ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೊದಲ ಸೆಶನ್ ನಲ್ಲಿ ಭಾರತ ರಹಾನೆ, ವಿಹಾರಿ ವಿಕೆಟ್ ಕಳೆದುಕೊಂಡಿದೆ. ಪೂಜಾರ ಮತ್ತು ಪಂತ್ ಕ್ರೀಸ್ ನಲ್ಲಿದ್ದು ಆಡುತ್ತಿದ್ದಾರೆ.
ಲಂಚ್ ವಿರಾಮದ ವೇಳೆ ಭಾರತ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ. ಪೂಜಾರ 42 ರನ್ ಮತ್ತು ಪಂತ್ 29 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಇನ್ನೂ 158 ರನ್ ಹಿನ್ನಡೆಯಲ್ಲಿದೆ.
ಎರಡು ವಿಕೆಟ್ ಗೆ 96 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಬೇಗನೇ ಕಳೆದುಕೊಂಡಿತು. ನಂತರ ಪೂಜಾರ ಜೊತೆಗೂಡಿದ ಹನುಮ ವಿಹಾರಿ ಕೂಡಾ ಕೇವಲ ನಾಲ್ಕು ರನ್ ಗಳಿಸಿದ್ದಾಗ ಬೇಡದ ರನ್ ಗೆ ಓಡಿ ರನ್ ಔಟ್ ಆದರು.
ನಂತರ ಕ್ರೀಸ್ ಗೆ ಆಗಮಿಸಿದ ರಿಷಭ್ ಪಂತ್ ವೇಗವಾಗಿ ಬ್ಯಾಟ್ ಬೀಸಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಗೆ ಮೊರೆಹೋದ ಪೂಜಾರ ನಂತರ ವೇಗವಾಗಿ ರನ್ ಕಲೆಹಾಕಿದರು.
ಆಸೀಸ್ ಪರ ಕಮಿನ್ಸ್ ಎರಡು ವಿಕೆಟ್ ಪಡೆದರೆ, ಒಂದು ವಿಕೆಟ್ ಹ್ಯಾಜಲ್ ವುಡ್ ಪಾಲಾಯಿತು. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 338 ರನ್ ಗಳಿಸಿತ್ತು.