Advertisement
ಏಕೆಂದರೆ ನಾಲ್ಕು ದಿನಗಳ ಹಿಂದೆ ಇಎಸ್‌ಐಯಲ್ಲಿ ಆಕ್ಸಿಜೆನ್ ಕೊರತೆ ಇಲ್ಲವೇ ಸೋರಿಕೆಯಾಗಿ ಎಂಟು ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿ ಚಿತ್ತಾಪುರ ತಾಲೂಕಿನ 30 ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಿಸುತ್ತಿದ್ದ ವ್ಯಾಪಾರಿಯೊಬ್ಬರು ಕೋವಿಡ್ ದಿಂದ ಮೃತಪಟ್ಟಿದ್ದಾರೆ. ಹೀಗೆ ಅಲ್ಲಲ್ಲಿ ಕೋವಿಡ್ ದಿಂದ ಮೃತಪಟ್ಟಿದ್ದಾರೆಂಬ ವರದಿ ಕೇಳಿ ಬರುತ್ತಲೇ ಇದೆ. ಆದರೆ ಹೆಲ್ತ್ ಬುಲೆಟನ್‌ದಲ್ಲಿ ಈ ವರದಿಯೇ ಇನ್ನೂವರೆಗೆ ಬಂದಿಲ್ಲ. ಇದನ್ನೆಲ್ಲ ನೋಡಿದರೆ ಕೊರೊನಾಗೆ ಸಂಬಂಧಿಸಿದಂತೆ ಎಲ್ಲವನ್ನು ಮುಚ್ಚಿಡಲಾಗುತ್ತಿದೆಯೇ? ಎಂಬ ಸಂಶಯ ಕಾಡುತ್ತಿದೆ. ಕೋವಿಡ್ ಸೋಂಕಿತರಿಂದ ಇಎಸ್‌ಐ, ಜೀಮ್ಸ್ ಹಾಗೂ ನಿಗದಿಪಡಿಸಲಾದ ಖಾಸಗಿ ಆಸ್ಪತ್ರೆಗಳೆರಡೂ ಫುಲ್ ಆಗಿವೆ. ಹೀಗಾಗಿ ದಿನಾಲು ಬರುತ್ತಿರುವ 200 ಅಧಿಕ ಸೋಂಕಿತರಿಗೆ ಚಿಕಿತ್ಸೆ ಏಲ್ಲಿ ಎನ್ನುವಂತಾಗಿದೆ.
Related Articles
Advertisement
ಖಾಸಗಿ ಆಸ್ಪತ್ರೆಗಳು ಶೇ.50 ಬೆಡ್ ಮೀಸಲಿಡುತ್ತಿಲ್ಲ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಶೇ.50ರಷ್ಟು ಬೆಡ್ ಗಳು ಮೀಸಲಿಡಬೇಕೆಂದು ನಿರ್ದೇಶನ ಕಲಬುರಗಿ ಪಾಲನೆಯಾಗುತ್ತಿಲ್ಲ. ಬಸವೇಶ್ವರ ಆಸ್ಪತ್ರೆ ಹಾಗೂ ಧನ್ವಂತರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆದು ಬೆಡ್‌ಗಳು ಮೀಸಲಿಟ್ಟರೂ ನಿರ್ದೇಶನುಸಾರ ಬೆಡ್ ಮೀಸಲಿಟ್ಟಿಲ್ಲ. ಉಳಿದ ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳು ಕೋವಿಡ್ ಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಸಣ್ಣ-ಸಣ್ಣ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಜನಸಾಮಾನ್ಯರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲಾರಂಭಿಸಿದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ತನಿಖೆ ನೆಪದಲ್ಲಿ ಕಿರುಕುಳ ಕೊಡುತ್ತಿರುವುದಲ್ಲದೇ ಆಸ್ಪತ್ರೆ ಬಂದ್ ಮಾಡುತ್ತೇನೆ ಎಂದು ಎಚ್ಚರಿಸುತ್ತಿರುವುದು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿದೆ.
ಜೀಮ್ಸ್, ಇಎಸ್‌ಐ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಹಾಗೂ ಧನ್ವಂತರಿ ಸೇರಿದಂತೆ ಎಲ್ಲಾ ಕೋವಿಡ್ ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಸೇರಿ ಸುಮಾರು 46 ಲಕ್ಷ ಜನಸಂಖ್ಯೆವಿದ್ದು, ಇದರಲ್ಲಿ ಶೇ.1 ಜನರಿಗೂ ಸೋಂಕು ತಗುಲಿದರೂ ಅವರ ಆರೈಕೆಗಾಗಿ 46 ಸಾವಿರ ಬೆಡ್‌ಗಳು ಬೇಕಾಗುತ್ತವೆ. ಆದರೆ ಸಂಖ್ಯೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಸದ್ಯ ಇರುವ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ರೋಗಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಐಸೋಲೇಶನ್‌ಗೆ ಒಳಪಡಿಸಲು ಯಾವುದೇ ರೀತಿಯ ವ್ಯವಸ್ಥೆ ಕಲ್ಪಿಸಿಲ್ಲ. ತಜ್ಞರು ಮತ್ತು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೆ ಹೇಳಿರುವಂತೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ರೋಗವು ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು ಬಾಯಿಂದ ಹೇಳುತ್ತಿದ್ದಾರೆ. ಆದರೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಆಡಳಿತದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸುತ್ತದೆ.– ಬಿ.ಆರ್. ಪಾಟೀಲ್, ಮಾಜಿ ಶಾಸಕ