Advertisement
ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗೆ ಒಳಪಟ್ಟ ಏಳು ಜನ, ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಇಬ್ಬರಲ್ಲಿ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದವರ ಸಂಪರ್ಕ ಪತ್ತೆಯಾಗಿಲ್ಲ. ನಾಗದೇವನಹಳ್ಳಿಯ ಆರ್‌ಆರ್ ಲೇಔಟ್‌ನ ಗರ್ಭಿಣಿಯೊಬ್ಬರಲ್ಲಿ (32 ವರ್ಷ), ಕೆ.ಆರ್.ಪುರಂನ ನೇತ್ರಾವತಿ ಲೇಔಟ್‌ನ 46 ವರ್ಷದ ಪುರುಷ, ಸ್ವಯಂ ಸೋಂಕು ಪರೀಕ್ಷೆಗೆ ಒಳಪಟ್ಟ ಎಚ್.ಬಿಆರ್ ಲೇಔಟ್‌ನ 48 ವರ್ಷದ ಪುರುಷ,
Related Articles
Advertisement
ಒಬ್ಬರು ಮೃತ: ನಗರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದು, ಕೋವಿಡ್ 19ದಿಂದ ಒಟ್ಟು ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.13ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಇನ್ನು ಸೋಮವಾರ ಸೋಂಕಿನಿಂದ ಇಬ್ಬರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 329ಕ್ಕೆ ಏರಿಕೆಯಾದಂತಾಗಿದೆ.
ಪೊಲೀಸ್ ಠಾಣೆ ಸಿಬ್ಬಂದಿಗೆ ಸೋಂಕು: ತಮಿಳುನಾಡಿನ ಹೊಸೂರಿಗೆ ಹೋಗಿ ಬಂದಿದ್ದ ಎಚ್‌ಎಸ್‌ಆರ್ ಠಾಣೆಯ 25 ವರ್ಷದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜೂನ್.6ಕ್ಕೆ ಇವರು ತಮಿಳುನಾಡಿಗೆ ಹೋಗಿದ್ದರು. ರೋಗಿ ಸಂಖ್ಯೆ 6560 ಅವರ ಸಂಪರ್ಕದಿಂದ ಇವರಿಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 9 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕಳವು ಆರೋಪಿಗಳಿಂದ ಸೋಂಕು ತಗಲುತ್ತಿದ್ದು, ಕೆಂಗೇರಿ ಉಪನಗರ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ 40ವರ್ಷದ ಪೊಲೀಸ್ ಸಿಬ್ಬಂದಿಗೂ ಕಳ್ಳನನ್ನು ಸೆರೆ ಮಾಡುವ ಸಂದರ್ಭದಲ್ಲಿ ಸೋಂಕು ಹಬ್ಬಿದ್ದು, ಇವರ ಪ್ರಾಥಾಮಿಕ ಸಂಪರ್ಕದಲ್ಲಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 191: ನಗರದಲ್ಲಿ ದಿನೇ ದಿನೆ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ 191ಕ್ಕೆ ಏರಿಕೆಯಾದಂತಾಗಿದೆ. ನಗರದ ಕೆಲವು ವಲ ಯಗಳು ಮಾತ್ರ ಕಂಟೈನ್ಮೆಂಟ್ ವ್ಯಾಪ್ತಿಯ ಲ್ಲಿದ್ದವು. ಸದ್ಯ ಎಲ್ಲ ವಲಯಗಳಲ್ಲಿಯೂ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, ಎಲ್ಲ ಎಂಟು ವಲಯಗಳಲ್ಲಿನ ಕೆಲವು ಪ್ರದೇಶಗಳು ಕಂಟೈನ್ಮೆಂಟ್ ವ್ಯಾಪ್ತಿಗೆ ಸೇರ್ಪಡೆಯಾದಂತಾಗಿದೆ.
ಒಬ್ಬರಲ್ಲಿ ಸೋಂಕು ದೃಢಪಟ್ಟರೂ ಆ ನಿರ್ದಿಷ್ಟ ಪ್ರದೇಶವನ್ನು ಕಂಟೈನ್ಮೆಂಟ್ ಮಾಡುತ್ತಿರುವುದರಿಂದ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಂಟೈನ್ಮೆಂಟ್ ವ್ಯಾಪ್ತಿಯ ಶೇ.90 ರಷ್ಟು ವಾರ್ಡ್‌ಗಳಲ್ಲಿ ಒಂದೇ ಪ್ರಕರಣ ದೃಢಪಟ್ಟಿದೆ. ಇನ್ನು ಜೂನ್.12ರವರೆಗೆ ಸೋಂಕುದೃಢಪಟ್ಟವರು ಇದ್ದ ಪ್ರದೇಶಗಳ ಮಾಹಿತಿಯನ್ನು ಮಾತ್ರ ಪಾಲಿಕೆ ನೀಡಿದ್ದು, ಇನ್ನು ಮೂರು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.