Advertisement
ಆಸ್ಪತ್ರೆಗೆ ದಾಖಲಾದವರು ಮೃತಪಟ್ಟರೆ ಕೋವಿಡ್-19 ದೃಢಪಟ್ಟಿದೆ ಎಂದು ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನೆರವೇರಿಸುತ್ತಿದೆ. ಆದರೆ, ಅವರ ಕುಟುಂಬದವರನ್ನು ಪರೀಕ್ಷೆ ಕೂಡ ಮಾಡುತ್ತಿಲ್ಲ. ಇನ್ನು ಪರೀಕ್ಷೆ ಮಾಡಿದ ವರದಿಗಳು ಬಂದ ಮೇಲೆ ಸೋಂಕು ದೃಢಪಟ್ಟಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ಕೂಡ ನೀಡಿಲ್ಲ. ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಹೋಮ್ ಕ್ವಾರಂಟೈನ್‌ಗಾದರೂ ಒಳಪಡುವಂತೆ ತಿಳಿಸುತ್ತಿಲ್ಲ.
Related Articles
Advertisement
ನಮ್ಮ ಕುಟುಂಬದ ಸದಸ್ಯರ ಪರೀಕ್ಷೆ ಮಾಡಲಾಗಿತ್ತು. ಆದರೆ, ಪಾಸಿಟಿವ್ ಬಂದಿರುವ ವಿಚಾರ ನಮಗೇ ತಿಳಿದಿಲ್ಲ. ವಾರದ ಬಳಿಕ ಹೋಗಿ ವಿಚಾರಿಸಿದರೆ ನಿಮ್ಮ ಕುಟುಂಬ ಸದಸ್ಯರಿಗೆ ಪಾಸಿಟಿವ್ ಇದೆ. ನೀವು ಕ್ವಾರಂಟೈನ್‌ನಲ್ಲೇ ಇರಬೇಕು ಎಂದು ತಿಳಿಸಿದ್ದಾರೆ. ಕನಿಷ್ಠ ಪಕ್ಷ ಪಾಸಿಟಿವ್ ಬಂದಿರುವ ವರದಿ ನೀಡುವಂತೆ ಕೇಳಿದರೂ ಸರಿಯಾಗಿ ಸ್ಪಂದಿಸಲಿಲ್ಲ. -ಕೋವಿಡ್ ವೈರಸ್ ಸೋಂಕಿತ ಕುಟುಂಬ ಸದಸ್ಯ
ನಮ್ಮ ತಂದೆಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಯೇ ಮೃತಪಟ್ಟರು. ಬಳಿಕ ಕೋವಿಡ್-19 ದೃಢಪಟ್ಟಿದೆ. ಶವ ನೀಡುವುದಿಲ್ಲ ಎಂದು ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನೆರವೇರಿಸಿತು. ನಮ್ಮ ತಂದೆ ಜತೆ ಇದ್ದ
ನಮಗೂ ಸೋಂಕು ತಗುಲಿರುವ ಸಾಧ್ಯತೆ ಇದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ನಮ್ಮನ್ನು ಪರೀಕ್ಷೆ ಕೂಡ ಮಾಡಲಿಲ್ಲ. ಇದರಿಂದ ನಾವೇ ಸ್ವ ಪ್ರೇರಣೆಯಿಂದ ಕ್ವಾರಂಟೈನ್‌ಗೆ ಒಳಗಾದೆವು. -ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪುತ್ರ