Advertisement
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಯೋಜನಾಧಿಕಾರಿ ವ್ಹಿ.ಎ. ಹಳ್ಳಿಕರ ಅವರು ಹಿಂದಿನ ಸಭೆಯ ನಡಾವಳಿ ಮಂಡಿಸಿದರು.ನಂತರ ತಾಪಂ ಸದಸ್ಯ ಸಿದ್ದಪ್ಪ ತಳವಾರ ಮಾತನಾಡಿ, ಕಾಲುವೆ 18, 19 ಡಿಸ್ಟ್ರೀಬಿಟರ್ ವರೆಗೆ ನೀರು ಬಿಡುತ್ತಿದ್ದು, 20ನೇ ಡಿಸ್ಟ್ರಿಬ್ಯುಟರ್ ನೀರು ಬರುತ್ತಿಲ್ಲ. ಅಧಿ ಕಾರಿಗಳು ನಿರಾಶಕ್ತಿ ತೋರುತ್ತಿದ್ದಾರೆ ಎಂದು ದೂರಿದರು.
ಜನರ ಪಾಡು ಕೇಳುವರು ಯಾರು? ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಸರಕಾರದ ಗೋಮಾಳ ಸೇರಿದಂತೆ ಸರಕಾರದ ಜಮೀನುಗಳು ಎಷ್ಟಿದೆ ಎಂಬುದನ್ನು ಅಂಕಿ-ಸಂಖ್ಯೆ ಒದಗಿಸಬೇಕು. ಹಳ್ಳಿಗಳಲ್ಲಿ ವಿವಿಧ ಸಮುದಾಯದ ಜನರಿಗೆ ಸ್ಮಶಾನ ರುದ್ರಭೂಮಿ ಇಲ್ಲ ಎಂದು ನೂತನ ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಸರಕಾರದ ಅನುದಾನ ಬಂದ ನಂತರ ಅಡವಿ ವಸ್ತಿಗಳ ನೀರಿನ ಸಮಸ್ಯೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಎಸ್. ಆರ್. ರುದ್ರವಾಡಿ ಉತ್ತರಿಸಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್. ಎಸ್.ಕತ್ತಿ, ಶಿಕ್ಷಣಾ ಧಿಕಾರಿ ವಸಂತ ರಾಠೊಡ, ಅರಣ್ಯಾಧಿಕಾರಿ ಚವ್ಹಾಣ, ಚಡಚಣ ಬಿಇಒ ಆಲಗೂರ, ಹೆಸ್ಕಾಂ ಇಇ ಮೇಡೆದಾರ, ಡಾ| ಅರ್ಚನಾ ಕುಲಕರ್ಣಿ, ಕ್ರೀಡಾಧಿಕಾರಿ ಚವ್ಹಾಣ ಸೇರಿದಂತೆ ತಾಲೂಕು ಅಧಿಕಾರಿಗಳು, ತಾಪಂ ಸದಸ್ಯರು ಇದ್ದರು.