Advertisement

ಇನ್ಫಿನಿಕ್ಸ್‌ ಹಾಟ್‌ 30 5ಜಿ ಬಿಡುಗಡೆ

09:50 PM Jul 14, 2023 | Team Udayavani |

ಇನ್ಫಿನಿಕ್ಸ್‌ ಹಾಟ್‌ 30 5ಜಿ ಆ್ಯಂಡ್ರಾಯ್ಡ ಮೊಬೈಲ್‌ ಭಾರತದ ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆಯಾಗಿದೆ. 4ಜಿಬಿ ರ್ಯಾಮ್‌ ಮತ್ತು 128ಜಿಬಿ ಸ್ಟೋರೇಜ್‌ ಇರುವ ಮೊಬೈಲ್‌ ಬೆಲೆ 12,499 ರೂ. ಇದೆ.

Advertisement

ಅದೇ ರೀತಿ 8ಜಿಬಿ ರ್ಯಾಮ್‌ ಮತ್ತು 128ಜಿಬಿ ಸ್ಟೋರೇಜ್‌ ಇರುವ ಮೊಬೈಲ್‌ ಬೆಲೆ 13,499 ರೂ. ಇದೆ. ಡ್ನೂಯಲ್‌ ಸಿಮ್‌, 6.78 ಇಂಚು ಡಿಸ್‌ಪ್ಲೇ ಮತ್ತು 6,000 ಎಂಎಎಚ್‌ ಬ್ಯಾಟರಿ ಹೊಂದಿದೆ. ಅಲ್ಲದೆ 8 ಮೆಗಾಫಿಕ್ಸಲ್‌ ಫ್ರಂಟ್‌ ಕ್ಯಾಮೆರಾ ಹಾಗೂ 50 ಮೆಗಾಫಿಕ್ಸಲ್‌ ಡ್ಯುಯಲ್‌ ರೇರ್‌ ಕ್ಯಾಮೆರಾ ಹೊಂದಿದ್ದು, ಕೃತಕ ಬುದ್ದಿಮತ್ತೆಯಿಂದ ಇದು ಕಾರ್ಯನಿರ್ವಹಿಸಲಿದೆ. ಮುಂದಿನ ವಾರದಿಂದ ಮಾರಾಟ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next