Advertisement
1964ರ ಜೂ. 8ರಂದು ಜನಿಸಿದ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ಹರೀಶ ಆಚಾರ್ಯ. ಅವರನ್ನು ಶ್ರೀವಾಮನತೀರ್ಥ ಪರಂಪರೆಯ ಶೀರೂರು ಮಠದ 30ನೆಯ ಸ್ವಾಮೀಜಿಯಾಗಿ 1971ರ ಜು. 2ರಂದು ದ್ವಂದ್ವ ಮಠವಾದ ಶ್ರೀ ಸೋದೆ ಮಠದ ಹಿಂದಿನ ಸ್ವಾಮೀಜಿ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ನಿಯುಕ್ತಿಗೊಳಿಸಿದ್ದರು.
ದೂರು, ಮರಣೋತ್ತರ ಪರೀಕ್ಷೆ
ಶ್ರೀಗಳ ಮರಣದ ಬಗ್ಗೆ ಪೂರ್ವಾಶ್ರಮದ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಮೆರವಣಿಗೆಯೊಂದಿಗೆ ಶ್ರೀಕೃಷ್ಣ ಮಠದ ರಥಬೀದಿ, ಶೀರೂರು ಮಠಕ್ಕೆ ಕರೆತಂದು ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ವೃಂದಾವನಸ್ಥಗೊಳಿಸಲಾಯಿತು.
Related Articles
Advertisement
ವಿವಾದ: ಇತ್ತೀಚೆಗೆ ಶೀರೂರು ಮಠದ ಪಟ್ಟದ ದೇವರನ್ನು ಶ್ರೀಕೃಷ್ಣ ಮಠದಿಂದ ಶ್ರೀ ಲಕ್ಷ್ಮೀವರತೀರ್ಥರಿಗೆ ಹಿಂದಿರುಗಿಸದೆ ಇರಲು ಇತರ ಏಳು ಮಠಾಧೀಶರು ಶ್ರೀಕೃಷ್ಣ ಮಠದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಂಡ ಬಳಿಕ ವಿವಾದ ಉಂಟಾಗಿತ್ತು. ಈ ತೀರ್ಮಾನದ ವಿರುದ್ಧ ಕ್ರಿಮಿನಲ್ ದಾವೆ ಹೂಡುವುದಾಗಿ ಶೀರೂರು ಶ್ರೀಗಳು ಸೋಮವಾರ ತಿಳಿಸಿದ್ದರು.
ಆ ಎರಡು ದಿನಗಳು…ಜುಲೈ 18
– ಮುಂಜಾವ 1.05ಕ್ಕೆ ಮಣಿಪಾಲ ಆಸ್ಪತ್ರೆಗೆ ದಾಖಲು
– ಇಡೀ ದಿನ ಶ್ರೀಗಳ ಆರೋಗ್ಯ ಗಂಭೀರವೆಂಬ ಸುದ್ದಿ.
– ರಾತ್ರಿ ವೇಳೆ ಯಾವುದೇ ಮಾಹಿತಿ ನೀಡಲು ವೈದ್ಯರ ನಿರಾಕರಣೆ. ಜುಲೈ 19
– ಬೆಳಗ್ಗೆ 8.30ರ ವೇಳೆಗೆ ಅಸ್ತಂಗತರಾದ ಘೋಷಣೆ
– ಬೆಳಗ್ಗೆ 10.45: ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಂದ ಮಾಧ್ಯಮಗಳಿಗೆ ಮಾಹಿತಿ. ಶಂಕಿತ ವಿಷಕಾರಕ ಅಂಶಗಳು ಪತ್ತೆಯಾದ ವಿಚಾರ ಬಹಿರಂಗ.
– 11.00: ಶವಾಗಾರಕ್ಕೆ ರವಾನೆ.
– 3.45: ಶವಾಗಾರದಿಂದ ರಥಬೀದಿಗೆ ಮೆರವಣಿಗೆ.
– 4.25: ರಥಬೀದಿ ಪ್ರವೇಶ
– 6.00: ಶೀರೂರು ಮೂಲ ಮಠಕ್ಕೆ ಪ್ರಯಾಣ.
– 7.00: ಮೂಲಮಠ ತಲುಪಿ 8 ಗಂಟೆಗೆ ವೃಂದಾವನ ಪ್ರವೇಶ.