Advertisement

ಪರೀಕ್ಷೆ ಕೊಠಡಿ ಮೇಲ್ವಿಚಾರಕಿಗೂ ಸೋಂಕು

02:25 PM Jun 30, 2020 | Suhan S |

ಬಾಗಲಕೋಟೆ: ಹಳ್ಳೂರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರದ ಕೊಠಡಿ ಮೇಲ್ವಿಚಾರಕಿಯಾಗಿದ್ದ ಶಿಕ್ಷಕಿ ಸೇರಿದಂತೆ ಸೋಮವಾರ ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರಿಗೆ ಕೋವಿಡ್ ದೃಢಪಟ್ಟಿದೆ.

Advertisement

ಕೆಮ್ಮು, ನೆಗಡಿ, ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಗಲಕೋಟೆ ನವನಗರದ ಸೆಕ್ಟರ್‌ ನಂ.42ರ 40 ವರ್ಷದ ಮಹಿಳೆ ಬಿಜಿಕೆ-182 ಅವರಿಗೆ ಸೋಂಕು ದೃಢಪಟ್ಟಿದ್ದು, ಅವರು ಕಾರ್ಯ ನಿರ್ವಹಿಸಿದ ಪರೀಕ್ಷೆ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳನ್ನು ಸೋಮವಾರ ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಿ, ಪರೀಕ್ಷೆ ಬರೆಸಲಾಗಿದೆ. ಅಲ್ಲದೇ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ರವಿವಾರ ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ವ್ಯಕ್ತಿ ಪಿ-10642 ಪ್ರಾಥಮಿಕ ಸಂಪರ್ಕ ಹೊಂದಿದ ಆತನ ಪತ್ನಿ 38 ವರ್ಷದ ಮಹಿಳೆ ಪಿ (ಬಿಜಿಕೆ-181) ಗೂ ಸೋಂಕು ತಗುಲಿದೆ. ಮುಧೋಳದ ಸೋಂಕಿತ ವ್ಯಕ್ತಿ ಪಿ-7547 ದ್ವಿತೀಯ ಸಂಪರ್ಕ ಹೊಂದಿದ ಮುಧೋಳದ ಬಳಗಾರ ಗಲ್ಲಿಯ 74 ವರ್ಷದ ಮಹಿಳೆ ಪಿ(ಬಿಜಿಕೆ-183), ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ 45 ವರ್ಷದ ಮಹಿಳೆಗೆ ಪಿ (ಬಿಜಿಕೆ-184) ಕೋವಿಡ್‌ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಿಂದ ಈ ವರೆಗೆ ಕಳುಹಿಸಿದ 1241 ಸ್ಯಾಂಪಲ್‌ಗ‌ಳ ವರದಿ ಬರಬೇಕಿದೆ. 688 ಜನರನ್ನು ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಿದ್ದು, ಈ ವರೆಗೆ ಒಟ್ಟು ಸ್ಯಾಂಪಲ್‌ 12587 ಕಳುಹಿಸಲಾಗಿದೆ. ಅದರಲ್ಲಿ 11089 ನೆಗೆಟಿವ್‌ ಬಂದಿದ್ದು, 184 ಪಾಸಿಟಿವ್‌ ಬಂದಿವೆ. ಸೋಂಕಿನಿಂದ ಈ ವರೆಗೆ ಐವರು (ಕಲಾದಗಿ ವೈದ್ಯ ಹೊರತುಪಡಿಸಿ) ಮೃತಪಟ್ಟಿದ್ದಾರೆಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next