Advertisement

ಉಪ ಚುನಾವಣೆ ಪ್ರಭಾವ, ಎಲ್ಲ ಆದೇಶಕ್ಕೂ ತಡೆ

04:28 PM Feb 22, 2021 | Team Udayavani |

ಸಿಂಧನೂರು: ಸಾಮಾನ್ಯ ಸಂದರ್ಭದಲ್ಲಿ ಯಾವುದೇ ಆಯಕಟ್ಟಿನ ಸ್ಥಳಕ್ಕೆ ಮತ್ತೂಬ್ಬರ ವರ್ಗಾವಣೆಯಾದರೆ ದಿಢೀರ್‌ ಚಾರ್ಜ್‌ ಸ್ವೀಕರಿಸುತ್ತಾರೆ. ಸದ್ಯ ಯಾವುದೇ ಅಧಿಕಾರಿಗಳು ವರ್ಗಾವಣೆಯಾದರೂ ಅವರ ಆದೇಶಕ್ಕೆ ಮೌಖಿಕ ತಡೆ ಬೀಳುತ್ತಿದೆ.

Advertisement

ಮಸ್ಕಿ ಬೈ ಎಲೆಕ್ಷನ್‌ ಪ್ರಭಾವ ಸಿಂಧನೂರು ತಾಲೂಕಿನ ಮೇಲೂ ಬೀರಲಾರಂಭಿಸಿದ್ದು, ಸರಕಾರದಿಂದ ಆದೇಶಗಳು ಹೊರ ಬಿದ್ದರೂ ಸ್ಥಳೀಯವಾಗಿ ತಡೆ ಹಿಡಿಯುವ ಶಕ್ತಿಗಳ ಕೈ ಮೇಲಾಗುತ್ತಿದೆ. ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಾಲೂಕಿನ 5 ಗ್ರಾಮ ಪಂಚಾಯಿತಿಗಳು ಹಾಗೂ ಅದರ ವ್ಯಾಪ್ತಿಯ ಹಳ್ಳಿಗಳು ಒಳಪಟ್ಟಿವೆ. ಅದರಲ್ಲಿ ಪ್ರಮುಖ ಹೋಬಳಿಗಳೇ ತಾಲೂಕಿನಲ್ಲಿವೆ.

ಇದರ ಪರಿಣಾಮ ತಾಲೂಕಿನ ಮೇಲಾಗುತ್ತಿದ್ದು, ಅಧಿಕಾರಿಗಳು ಯಾರು ಇರಬೇಕೆಂಬುದನ್ನು ನಿರ್ಧರಿಸುವ ಶಕ್ತಿ ಮಸ್ಕಿ ಕ್ಷೇತ್ರದ ಪ್ರಭಾವಿಯ ಅಂಗಳಕ್ಕೆ ಜಿಗಿದಿದೆ. ಇದಕ್ಕೆ ಪೂರಕವೆಂಬಂತೆ ಸರಕಾರದಿಂದ ಹೊರಡಿಸಲಾದ ಬಹುತೇಕ ಆದೇಶಗಳಿಗೆ ತಡೆ ಬೀಳಲಾರಂಭಿಸಿದೆ.

ಏನೇನು ತಡೆ?: ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ರಾಘವೇಂದ್ರ ಅವರ ಸ್ಥಾನಕ್ಕೆ ತಾರಾಬಾಯಿ ಎಂಬುವರನ್ನು ನೇಮಿಸಿ ಪೊಲೀಸ್‌
ಇಲಾಖೆಯ ಐಜಿ ಆದೇಶ ಹೊರಡಿಸಿದ್ದರು. ಇದು ಜಾರಿಗೆ ಬರಲೇ ಇಲ್ಲ. ಪರಿಷ್ಕರಿಸಿದ ಆದೇಶವೂ ಅಧಿ ಕೃತವಾಗಿ ಹೊರ ಬಿದ್ದಿಲ್ಲ. ಡಿವೈಎಸ್ಪಿ ವಿಶ್ವನಾಥ
ಕುಲಕರ್ಣಿ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಸಿಒಡಿ ವಿಭಾಗದಲ್ಲಿದ್ದ ಗೀತಾ ಅವರನ್ನು ನೇಮಿಸಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿತ್ತು.

ಇದು ಕೂಡ ಜಾರಿಯಾಗಿಲ್ಲ. ಮುನಿರಾಬಾದ್‌-ಮೆಹಬೂಬನಗರ ರೈಲ್ವೆ ವಿಭಾಗದ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಶ್ರುತಿ ಅವರನ್ನು ಪ್ರಭಾರ ಸ್ವಾ ಧೀನಾ
ಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆಗಲೂ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ಈ ಹುದ್ದೆಯ ಚಾರ್ಜ್‌ ಹಸ್ತಾಂತರ
ಮಾಡಿಲ್ಲ.

Advertisement

ಎಲ್ಲರೂ ತಡೀರಿ: ಮಸ್ಕಿ ಉಪಚುನಾವಣೆ ಘೋಷಣೆಯ ಸಂದರ್ಭ ಇರುವುದರಿಂದ ಸಿಂಧನೂರು ತಾಲೂಕಿನ ಯಾವುದೇ ಅಧಿಕಾರಿಯನ್ನು ಕೂಡ ವರ್ಗಾಯಿಸಿದಂತೆ ತಡೆ ಹಿಡಿಯುವ ಪ್ರಯತ್ನಗಳು ಸಾಗಿವೆ. ಅದರ ಫಲವಾಗಿ ಅಧಿಕಾರಿಗಳ ವರ್ಗಾವಣೆ ಆದೇಶ ಹೊರ ಬಿದ್ದ ಬಳಿಕವೂ ಆಯಾ ಇಲಾಖೆಯ ಮಂತ್ರಿಗಳ ಮೂಲಕ ಮೌಖಿಕ ಆದೇಶಗಳನ್ನು ಹೊರಡಿಸಿ ವರ್ಗಾವರ್ಗಿ ಆದೇಶಗಳನ್ನು ತಡೆ ಹಿಡಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಪೂರಕವೆಂಬಂತೆ ವರ್ಗಾವಣೆ ಆದೇಶ ಬಂದರೂ ಯಾವೊಬ್ಬ ಅಧಿಕಾರಿಯ ಸ್ಥಾನವೂ ಬದಲಾವಣೆಯಾಗದಿರುವುದು ಸಾಕ್ಷಿಯಾಗಿದೆ.

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next