Advertisement

INDWvsAUSW: 51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

12:18 PM Dec 12, 2024 | Team Udayavani |

ಪರ್ತ್:‌ ಟೀಂ ಇಂಡಿಯಾ ಉಪನಾಯಕಿ, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಸ್ಮೃತಿ ಮಂಧನಾ ಅವರ ಶತಕದ ಹೊರತಾಗಿಯೂ ಭಾರತ ಈ ಪಂದ್ಯದಲ್ಲಿ ಸೋಲನುಭವಿಸಿತು.

Advertisement

ಮಂಧನಾ ಅವರು 2024 ರ ನಾಲ್ಕನೇ ಶತಕ ಗಳಿಸಿದರು. ಈ ಗಮನಾರ್ಹ ಸಾಧನೆಯು ವಿಸ್ಡನ್ ಪ್ರಕಾರ, ಮಹಿಳಾ ಏಕದಿನಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಅತಿ ಹೆಚ್ಚು ಶತಕಗಳ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತು.

ಆಶ್ಲೀ ಗಾರ್ಡ್ನರ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಸಹ ಅರ್ಧಶತಕಗಳ ಕೊಡುಗೆ, ಅನ್ನಾಬೆಲ್ ಸದರ್ಲ್ಯಾಂಡ್ ಅವರ 99 ಎಸೆತಗಳಲ್ಲಿ 110 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 299 ರನ್ ಗುರಿ ನೀಡಿತ್ತು. ಆದರೆ ಭಾರತದ ಪರ ಸ್ಮೃತಿ ಹೊರತಾಗಿ ಯಾವ ಆಟಗಾರ್ತಿಯೂ ಸಾಥ್‌ ನೀಡಲಿಲ್ಲ. ಹೀಗಾಗಿ ಭಾರತ ಸೋಲು ಕಂಡಿತು.

ಜೂನ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಮತ್ತು ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ ಒಂದು ಶತಕಗಳ ನಂತರ ಮಂಧಾನ ಅವರ ವರ್ಷದ ನಾಲ್ಕನೇ ಶತಕವಾಗಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕ ಬಾರಿಸಿದ ಸ್ಮೃತಿ ಮಹಿಳಾ ಏಕದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದರರು. ಒಂದು ವರ್ಷದಲ್ಲಿ ತಲಾ ಮೂರು ಶತಕಗಳನ್ನು ಗಳಿಸಿದ ಏಳು ಆಟಗಾರರ ಹಿಂದಿನ ದಾಖಲೆಯನ್ನು ಮೀರಿಸಿದರು.

Advertisement

ಇದೇ ವೇಳೆ ಮಂಧಾನಾ ಅವರು ಮಹಿಳಾ ಏಕದಿನಗಳಲ್ಲಿ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೇರಿದರು. ಈದು ಅವರ 9ನೇ ಶತಕವಾಗಿದೆ. ಅವರು ಈಗ ನ್ಯಾಟ್ ಸಿವರ್-ಬ್ರಂಟ್, ಚಾಮರಿ ಅತ್ತಪತ್ತು ಮತ್ತು ಚಾರ್ಲೊಟ್ ಎಡ್ವರ್ಡ್ಸ್ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next