ಬಾಗಲಕೋಟೆ: ನವನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ಟಾಫ್ ನರ್ಸ್ ಸಹಿತ ಜಿಲ್ಲೆಯಲ್ಲಿ 10 ಜನರಿಗೆ ಗುರುವಾರ ಕೋವಿಡ್ ಸೋಂಕು ದೃಢಪಟ್ಟಿದೆ.
ನವನಗರದ ಆಯುರ್ವೇದ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ 27 ವರ್ಷದ ಮಹಿಳೆ ಪಿ-16602 (ಬಿಜಿಕೆ-209) ಮಹಿಳೆ, ಕಳೆದ 15 ದಿನಗಳಿಂದ ಅನಾರೋಗ್ಯಗೊಂಡು ಆಸ್ಪತ್ರೆಗೆ ಹೋಗಿರಲಿಲ್ಲ. ಹೋಂ ಕ್ವಾರಂಟೈನ್‌ನಲ್ಲಿದ್ದ ಅವರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಗುರುವಾರ ಸೋಂಕು ಖಚಿತಗೊಂಡಿದೆ. ಜಿಲ್ಲೆಯಲ್ಲಿ ಗುರುವಾರ ಮತ್ತೆ 10 ಜನರಿಗೆ ಸೋಂಕು ತಗುಲಿದ್ದು, ಬಾದಾಮಿ ಚಾಲುಕ್ಯ ನಗರದ 79 ವರ್ಷದ ಪಿ-16603 (ಬಿಜಿಕೆ-210) ವೃದ್ಧ, ಕೆಮ್ಮು-ನೆಗಡಿ-ಜ್ವರದಿಂದ ಬಳಲುತ್ತಿದ್ದ ವೇಳೆ ಅವರೇ ಸ್ವಯಂ ಪ್ರೇರಣೆಯಿಂದ ಕೋವಿಡ್-19 ತಪಾಸಣೆಗೆ ಒಳಗಾಗಿದ್ದರು. ಅವರಿಗೂ ಗುರುವಾರ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಾದಗಿ ಮದುವೆಯಿಂದ ವಿಸ್ತರಣೆ: ನಿಪ್ಪಾಣಿಯಲ್ಲಿ ನಡೆದ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿ ಬಂದಿದ್ದ ಕಲಾದಗಿ ಮಹಿಳೆಯಿಂದ ಮತ್ತೆ ಐದು ಜನರಿಗೆ ಹಾಗೂ ಬಾಗಲಕೋಟೆಯಲ್ಲಿ ಮದುವೆಯಾಗಿದ್ದ ಸೋಂಕಿತ ಅಬಕಾರಿ ಅಧಿಕಾರಿ ಸಂಪರ್ಕದಿಂದ ಮತ್ತೂಬ್ಬರಿಗೆ ಸೋಂಕು ತಗುಲಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮದ 36 ವರ್ಷದ ಪುರುಷ ಸೋಂಕಿತ ಪಿ-11411(ಕೆಪಿಎಲ್-81) ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ, ಆಯುರ್ವೇದ ಆಸ್ಪತ್ರೆ ಸ್ಟಾಫ್ ನರ್ಸ್ ಆಗಿರುವ ನವನಗರದ ಸೆಕ್ಟರ್ ನಂ-58ರ 27 ವರ್ಷದ ಪಿ-16602 (ಬಿಜಿಕೆ-209), ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾದಾಮಿಯ ಚಾಲುಕ್ಯ ನಗರದ 79 ವರ್ಷದ ವೃದ್ಧ ಪಿ-16603 (ಬಿಜಿಕೆ-210), ಸೋಂಕಿತ ಪಿ-8709 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 16 ಬಾಲಕ ಪಿ-16604 (ಬಿಜಿಕೆ-211), 51 ವರ್ಷದ ಪುರುಷ ಪಿ-16605 (ಬಿಜಿಕೆ-212), 45 ವರ್ಷದ ಮಹಿಳೆ ಪಿ-16606 (ಬಿಜಿಕೆ-213), 22 ವರ್ಷದ ಯುವಕರಾದ ಪಿ-16607 (ಬಿಜಿಕೆ-214), ಪಿ-16608 (ಬಿಜಿಕೆ-215) ಸೋಂಕು ಕಂಡುಬಂದಿದೆ.
ಬಾಗಲಕೋಟೆ ನಗರದ ಕಿಲ್ಲಾ ಗಲ್ಲಿಯ 70 ವರ್ಷದ ಮಹಿಳೆ ಪಿ-16609 (ಬಿಜಿಕೆ-216), ಸೋಂಕಿತ ಪಿ-12066 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಮುಧೋಳದ ಜಯನಗರದ 5 ವರ್ಷದ ಬಾಲಕ ಪಿ-16610 (ಬಿಜಿಕೆ-217), ಪಿ-8300 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಲಾದಗಿಯ 30 ವರ್ಷದ ಮಹಿಳೆಗೆ ಪಿ-16611 (ಬಿಜಿಕೆ-218) ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 881 ಸ್ಯಾಂಪಲ್‌ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1082 ಜನರ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಿಂದ ಈ ವರೆಗೆ ಒಟ್ಟು 13343 ಸ್ಯಾಂಪಲ್ ಕಳುಹಿಸಲಾಗಿದ್ದು, ಈ ಪೈಕಿ 12,161 ನೆಗೆಟಿವ್, 218 ಪಾಸಿಟಿವ್ ಬಂದಿವೆ. 5 (ಕಲಾದಗಿ ವೈದ್ಯ ಹೊರತುಪಡಿಸಿ) ಜನ ಮೃತ ಪ್ರಕರಣ ವರದಿಯಾಗಿದೆ.
ಕೋವಿಡ್-19ದಿಂದ ಒಟ್ಟು 123 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 90 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿವೆ. ಕಂಟೈನ್ಮೆಂಟ್ ಝೋನ್ 25 ಇದ್ದು, ಇನ್ ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 3764 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.