ಕೊಪ್ಪಳ: ಇಂಡಿಯನ್ ಪಿಡಿಯಾಟ್ರಿಕ್ ಅಸೋಸಿಯಷನ್ ಹಾಗೂ ಕೊಪ್ಪಳ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಜಯನಗರ ಕಾರಪಿಡಿಕಾನ್ -2021ನೇ ಭಾರತೀಯ ಚಿಕ್ಕ ಮಕ್ಕಳ ವೈದ್ಯಕೀಯ ಸಂಘದ 40ನೇ ವಾರ್ಷಿಕ ಸಮ್ಮೇಳನದ ಜನಿಸಿದ ಶಿಶುವಿನ ಪುನರುಜ್ಜೀವನ ಕಾರ್ಯಾಗಾರ ಜರುಗಿತು.
ಕಾರ್ಯಾಗಾರವನ್ನು ಕಿಮ್ಸ್ ನಿರ್ದೇಶಕ ಡಾ| ವಿಜಯನಾಥ ಇಟಗಿ, ರಾಜ್ಯದ ಮಕ್ಕಳ ಸಂಘದ ಅಧ್ಯಕ್ಷ ಡಾ| ಅಶೋಕ ದಾತರ ಉದ್ಘಾಟಿಸಿದರು. ದೇಶದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಚಿಕ್ಕಮಕ್ಕಳ ವೈದ್ಯರ ಜೊತೆ ಹುಟ್ಟಿದ ಶಿಶುಗಳ ಪುನರುಜ್ಜೀವನ ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯದ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಿಂದ ವಿವಿಧ ಸ್ಥರದಲ್ಲಿ ಇರುವ ಮಕ್ಕಳ ವೈದ್ಯರು ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದರು. ಕಾರ್ಯಾಗಾರದಲ್ಲಿ ವಿಶೇಷ ಆಸಕ್ತಿವಹಿಸಿ ಕಿಮ್ಸ್ ಕಾಲೇಜಿನ ಪ್ರಸೂತಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು
ಪಾಲ್ಗೊಂಡಿದ್ದರು.
ಕಾರ್ಯಾಗಾರಗಳಲ್ಲಿ ಒಟ್ಟಾರೆ 54 ವಿದ್ಯಾರ್ಥಿಗಳು ರಾಜ್ಯಾದ್ಯಂತ ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ್ದರು. ಚಿಕ್ಕ ಮಕ್ಕಳ ವೈದ್ಯಕೀಯ ಸಂಘದ ವಾರ್ಷಿಕ ಸಮ್ಮೇಳನವು ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕದ ಕಿಮ್ಸ್ ಹಾಗೂ ಹೊಸಪೇಟೆಯಲ್ಲಿ ನಡೆದಿದ್ದು ವಿಶೇಷವಾಗಿತ್ತು. ಕಾರ್ಯಾಗಾರದಲ್ಲಿ ಕಿಮ್ಸ್ ನಿರ್ದೇಶಕ ಡಾ| ವಿಜಯನಾಥ ಇಟಗಿ, ಪ್ರಾಂಶುಪಾಲ ಡಾ| ರಾಘವೇಂದ್ರ ಬಾಬು, ವಿಜಯನಗರ ಚಿಕ್ಕಮಕ್ಕಳ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಎಸ್.ಜಿ. ಯಟ್ಟಿಯವರ, ಕಿಮ್ಸ್ ಕೊಪ್ಪಳ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಗಿರೀಶ ಹಿರೆಮಠ, 1 ಡಾ| ವೇಣುಗೋಪಾಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಈಶ್ವರ ಸವಡಿ ಉಪಸ್ಥಿತರಿದ್ದರು.