ಹೊಸದಿಲ್ಲಿ: ತರಕಾರಿಗಳು ಹಾಗೂ ಪ್ರೊಟೀನ್ ಸಮೃದ್ಧ ವಸ್ತುಗಳ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.5.66ಕ್ಕಿಳಿದಿದೆ. ಇದು 15 ತಿಂಗಳಲ್ಲೇ ಕನಿಷ್ಠ ಎಂದು ಕೇಂದ್ರ ಸರಕಾರ ತಿಳಿಸಿದೆ. ಫೆಬ್ರವರಿ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಆಧರಿತ ಗ್ರಾಹಕ ದರ ಸೂಚ್ಯಂಕ ಶೇ.6.44 ಆಗಿತ್ತು. ವರ್ಷದ ಹಿಂದೆ ಇದು ಶೇ.6.95 ಆಗಿತ್ತು. ಈ ನಡುವೆ, ಭಾರತದ ಕೈಗಾರಿಕ ಉತ್ಪಾದನೆಯಲ್ಲಿನ ಪ್ರಗತಿಯು ಫೆಬ್ರವರಿ ತಿಂಗಳಲ್ಲಿ ಅಲ್ಪಮಟ್ಟಿಗೆ ಸುಧಾರಣೆ ಕಂಡಿದ್ದು, ಶೇ.5.6ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಇದು ಶೇ.5.5ರಷ್ಟಿತ್ತು.
ಇದೇ ವೇಳೆ2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6ಕ್ಕಿಳಿಯಲಿದೆ ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ. 2022ರಲ್ಲಿ ಜಿಡಿಪಿ ಪ್ರಗತಿ ದರ ಶೇ.6.6 ಆಗಿತ್ತು.