Advertisement

ಸಾಂಕ್ರಾಮಿಕ ರೋಗ: ಇರಲಿ ಎಚ್ಚರ

10:30 PM Jun 16, 2019 | sudhir |

ಉಡುಪಿ: ಮಳೆಗಾಲ ಆರಂಭಗೊಂಡಿದೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಹಾವಳಿಯೂ ಹೆಚ್ಚುತ್ತಿದೆ.

Advertisement

ಜೂನ್‌ನಿಂದ ನವೆಂಬರ್‌ವರೆಗೆ ಮಲೇರಿಯಾ, ಡೆಂಗ್ಯೂ ಅತಿಹೆಚ್ಚು ಬಾಧಿಸುವ ಸಮಯವಾಗಿದೆ. ಇದೀಗ ನಗರಸಭೆ ವ್ಯಾಪ್ತಿಯಲ್ಲೇ ರೋಗರುಜಿನಗಳು ಹರಡುವ ಭೀತಿಯಿದೆ. ರಾಷಿøàಯ ಹೆ¨ªಾರಿ ಉದ್ದಕ್ಕೂ ಕಸ, ತ್ಯಾಜ್ಯಗಳ ರಾಶಿ ಬಿದ್ದುಕೊಂಡಿವೆ. ಅಂಗಡಿ ವ್ಯಾಪಾರಸ್ಥರು, ಹೊಟೇಲ್‌, ಮಾಂಸದಂಗಡಿಗಳ ತ್ಯಾಜ್ಯಗಳು ಎಲ್ಲವೂ ಬಿದ್ದುಕೊಂಡು ಗಬ್ಬು ವಾಸನೆ ಹೊಡೆಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲೂ ಕಾಣಸಿಗುತ್ತದೆ.

ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ
ರಾ.ಹೆ.66ರ ಶಾರದಾ ಹೋಟೆಲ್‌ ಸನಿಹದ ಹೆ¨ªಾರಿಯ ಎರಡು ಪಾರ್ಶ್ವಗಳ ಉದ್ದಕ್ಕೂ ಕಸ, ತ್ಯಾಜ್ಯಗಳು ತುಂಬಿಕೊಂಡಿವೆ.

ಎಳನೀರು ಸಿಪ್ಪೆ, ಟಯರ್‌ಗಳಲ್ಲಿ ನೀರು ನಿಂತಿದ್ದು, ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿದೆ. ಇವೆಲ್ಲ ಎದ್ದು ಕಾಣುತ್ತಿದ್ದರೂ ಕೂಡ ನಗರಸಭೆ ಮಾತ್ರ ಮೌನವಾಗಿದೆ.

ಪರಿಸರ ಸ್ವತ್ಛವಾಗಿರಲಿ
ಮುಚ್ಚಳವಿಲ್ಲದ ಓವರ್‌ಹೆಡ್‌ ಟ್ಯಾಂಕ್‌, ಸಿಮೆಂಟ್‌ ಟ್ಯಾಂಕ್‌ಗಳು, ತೆಂಗಿನ ಚಿಪ್ಪು, ಕುಡಿದು ಬಿಸಾಡಿದ ಎಳನೀರು ಚಿಪ್ಪು, ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್‌, ಟಯರ್‌ ಸಹಿತ ನೀರು ನಿಲ್ಲುವ ಅವಕಾಶವಿರುವ ಎಲ್ಲ ಪರಿಕರಗಳು ಸೊಳ್ಳೆಗಳ ಉತ್ಪತ್ತಿ ತಾಣಗಳು. ಮನೆ, ಪರಿಸರದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ಎಚ್ಚರ ವಹಿಸುವುದು ಅಗತ್ಯ. ಅದಕ್ಕಾಗಿ ಪರಿಸರದಲ್ಲಿ ಸ್ವತ್ಛತೆ ಕಾಪಾಡಬೇಕು.

Advertisement

ತಪಾಸಣೆ ಮಾಡಿಕೊಳ್ಳಿ
ಜ್ವರ ಯಾವುದೇ ಇರಲಿ. ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಖಾತ್ರಿ ಪಡಿಸಿ ಕೊಳ್ಳುವುದು ಒಳ್ಳೆಯದು. ಮಲೇರಿಯಾ/ ಡೆಂಗ್ಯೂ ಜ್ವರ ಕಂಡು ಬಂದಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಎಲ್ಲ ಪ್ರಾ. ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳಲ್ಲಿ ರಕ್ತ ತಪಾಸಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಸೊಳ್ಳೆಗಳಿಂದ ರಕ್ಷಣೆಗೆ ಹೀಗೆ ಮಾಡಿ
ಡೆಂಗ್ಯೂ ಹರಡುವ ಇಡಿಸ್‌ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಅನಾಫಿಲಿಸ್‌ ರಾತ್ರಿ ಸಮಯದಲ್ಲಿ ಕಚ್ಚುತ್ತದೆ. ಹೀಗಾಗಿ ಸೊಳ್ಳೆಗಳಿಂದ ರಕ್ಷಿಸಲು ಕೆಲವು ಕ್ರಮ ಪಾಲಿಸುವುದು ಅಗತ್ಯ.

ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿಗಳನ್ನು ಅಳವಡಿಸುವುದು, ಔಷಧ ಲೇಪನ ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು.

ಮನೆಯ ಸುತ್ತ ಫಾಗಿಂಗ್‌ ಮಾಡಿಸುವುದು, ಸೊಳ್ಳೆ ನಿರೋಧಕ ಔಷಧ ಸಿಂಪಡಣೆ, ಸೊಳ್ಳೆ ಪರದೆಗಳ ಬಳಕೆ, ಮಕ್ಕಳು/ ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪಯೋಗಿಸುವುದು.

ಮುನ್ನೆಚ್ಚರಿಕೆ ವಹಿಸಿ
ಓವರ್‌ಹೆಡ್‌ ಟ್ಯಾಂಕ್‌, ಸಿಮೆಂಟ್‌ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಿ.
ಮನೆ ಸುತ್ತ ಎಸೆದ ಪ್ಲಾಸ್ಟಿಕ್‌, ಟಯರ್‌, ತೆಂಗಿನ ಚಿಪ್ಪುಗಳನ್ನು ತತ್‌ಕ್ಷಣ ವಿಲೇವಾರಿ ಮಾಡಿ.  ಒಡೆದ ಪ್ಲಾಸ್ಟಿಕ್‌ ಬಕೇಟ್‌, ಪಾತ್ರೆಗಳನ್ನು ಕವುಚಿ ಹಾಕಬೇಕು.

ಮನೆ ಒಳಗೆ, ಹೊರಗೆ ಇರುವ ಹೂವಿನ ಕುಂಡ, ಮನಿಪ್ಲಾಂಟ್‌ ಚಟ್ಟಿಗಳು, ಏರ್‌ಕೂಲರ್‌ಗಳಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಇವುಗಳ ನೀರನ್ನು ಪ್ರತಿ ವಾರ ಖಾಲಿ ಮಾಡಬೇಕು.

ಕಟ್ಟಡ ನಿರ್ಮಾಣ ತಾಣಗಳಲ್ಲಿ ನೀರು ನಿಲ್ಲಲು ಅವಕಾಶ ನೀಡಬಾರದು.
ಬಾವಿ/ಕೆರೆಗಳಲ್ಲಿ ಗಪ್ಪಿ ಮೀನು ಸಾಕಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದು.

ಮನೆ-ಮನೆಗೆ ತೆರಳಿ ಜಾಗೃತಿ
ಜಿಲ್ಲೆಯಲ್ಲಿ ಮಲೇರಿಯ ಹರಡಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಮನೆ-ಮನೆಗೆ ತೆರಳಿ ಮಲೇರಿಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
-ಡಾ| ಪ್ರಶಾಂತ್‌, ಜಿಲ್ಲಾ ಮಲೇರಿಯಾ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next