದು ನಿಧಾನವಾಗುತ್ತದೆ. ಹಾಗಾಗಿ ಸೀಮಿತ ಬಳಕೆದಾರರಿಗೆ ಇದು ಸೂಕ್ತವಾಗಿದೆ.
ಕ್ಯಾಮರಾ: ಇದು 8 ಮೆಪಿ. ಮುಖ್ಯ ಕ್ಯಾಮರಾ ಹಾಗೂ 0.8 ಮೆ.ಪಿ. ಹೆಚ್ಚುವರಿ ಕ್ಯಾಮರಾ ಹೊಂದಿದೆ. ಆರಂಭಿಕ ದರ್ಜೆಯ ಫೋನ್ ಗಳಲ್ಲಿ ಹೆಚ್ಚಿನ ಕ್ಯಾಮರಾ ಗುಣಮಟ್ಟ ನಿರೀಕ್ಷೆ ಮಾಡುವಂತಿಲ್ಲ. ಹೆಚ್ಚು ಬೆಳಕಿರುವೆಡೆ, ಹೊರಾಂಗಣದಲ್ಲಿ ಫೋಟೋಗಳು ಒಂದು ಹಂತಕ್ಕೆ ಚೆನ್ನಾಗಿ ಮೂಡಿಬರುತ್ತವೆ. ಈ ದರಕ್ಕೆ ಓಕೆ ಎನ್ನಬಹುದಾದ ಕ್ಯಾಮರಾ ಇದೆ.
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 10 ವ್ಯಾಟ್ಸ್ ಚಾರ್ಜರ್ ಅನ್ನು ಬಾಕ್ಸ್ ನೊಂದಿಗೆ ನೀಡಲಾಗಿದೆ. ಮೈಕ್ರೋ ಯುಎಸ್ ಬಿ ಕೇಬಲ್ ಇದೆ. ಈಗೆಲ್ಲ ಟೈಪ್ ಸಿ ಪೋರ್ಟ್ ಸಾಮಾನ್ಯವಾಗಿರುವುದರಿಂದ ಟೈಪ್ ಸಿ ಪೋರ್ಟ್ ನೀಡಬಹುದಾಗಿತ್ತು. 5000 ಎಂಎಎಚ್ ಬ್ಯಾಟರಿ, ಇದು ಹೆಚ್ಚು ಸಾಮರ್ಥ್ಯದ ಫೋನ್ ಅಲ್ಲವಾದ್ದರಿಂದ, ಸಾಧಾರಣ ಬಳಕೆಗೆ ಒಂದೂವರೆಯಿಂದ ಎರಡು ದಿನ ಬಾಳಿಕೆ ಬರುತ್ತದೆ. ಆದರೆ ಬ್ಯಾಟರಿ ಶೇ. 1 ರಿಂದ ಪೂರ್ತಿ ಚಾರ್ಜ್ ಆಗಲು ಎರಡು ಗಂಟೆ ತೆಗೆದುಕೊಳ್ಳುತ್ತದೆ.
ಕೀ ಪ್ಯಾಡ್ ಗಿಂತ ಸ್ವಲ್ಪ ಹೆಚ್ಚಿನದಾದ ಫೋನ್ ಬೇಕು. ಹೆಚ್ಚು ಬಳಕೆ ಮಾಡುವುದಿಲ್ಲ. ಒಂದು ಆರಂಭಿಕ ದರ್ಜೆಯ ಫೋನ್ ಬೇಕು ಎನ್ನುವವರು ಪೋಕೋ ಸಿ 50 ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ