Advertisement

ಮನೆಗೆ ಬಂದಿದ್ದ ಸೋಂಕಿತ ಆಸ್ಪತ್ರೆಗೆ

08:09 AM Jul 22, 2020 | Suhan S |

ಮುಳಬಾಗಿಲು: ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಡವಟ್ಟನಿಂದ ಕೋಲಾರದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿ, ಮನೆಗೆ ಬಂದಿದ್ದ ಸೋಂಕಿತನನ್ನು ಮತ್ತೆ ಆಸ್ಪತ್ರೆಗೆ ಕಳುಹಿಸಿದ ಘಟನೆ ತಾಲೂಕಿನಲ್ಲಿ ನಡೆಯಿತು.

Advertisement

ತಾಲೂಕಿನ ದುಗ್ಗಸಂದ್ರ ಹೋಬಳಿ ಕುರುಡುಮಲೆ ಗ್ರಾಮದಲ್ಲಿ ಶನಿವಾರ 48 ವರ್ಷದ ಕ್ಷಯರೋಗಿಯೊಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಅದೇ ದಿನ ಸಂಜೆ ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸೋಂಕಿತನನ್ನು ಕೋಲಾರದ ಕೋವಿಡ್‌ ಆಸ್ಪತ್ರೆಗೆ ಸಾಗಿಸಿ, ಅವರ ಮನೆ ಸೀಲ್‌ಡೌನ್‌ ಮಾಡಿದ್ದರು. ಆದರೆ, ಸೋಂಕಿತ ಮಂಗಳವಾರ ಮನೆಗೆ ವಾಪಸ್‌ ಬಂದಿದ್ದ. ಆಸ್ಪತ್ರೆಯಲ್ಲಿ ಸಹಿ ಮಾಡಿಸಿಕೊಂಡು ಹೋಗು ಎಂದು ಹೇಳಿದರು.

ಅದಕ್ಕೆ, ಕೋಲಾರದಿಂದ ಮುಳಬಾಗಿಲಿಗೆ ಆಟೋದಲ್ಲಿ ಬಂದು, ಅಲ್ಲಿಂದ ಕುರುಡುಮಲೆಗೆ ಬಸ್‌ನಲ್ಲಿ ಬಂದೆ ಎಂದು ಸೋಂಕಿತ ಕುಟುಂಬಸ್ಥರಿಗೆ ಹೇಳಿದ್ದಾನೆ. ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಹಾಗೂ ಪೊಲೀಸರು ಮತ್ತೂಮ್ಮೆ ಸೋಂಕಿತನನ್ನು ಕೋಲಾರ ಕೋವಿಡ್‌ ಆಸ್ಪತ್ರೆಗೆ ಸಾಗಿಸಿದರು. ಒಟ್ಟಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತನು ಆಟೋ, ಬಸ್‌ನಲ್ಲಿ ಪ್ರಯಾಣಿಸಿರುವುದರಿಂದ ಅವರೆಲ್ಲರೂ ತಲ್ಲಣಗೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next