Advertisement

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಗೋಪಾಲ ಕಾರಜೋಳ

04:08 PM May 25, 2020 | Naveen |

ಇಂಡಿ: ಕೋವಿಡ್ ಮಾಹಾಮಾರಿ ರೋಗ ತಡೆಗಟ್ಟಲು ತಮ್ಮ ಜೀವವನ್ನು ಮುಡಿಪಾಗಿಟ್ಟು ಸಮಾಜದ ಹಿತಕಾಪಾಡಲು ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಕೋವಿಡ್ ಯೋಧರಿಗೆ ಅಭಿನಂದಿಸುವುದಾಗಿ ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು.

Advertisement

ತಾಲೂಕಿನ ಕರ್ನಾಟಕ ಗಡಿಭಾಗದಲ್ಲಿರುವ ಧೂಳಖೇಡ ಗ್ರಾಮದಲ್ಲಿರುವ ಕೋವಿಡ್ ಚೆಕ್‌ಪೋಸ್ಟ್ ನಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌ ಮತ್ತು ಕಂದಾಯ, ಆರೋಗ್ಯ ಇಲಾಖೆ, ಆಶಾ ಸಿಬ್ಬಂದಿಗಳಿಗೆ ಸನ್ಮಾನಿಸಿ ಮಾತನಾಡಿದರು. ಮಾಹಾಮಾರಿ ಹೆಚ್ಚು ಹಬ್ಬಿರುವ ಗಡಿ ರಾಜ್ಯ ಮಾಹಾರಾಷ್ಟ್ರ ಸಂಪರ್ಕ ಹೊಂದಿರುವ ರಾಷ್ಟೀಯ ಹೆದ್ದಾರಿ ಮೇಲೆ ಕೆಲಸ ಮಾಡುವುದು ಸುಲಭದ ಮಾತಲ್ಲ. ಎಲ್ಲರಿಗೂ ತಮ್ಮದೆ ಆದ ಜೀವನ ಇರುತ್ತೆ. ಆದರೆ, ಇಂತಹ ಸಂದರ್ಭದಲ್ಲಿ ಕುಟುಂಬ ಎನ್ನುವುದನ್ನು ಮರೆತು ಕರ್ತವ್ಯ ಪಾಲನೆ ಮಾಡುತ್ತಿರುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ಅವರಿಗೆ ಅಭಿನಂದಿಸಬೇಕಿದೆ ಎಂದರು.

ಚಡಚಣ ತಹಶೀಲ್ದಾರ್‌ ಎನ್‌.ಬಿ.ಗೆಜ್ಜಿ, ಡಿವೈಎಸ್‌ಪಿ ತುಳಜಪ್ಪಾ ಸುಲಪಿ, ಪಿಎಸ್‌ಐ ಪರಶುರಾಮ ಮನಗೂಳಿ, ಡಾ| ಉದಯ ಕಾರಜೋಳ, ನಿವರಗಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ನಾಗೇಂದ್ರ ಬಿರಾದಾರ (ಶಿರನಾಳ), ಅಪ್ಪುಗೌಡ ಪಾಟೀಲ (ಗೋಳಗಿ), ರಾಜುಗೌಡ ಪಾಟೀಲ, ಭೀಮು ವಾಲಿಕಾರ, ಗೌಡೇಶ ಪಾಟೀಲ, ಸಂಗಮೇಶ ಗೋರೆ, ಸಿದ್ದುಗೌಡ ಪಾಟೀಲ, ಹಸನ್‌ ಮಕಾಂದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next