Advertisement

ಪೇದೆಗೆ ಸೋಂಕು: ಠಾಣೆ ಸೀಲ್‌ಡೌನ್‌

06:55 AM Jul 06, 2020 | Team Udayavani |

ಕುಣಿಗಲ್‌: ಪಟ್ಟಣದ ಪೊಲೀಸ್‌ ಠಾಣೆಯ ಪೇದೆಯೊಬ್ಬರಿಗೆ ಕೋವಿಡ್‌ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ, ಪೊಲೀಸ್‌ ವಸತಿ ಗೃಹ ಹಾಗೂ ಅಂದಾನಯ್ಯ ಬಡಾವಣೆಗೆ ಹೋಗುವ ರಸ್ತೆಯನ್ನು ತಾಲೂಕು  ಆಡಳಿತ ಭಾನುವಾರ ಸೀಲ್‌ಡೌನ್‌ ಮಾಡಿದೆ. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೋವಿಡ್‌ 19 ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಕೋವಿಡ್‌ 19 ಸೋಂಕು ಪತ್ತೆಯಾಗಿದೆ.

Advertisement

ಇದರಿಂದ ಇಡೀ ಪೊಲೀಸ್‌ ಇಲಾಖೆ ಸಿಬ್ಬಂದಿ  ಭಯಭೀತರಾಗಿ ರಾತ್ರೋ ರಾತ್ರಿ ಪೊಲೀಸ್‌ ವಸತಿ ಗೃಹದಲ್ಲಿದ್ದ ಪೊಲೀಸ್‌ ಕåಟುಂಬಗಳು ತುಮಕೂರು ಹಾಗೂ ತವರಿಗೆ ಸ್ಥಳಾಂತರಗೊಂಡಿದ್ದಾರೆ. ಠಾಣೆಯನ್ನು ಸೀಲ್‌ಡೌನ್‌ ಮಾಡಿರುವ ಕಾರಣ ತಾಲೂಕು ಕಚೇರಿ ಆವರಣದಲ್ಲಿರುವ  ಕಂದಾಯ ಭವನಕ್ಕೆ ಠಾಣೆ ಸ್ಥಳಾಂತರ ಮಾಡಲಾಗಿದೆ.

ಹೋಂ ಕ್ವಾರಂಟೈನ್‌: ಸೋಂಕಿತ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಸಿಪಿಐ, ಪಿಎಸ್‌ಐ, ಪೇದೆಗಳು ಸೇರಿದಂತೆ 20 ಮಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳ ಹೋಂ ಕ್ವಾರಂಟೈನ್‌ನಿಂದಾಗಿ ಇಡೀ  ಠಾಣೆಯ ಜವಾಬ್ದಾರಿ ಡಿವೈಎಸ್‌ಪಿ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ.

ಮಹಿಳೆಯರಿಗೆ ಸೋಂಕು: ಪಟ್ಟಣದ ಕೋಟೆ ಪ್ರದೇಶದ ಮಹಿಳೆ, ಸಿದ್ದಾರ್ಥ ಕಾಲೋನಿಯ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಎರಡೂ ಬಡಾವಣೆಯನ್ನು ತಾಲೂಕು ಆಡಳಿತ ಸೀಲ್‌ಡೌನ್‌ ಮಾಡಿದೆ. ತಾಲೂಕಿನಲ್ಲಿ ಈ ವರೆಗೆ 23 ಕೋವಿಡ್‌  19 ಪ್ರಕರಣ ಪತ್ತೆಯಾಗಿವೆ. ಸೋಮವಾರದಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆ  ವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಿ ಉಳಿದಂತೆ ತಾಲೂಕಾ ದ್ಯಂತ ಲಾಕ್‌ಡೌನ್‌ ಮಾಡಲು ತಾ. ಆಡಳಿತ ಆದೇಶ  ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next