Advertisement

ದೊಡ್ಡ ಪಂದ್ಯಗಳ ಅನುಭವವಿಲ್ಲದೆ ಸೋತೆವು: ತಮೀಮ್

12:57 PM Jun 21, 2019 | keerthan |

ನಾಟಿಂಗ್ ಹ್ಯಾಮ್: ಬಾಂಗ್ಲಾದೇಶ ಈ ವಿಶ್ವಕಪ್ ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ತಂಡ. ಮೊನ್ನೆಯಷ್ಟೇ ವಿಂಡೀಸ್ ವಿರುದ್ಧ ದೊಡ್ಡ ಮೊತ್ತ ಚೆಸ್ ಮಾಡಿ ಗೆದ್ದ ಬಾಂಗ್ಲಾ ಹುಲಿಗಳು ಗುರವಾರ ಆಸೀಸ್ ವಿರುದ್ದ ಮಾತ್ರ ಸೋಲನುಭವಿಸಿದರು. ಆದರೆ ಬಾಂಗ್ಲಾ ಆಟಗಾರರ ದಿಟ್ಟ ಹೋರಾಟ ಮಾತ್ರ ಜನಮನ್ನಣೆಗೆ ಪಾತ್ರವಾಗಿದೆ.

Advertisement

“ನಮಗೆ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಅನುಭವ ಕಡಿಮೆ ಇರುವುದರಿಂದ ಕಾಂಗೂರುಗಳ ವಿರುದ್ಧ ಪಂದ್ಯವನ್ನು ಸೋಲಬೇಕಾಯಿತು. ನಾನು ಬ್ಯಾಟಿಂಗ್ ಮಾಡುವಾಗ ದೊಡ್ಡ ಮೊತ್ತದ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. 30 ಓವರ್ ಗಳ ಅಂತ್ಯದಲ್ಲಿ 180 ರಿಂದ 200 ರನ್ ಕಲೆ ಹಾಕುವ ಯೋಜನೆ ನಮ್ಮದಾಗಿತ್ತು. ನಂತರದ 20 ಓವರ್ ಗಳಲ್ಲಿ ಆಕ್ರಮಣಕಾರಿಯಾಗಿ ಆಡುವ ಯೋಜನೆಯಲ್ಲಿದ್ದೆವು” ಎಂದು ತಮೀಮ್ ಇಕ್ಬಾಲ್ ಪಂದ್ಯದ ನಂತರ ಹೇಳಿದರು.

ನಾಟಿಂಗ್ ಹ್ಯಾಮ್ ನಲ್ಲಿ ಆಸೀಸ್ ಬ್ಯಾಟ್ಸ್ ಮನ್ ಗಳು ಬಾಂಗ್ಲಾ ಬೌಲರ್ ಗಳ ಮೇಲೆ ಸವಾರಿ ಮಾಡಿ 381 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಈ ದೊಡ್ಡ ಮೊತ್ತ ನೋಡಿಯೇ ಬಾಂಗ್ಲಾ ಆಟಗಾರರು ಕಂಗಾಲಾಗುತ್ತಾರೆ ಎಂದೇ ಭಾವಿಸಿಲಾಗಿತ್ತು. ಆದರೆ ದಿಟ್ಟತನ ಪ್ರದರ್ಶಿಸಿದ ಬಾಂಗ್ಲಾ ಹುಲಿಗಳು 333 ರನ್ ಬಾರಿಸಿದರು. ಮಾಜಿ ನಾಯಕ ಮುಷ್ಫೀಕರ್ ರಹೀಂ ಭರ್ಜರಿ ಶತಕ ಬಾರಿಸಿದರು. ತಮೀಮ್ 62 ರನ್, ಮೊಹಮದುಲ್ಲಾ 69 ರನ್ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next