Advertisement
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುತ್ತಿರುವ ರಾಜ್ಯಕ್ಕೆ ಈ ವಿಷಾಣು ಯುದ್ಧಾಭ್ಯಾಸ ಅನೇಕ ಸವಾಲುಗಳಿಗೆ ಉತ್ತರ ನೀಡಲಿದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ ಹಾದು ಹೋಗಿರುವುದರಿಂದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ವೈರಾಣು ಮತ್ತು ಸೂಕ್ಷ್ಮ ರೋಗಾಣುಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.
Related Articles
Advertisement
ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಕಾಯಿಲೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಕೆಎಫ್‌ಡಿ ಹಂದಿಗೋಡು, ಜೀಕಾ, ಮಲೇರಿಯಾ, ಆಂಥ್ರಾಕ್ಸ್ ಸೇರಿ ಅನೇಕ ಕಾಯಿಲೆಗಳಿಗೆ ನಮ್ಮ ಆಡಳಿತ ವ್ಯವಸ್ಥೆ ಸರಿಯಾಗಿ, ಸರಿಯಾದ ಸಮಯದಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗಳಿವೆ. ಅದಕ್ಕೆಲ್ಲ ಇದು ಪರಿಹಾರ ಒದಗಿಸಬಹುದು.
“ಕರ್ನಾಟಕದ ಸಹ್ಯಾದ್ರಿ ಬೆಟ್ಟಗಳಲ್ಲಿ ಪ್ರಾಣಿಜನ್ಯ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಯಾರೂ ಅಧ್ಯಯನ ಮಾಡಿಲ್ಲ. ಈಗಾಗಲೇ ಕೆಎಫ್‌ಡಿ, ಜೀಕಾ ಸೇರಿ ಅನೇಕ ಕಾಯಿಲೆಗಳು ಕಾಣಿಸಿಕೊಂಡಿವೆ. ಇನ್ನೂ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ರೀತಿ ಅಭ್ಯಾಸ ನಮಗೆ ಬೇಕಿದೆ.”– ಡಾ| ಎಸ್.ಎಲ್. ಹೋತಿ, ಐಸಿಎಂಆರ್‌ನ ಖ್ಯಾತ ವಿಜ್ಞಾನಿ ಏನಿದು ವಿಷಾಣು ಯುದ್ಧಾಭ್ಯಾಸ್?
ಏಕಾಏಕಿ ಬರುವ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆ ಎಷ್ಟರ ಮಟ್ಟಿಗೆ ಶಕ್ತವಾಗಿದೆ ಎಂದು ಪರಿಶೀಲಿಸಲು ಈಚೆಗೆ ಕೇಂದ್ರ ಸರ್ಕಾರದ ಒನ್ ಹೆಲ್ತ್ ಮಿಷನ್ ಅಡಿಯಲ್ಲಿ ವಿಷಾಣು ಯುದ್ಧ ಅಭ್ಯಾಸ್ ಮಾಡಲಾಯಿತು. ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ಆ.27ರಿಂದ 31ರವರೆಗೆ ಈ ರೀತಿಯ ಮೋಕ್ ಡ್ರಿಲ್ (ಸಾಂಕ್ರಾಮಿಕ ರೋಗ ಸ್ಫೋಟ ಪತ್ತೆ ಅಣಕು ಪರೀಕ್ಷೆ) ಅನ್ನು ಈಚೆಗೆ ನಡೆಸಲಾಗಿತ್ತು. ಈ ಡ್ರಿಲ್‌ನಲ್ಲಿ ಕಾಯಿಲೆ ಬಂದ ಪ್ರದೇಶದಲ್ಲಿ ಯಾವ ರೀತಿ ಸ್ಯಾಂಪಲ್ ಪಡೆಯುವುದು, ಅದನ್ನು ಹೇಗೆ ಲ್ಯಾಬ್‌ಗ ತಲುಪಿಸುವುದು, ಎಷ್ಟು ಸಮಯದೊಳಗೆ ವರದಿ ಬಂತು, ರೋಗಿಗೆ ಹೇಗೆ ಉಪಚರಿಸಲಾಯಿತು, ಔಷ ಧಿ, ಆಸ್ಪತ್ರೆ ಲಭ್ಯವಿದೆಯೇ, ವಿವಿಧ ಇಲಾಖೆಯ ಜವಾಬ್ದಾರಿ ಏನು ಎಂಬ ಅನೇಕ ಅಂಶಗಳನ್ನು ಪರಿಶೀಲಿಸಲಾಗಿದೆ. ಆಡಳಿತ ಯಂತ್ರ ಯಾವ ಹಂತದಲ್ಲಿ ಸವಾಲುಗಳು ಎದುರಾಗುತ್ತವೆ ಎಂಬುದನ್ನು ನೋಟ್ ಮಾಡಿಕೊಳ್ಳಲಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಷನಲ್ ಒನ್ ಹೆಲ್ತ್ ಮಿಷನ್ ಕಾರ್ಯೋನ್ಮುಖವಾಗಿದೆ. –ಶರತ್ ಭದ್ರಾವತಿ