ಇಂಡಿ: ಸಹಕಾರ ಸಂಘದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತ ಬಂದಿರುವ, ಮನೆ-ಮನೆ ಮಾತಾಗಿರುವ ಡಿಸಿಸಿ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣವಾಗಿದ್ದು ಲೋಕಾರ್ಪಣೆಗೆ ಸಜ್ಜುಗೊಂಡಿದೆ.
ಶತಮಾನ ಕಂಡ ಜಿಲ್ಲಾ ಡಿಸಿಸಿ ಬ್ಯಾಂಕು ಜನವರಿ 12-1949ರಂದು ಇಂಡಿ ನಗರದಲ್ಲಿ ಶಾಖೆ ಆರಂಭಿಸಿದೆ. ಪ್ರಥಮವಾಗಿ ಗಾಂಧಿ ಬಜಾರ್‌ನಲ್ಲಿದ್ದ ಶಾಖೆ ಕೆಲ ವರ್ಷಗಳ ನಂತರ ಇಂಡಿ ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದ ಹತ್ತಿರ ವರ್ಗಾವಣೆಯಾಯಿತು. ನಂತರ ಅನೇಕ ವರ್ಷಗಳ ಕಾಲ ಅಲ್ಲಿಯೇ ಕಾರ್ಯ ನಿರ್ವಹಿಸಿತು.
ಈಗ ತನ್ನದೇ ಆದ ಸ್ವಂತ ಕಟ್ಟಡ ನಿರ್ಮಿಸಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಇಂಡಿಯಲ್ಲಿ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದರೂ ಗ್ರಾಹಕರು ಡಿಸಿಸಿ ಬ್ಯಾಂಕಿನ ಕಡೆ ವಾಲುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಸಾಕಷ್ಟು ಜನ ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ಮಾಡುತ್ತಿದ್ದಾರೆ.
ಬ್ಯಾಂಕಿನಲ್ಲಿ ಉತ್ತಮ ಸೇವೆ ಲಭ್ಯವಾಗುತ್ತಿರುವುದರಿಂದ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಡಿ ಶಾಖೆಯಲ್ಲಿ ಒಟ್ಟು 10 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಸಾವಿರಾರು ಜನರಿಗೆ ಡಿಸಿಸಿ ಬ್ಯಾಂಕ್ ಕೆಲಸ ನೀಡಿದೆ.
ಉಮೇಶ ಬಳಬಟ್ಟಿ