ದುಬೈ: ಐಸಿಸಿ ಟಿ20 ವಿಶ್ವಕಪ್ ಕೂಟದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡದ ಆಯ್ಕೆಯಲ್ಲೇ ಎಡವಿತ್ತೆಂಬುದರಲ್ಲಿ ಅನುಮಾನವಿಲ್ಲ. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು.
ಇಲ್ಲಿನ ಆಡುವ ಬಳಗದಲ್ಲಿ ಇಶಾನ್ ಕಿಶನ್, ಆರ್.ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ ಇರಬೇಕಿತ್ತೆಂಬುದು ಸಾರ್ವತ್ರಿಕ ಅಭಿಪ್ರಾಯ. ಫಾರ್ಮ್ ನಲ್ಲಿಲ್ಲದ ಭುವನೇಶ್ವರ್ ಕುಮಾರ್, ಕೇವಲ ಬ್ಯಾಟಿಂಗಿಗಷ್ಟೇ ಸೀಮಿತಗೊಂಡ ಹಾರ್ದಿಕ್ ಪಾಂಡ್ಯ ದುಬಾರಿಯಾಗಿ ಪರಿಣಮಿಸಿದರು. ಹೀಗಾಗಿ ಕಿವೀಸ್ ವಿರುದ್ಧ ಪ್ಲೇಯಿಂಗ್ ಇಲೆವೆನ್ ನಿರ್ಣಾಯಕವಾಗಲಿದೆ.
ಬ್ಲ್ಯಾಕ್ ಕ್ಯಾಪ್ಸ್ ಸ್ಪಿನ್ ನಿಭಾಯಿಸುವಲ್ಲಿ ತುಸು ಹಿಂದೆ ಎಂಬುದನ್ನು ಗಮನಿಸಬೇಕು. ಪಾಕ್ ವಿರುದ್ಧ ಒಂದೂ ವಿಕೆಟ್ ಕೀಳಲಾಗದವರು ಇಲ್ಲಿ ಜಾದೂ ಮಾಡಲೇಬೇಕಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ ನಲ್ಲಿ ಕಿವೀಸ್ ವಿರುದ್ಧ ಉತ್ತಮವಾಗಿಲ್ಲ ದಾಖಲೆ! ಸೇಡು ತೀರಿಸಬಹುದೇ ಭಾರತ
ಪಾಕಿಸ್ತಾನ ವಿರುದ್ಧ ಭಾರತದ ಓಪನಿಂಗ್ ಘೋರ ವೈಫಲ್ಯ ಕಂಡಿತ್ತು. ಶಾಹೀನ್ ಶಾ ಅಫ್ರಿದಿ ಎಸೆತಗಳಿಗೆ ಉತ್ತರವಿರಲಿಲ್ಲ. ಇಲ್ಲಿ ಬೌಲ್ಟ್, ಸೌದಿ, ಜೇಮಿಸನ್ ಇದ್ದಾರೆ. ರೋಹಿತ್-ರಾಹುಲ್, ಕೊಹ್ಲಿ ಯಶಸ್ಸು ಕಂಡರೆ ಸವಾಲಿನ ಮೊತ್ತ ಸಾಧ್ಯ. ಭಾರತದ ಪರ ನಿಂತು ಆಡುವವರು ಈ ಮೂರು ಮಂದಿ ಮಾತ್ರ. ಅಂದಹಾಗೆ ಟಾಸ್ ಕೂಡ ನಿರ್ಣಾಯಕವಾಗಲಿದೆ.