Advertisement

ಬಾಲಕಿಗೆ ಸೋಂಕು: ಪಿಎಸ್‌ಐ ಸೇರಿದಂತೆ 8 ಮಂದಿಗೆ ಪರೀಕ್ಷೆ

06:52 AM Jun 26, 2020 | Team Udayavani |

ಬೇತಮಂಗಲ: ಇತ್ತೀಚಿಗೆ ಬಾಲ್ಯ ವಿವಾಹವಾಗಿ ಬಾಲ ಮಂದಿರ ದಲ್ಲಿದ್ದ ಬಾಲಕಿಗೆ ಕೋವಿಡ್‌ 19 ದೃಡಪಟ್ಟ ಹಿನ್ನಲೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ವಿಚಾರಣೆ ನಡೆಸಿದ್ದ ಠಾಣೆಯ ಪಿಎಸೈ ಸೇರಿ ಒಟ್ಟು 8 ಮಂದಿ  ಪೊಲೀಸರನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಲಾಗಿದೆ. ಎನ್‌.ಜಿ ಹುಲ್ಕೂರು ಗ್ರಾಪಂ ದಾದನೇನಹಳ್ಳಿ ಬಾಲಕಿ ಆಂದ್ರದ ಬಾಲಕನೊಂದಿಗೆ ವಿವಾಹವಾಗಿದ್ದು,

Advertisement

ಬಾಲ್ಯ ವಿವಾಹದ ಹಿನ್ನಲೆ ಗ್ರಾಮದ ಮಹಿಳಾ ಸಾಂತ್ವನ ಕೇಂದ್ರದಲ್ಲಿ  ಮತ್ತು ಠಾಣೆಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿ ಕೆಜಿಎಫ್ನ ಬಾಲಮಂದಿರದಲ್ಲಿ ಇರಿಸಲಾಗುತ್ತು. ಬಾಲಕಿ ಆಂದ್ರದ ಯುವಕರನನ್ನು ವಿವಾಹವಾಗಿದ್ದು, ಆಂದ್ರದಲ್ಲಿ ಸೊಂಕು ಅಂಟಿಕೊಂಡಿದೆ ಎಂದು ತಿಳಿದು ಬಂದಿದೆ. ಈ ಬಾಲಕಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಬರೆ ಯಲು ಅವಕಾಶ ನೀಡುವಂತೆ ಕೋರಿದ್ದ ಹಿನ್ನಲೆ ಕೋವಿಡ್‌ 19 ಪರೀಕ್ಷೆ ನಡೆಸಿದ ಹಿನ್ನಲೆ ಪರೀಕ್ಷೆ ನಡೆಸಿದ ವೇಳೆ ಸೊಂಕು ದೃಡಪಟ್ಟಿದೆ.

ಪೊಲೀಸ್‌ ಠಾಣೆ ಸೀಲ್‌ಡೌನ್‌: ಪೊಲೀಸ್‌ ಠಾಣೆಯ ಪಿಎಸೈ ಸೇರಿ 8 ಮಂದಿ ಪೊಲೀಸರ ಪರೀಕ್ಷೆಗೆ  ಒಳಪಟ್ಟಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಯ ಸುತ್ತಲೂ ಬ್ಯಾರಿಕೇಡ್‌ಗಳಿಂದ ಮುಚ್ಚಿದ್ದು, ಠಾಣೆಯ ಆವರದಲ್ಲೇ ದೂರುಗಳನ್ನು ಸ್ವೀಕರಿಸಲಾಗುತ್ತಿದೆ.ಠಾಣೆಯ ಎಲ್ಲಾ ಪೊಲೀಸರು ಆತಂಕದ ಲ್ಲಿದ್ದು, ಎಲ್ಲರೂ ಕೋವಿಡ್‌ 19 ಪರೀಕ್ಷೆಗೆ ಮುಂದಾಗಿದ್ದಾರೆ. ಬೇತಮಂಗಲ ಹೋಬಳಿಯಲ್ಲಿ 990 ವಿದ್ಯಾರ್ಥಿಗಳಿಗೆ ಎಸ್‌ಎಲ್‌ಎಸ್‌ಸಿ ಪರೀಕ್ಷೆ ನಡೆಸಿದ್ದು, 29 ಮಂದಿ  ಗೈರಾಗಿದ್ದಾರೆ.

ಸೀಲ್‌ಡೌನ್‌ ಆದ ದಾದೇನಹಳ್ಳಿ: ಬಾಲ್ಯವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಬಾಲಕಿಯ ಗ್ರಾಮವಾದ ದಾದೇನಹಳ್ಳಿ ಗ್ರಾಮವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್‌ಡೌನ್‌ ಮಾಡಿ ದ್ದು, ಈ ಗ್ರಾಮದ ವಿದ್ಯಾರ್ಥಿಗಳಿಗೆ  ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಿದರು. ಗ್ರಾಪಂಯಿಂದ ಫಾಗಿಂಗ್‌: ಪೊಲೀಸ್‌ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರವನ್ನು ಬೇತಮಂಗಲ ಗ್ರಾಪಂಯಿಂದ ಫಾಗಿಂಗ್‌ ಸಿಂಪಡಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next