Advertisement

Inflation : 2 ವರ್ಷ ಕನಿಷ್ಠಕ್ಕೆ ಹಣದುಬ್ಬರ

11:41 PM Jun 12, 2023 | Team Udayavani |

ಹೊಸದಿಲ್ಲಿ: ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಮೇ ನಲ್ಲಿ ಶೇ.4.25ಕ್ಕೆ ಇಳಿಕೆ ಯಾಗಿದೆ. ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಕನಿಷ್ಠ ಪ್ರಮಾಣದ ಹಣ ದುಬ್ಬರ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಆಹಾರ ಉತ್ಪನ್ನಗಳು, ಇಂಧನ ಬೆಲೆಗಳಲ್ಲಿ ಕಡಿಮೆಯಾಗಿದ್ದರಿಂದ ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದರ ಜತೆಗೆ ಆರ್‌ಬಿಐ ಮುಂದಿನ ತ್ತೈಮಾಸಿಕದಲ್ಲಿ ಕೂಡ ಬಡ್ಡಿದರ ಏರಿಕೆ ಮಾಡದಿರುವ ಸಾಧ್ಯತೆಯೂ ಇರುವುದರಿಂದ ಅರ್ಥ ವ್ಯವಸ್ಥೆಯ ಮೇಲೆ ಧನಾ ತ್ಮಕ ಪರಿಣಾಮ ಬೀರಿದೆ ಎಂದು ಹೇಳಲಾ ಗುತ್ತಿದೆ. ಗಮನಾರ್ಹ ಅಂಶವೆಂದರೆ ಸತತ ನಾಲ್ಕನೇ ಬಾರಿಗೆ ಚಿಲ್ಲರೆ ಮಾರಾಟ ಕ್ಷೇತ್ರದ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ.

Advertisement

2022ರ ಮೇನಲ್ಲಿ ಗ್ರಾಹಕರ ಮಾರುಕಟ್ಟೆ ಆಧಾರಿತ (ಸಿಪಿಐ) ಹಣದುಬ್ಬರ ಪ್ರಮಾಣ ಶೇ.7.04 ಇತ್ತು. ಆದರೆ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಅದರ ಪ್ರಮಾಣ ಶೇ.4.7 ಆಗಿತ್ತು. 2021ರ ಏಪ್ರಿಲ್‌ನಲ್ಲಿ ಶೇ.4.23 ಆಗಿತ್ತು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಉಲ್ಲೇಖೀಸಲಾಗಿದೆ. ಮೇ ನಲ್ಲಿ ಆಹಾರ ಕ್ಷೇತ್ರದಲ್ಲಿ ಶೇ.2.91, ಇಂಧನ ಮತ್ತು ವಿದ್ಯುತ್‌ ಕ್ಷೇತ್ರದಲ್ಲಿ ಶೇ.5.52 ಇದ್ದದ್ದು ಶೇ.4.64ಕ್ಕೆ ಹಣದುಬ್ಬರ ಇಳಿಕೆಯಾಗಿದೆ.

ಕೈಗಾರಿಕಾ ಉತ್ಪಾದನೆ ಶೇ.4.2ಕ್ಕೆ ಜಿಗಿತ
ದೇಶದ ಕೈಗಾರಿಕಾ ಉತ್ಪಾದನೆ (ಐಐಪಿ) ಏಪ್ರಿಲ್‌ನಲ್ಲಿ ಶೇ. 4.2ಕ್ಕೆ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಅದರ ಪ್ರಮಾಣ ಶೇ.1.7 ಆಗಿತ್ತು. ಉತ್ಪಾದನಾ ಕ್ಷೇತ್ರ ಮತ್ತು ಗಣಿ ಗಾರಿಕೆ ವಲಯದಲ್ಲಿನ ಸಾಧನೆ ಯಿಂದ ಈ ಗುರಿ ತಲುಪಲಾಗಿದೆ. ರಾಷ್ಟ್ರೀಯ ಸಾಂಖೀÂಕ ಸಂಸ್ಥೆ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ 2022ರ ಏಪ್ರಿಲ್‌ನಲ್ಲಿ ಉತ್ಪಾದನಾ ಕ್ಷೇತ್ರ ಶೇ.4.9ರಷ್ಟು ಏರಿಕೆಯಾಗಿದೆ. ಇಂಧನ ಕ್ಷೇತ್ರದಲ್ಲಿ ಶೇ.1.1 ಇಳಿಕೆಯಾಗಿದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next