Advertisement

INDvsSL; ಸರಣಿ ಸೋಲಿನಿಂದ ಪ್ರಪಂಚ ಅಂತ್ಯವಾಗಿಲ್ಲ…: ನಾಯಕ ರೋಹಿತ್‌ ಶರ್ಮಾ

03:07 PM Aug 08, 2024 | Team Udayavani |

ಕೊಲಂಬೊ: ಶ್ರೀಲಂಕಾ ವಿರುದ್ದ ಭಾರತ 27 ವರ್ಷಗಳ ಬಳಿಕ ಏಕದಿನ ಸರಣಿಯಲ್ಲಿ ಸೋಲು ಕಂಡಿದೆ. ಬುಧವಾರ (ಆ.07) ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು (Team India) ಹೀನಾಯ ಸೋಲು ಕಂಡಿದೆ. ಗೆಲುವಿಗೆ 249 ರನ್‌ ಗುರಿ ಪಡೆದಿದ್ದ ಭಾರತವು ಕೇವಲ 138 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಸೋಲನುಭವಿಸಿತು.

Advertisement

ಸ್ಪಿನ್ನರ್‌ ಗಳಿಗೆ ನೆರವು ನೀಡುತ್ತಿದ್ದ ಪಿಚ್‌ ನಲ್ಲಿ ಬ್ಯಾಟಿಂಗ್‌ ಮಾಡಲು ಭಾರತೀಯ ಬ್ಯಾಟರ್‌ ಗಳು ಪರದಾಡಿದರು. ಸರಣಿಯ ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಮತ್ತು ಮೂರನೇ ಪಂದ್ಯ ಸೋತ ಭಾರತ ಸರಣಿ ಸೋಲು ಕಂಡಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್ (Rohit Sharma), ಫಲಿತಾಂಶದಿಂದ ತಂಡಕ್ಕೆ ದೊಡ್ಡ ಚಿಂತೆಯಲ್ಲ. ಸರಣಿಯನ್ನು ಕಳೆದುಕೊಂಡರೂ ಇದೇ ವಿಶ್ವದ ಅಂತ್ಯ ಅಲ್ಲ ಎಂದು ಹೇಳಿದರು.

“ಇದು ಆತಂಕಕಾರಿ ಎಂದು ನಾನು ಭಾವಿಸುವುದಿಲ್ಲ. ಆದರೆ ಇದನ್ನು ನಾವು ವೈಯಕ್ತಿಕವಾಗಿ ಮತ್ತು ಆಟದ ಯೋಜನೆಯಾಗಿ ನೋಡಬೇಕಾಗಿದೆ. ನೀವು ಭಾರತಕ್ಕಾಗಿ ಆಡುವಾಗ ಎಂದಿಗೂ ತೃಪ್ತರಾಗುವುದಿಲ್ಲ. ಆದರೆ ನೀವು ಉತ್ತಮವಾದ ಕ್ರಿಕೆಟ್‌ ಗೆ ಮನ್ನಣೆ ನೀಡಬೇಕು. ಶ್ರೀಲಂಕಾ ನಮಗಿಂತ ಉತ್ತಮ ಕ್ರಿಕೆಟ್‌ ಆಡಿತು. ಸರಣಿ ಸೋಲು ಪ್ರಪಂಚದ ಅಂತ್ಯವಲ್ಲ, ನೀವು ಕೆಲವೊಮ್ಮೆ ಸರಣಿಯನ್ನು ಕಳೆದುಕೊಳ್ಳುತ್ತೀರಿ. ಆದರೆ ಸೋತ ನಂತರ ನೀವು ಹೇಗೆ ಮರಳಿ ಬರುತ್ತೀರಿ ಎನ್ನುವುದರಲ್ಲಿದೆ” ಎಂದು ರೋಹಿತ್‌ ಹೇಳಿದರು.

Advertisement

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ 7 ವಿಕೆಟ್‌ ನಷ್ಟಕ್ಕೆ 248 ರನ್‌ ಗಳಿಸಿತು. ಅವಿಷ್ಕಾ ಫರ್ನಾಂಡೋ 96 ರನ್‌ ಮತ್ತು ಕುಸಾಲ್‌ ಮೆಂಡಿಸ್‌ 59 ರನ್‌ ಗಳಿಸಿದರು.

ಇದಕ್ಕುತ್ತರವಾಗಿ ಭಾರತ 26.1 ಓವರ್‌ ಗಳಲ್ಲಿ 138 ರನ್‌ ಗಳಿಗೆ ಆಲೌಟಾಯಿತು. ಲಂಕಾದ ದುನಿತ್‌ ವೆಲ್ಲಾಲಗೆ 5 ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next