Advertisement

ಮಡಿಕೇರಿಯ ಮಹಿಳೆಗೆ ಸೋಂಕು: ಸಂಪಾಜೆ ಚೆಕ್‌ಪೋಸ್ಟ್‌ ಮೂಲಕ ಪ್ರವೇಶ

09:28 AM May 19, 2020 | mahesh |

ಮಡಿಕೇರಿ: ಮುಂಬಯಿಯಿಂದ ಮಡಿಕೇರಿಗೆ ಆಗಮಿಸಿದ್ದ 45 ವರ್ಷದ ಮಹಿಳೆಗೆ v ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮುಂಬಯಿಯಲ್ಲಿ ಹೋಂ ನರ್ಸ್‌ ಆಗಿದ್ದ ಮಹಿಳೆಯು ಮೇ 14ರಂದು ಮಂಗಳೂರು ತನಕ ಖಾಸಗಿ ಟ್ಯಾಕ್ಸಿಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯವರೊಂದಿಗೆ ಬಂದಿದ್ದರು. ಬಳಿಕ ಮಂಗಳೂರಿನ ಪೊಲೀಸರು ಸಂಪಾಜೆಯವರೆಗೆ ಟ್ಯಾಕ್ಸಿಯಲ್ಲಿ ಕಳುಹಿಸಿದ್ದಾರೆ. ಮೇ 16ರಂದು ರಾತ್ರಿ 9 ಗಂಟೆಗೆ ಅವರು ಸಂಪಾಜೆ ಚೆಕ್‌ಪೋಸ್ಟ್‌ ತಲುಪಿದ್ದರು. ಅಲ್ಲಿ ಆರೋಗ್ಯ ತಪಾಸಣೆ ಮಾಡಿದಾಗ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ಮೂಲಕ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕರೆತರಲಾಗಿದೆ. ಗಂಟಲ ದ್ರವದ ಪರೀಕ್ಷಾ ವರದಿ ಇಂದು ಬಂದಿದ್ದು ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಮಂಗಳೂರಿನಿಂದ ಸಂಪಾಜೆವರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದ ವಾಹನ ಚಾಲಕರ ಬಗ್ಗೆಯೂ ದ.ಕ. ಡಿಸಿಗೆ ಮಾಹಿತಿ ನೀಡಲಾಗಿದೆ. ಮಹಿಳೆ ಎಲ್ಲಿಯೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರದ ಕಾರಣ ಜಿಲ್ಲೆಯಲ್ಲಿ ಕಂಟೈನ್‌ಮೆಂಟ್‌ ಪ್ರದೇಶವಿರುವುದಿಲ್ಲ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next