Advertisement

ಸೋಂಕು ಪತ್ತೆ: ಸಂಕೇಶ್ವರದಲ್ಲಿ ಹೈಅಲರ್ಟ್‌

04:17 PM Apr 17, 2020 | Team Udayavani |

ಸಂಕೇಶ್ವರ: ನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್‌ ಪ್ರಕರಣ ಬೆಳಕಿಗೆ ಬಂದಿದ್ದು, ನಗರದಲ್ಲಿ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

Advertisement

ನಗರದ ನಿಡಸೋಸಿ ರಸ್ತೆಯಲ್ಲಿನ ವ್ಯಕ್ತಿಯೋರ್ವರಿಗೆ ಕೋವಿಡ್ 19 ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಇಲಾಖೆ ಖಚಿತಪಡಿಸಿದ್ದು, ಇದರಿಂದ ನಗರದ 3 ಕಿ.ಮೀ. ವರೆಗೆ ಸಿಲ್‌ ಡೌನ್‌ ಘೋಷಿಸಲಾಗಿದೆ. ಸೋಂಕಿತ ವ್ಯಕ್ತಿ ದೆಹಲಿಯಿಂದ ಮರಳಿದವನಾಗಿದ್ದು, ಮೊದಲ ಬಾರಿಯ ಪರೀಕ್ಷೆಯಲ್ಲಿ ಆತನ ವರದಿ ನೆಗೆಟಿವ್‌ ಬಂದಿತ್ತು. ಎರಡನೆಯ ಪರೀಕ್ಷೆಯಲ್ಲಿ ಆತನಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಇನ್ನು ಈತನ ಕುಟುಂಬದ 12 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ನಗರದ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವಾಗುವವರೆಗೆ ನಿಷೇಧಿ ತ ಎಂದು ಘೋಷಿಸಿ ಡಿಸಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಸೋಂಕಿತ ವ್ಯಕ್ತಿ ಪತ್ತೆಯಾದ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಂಚರಿಸುವ ಮಾರ್ಗಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಗರದಲ್ಲಿನ ಪ್ರತಿ ಮನೆ-ಮನೆಗೆ ತೆರಳಿ ಸರ್ವೇ ಕಾರ್ಯ ಆರಂಭಿಸಿದ್ದಾರೆ ಎಂದು ಅಧಿ ಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next