Advertisement

INDvsAFG; ಧೋನಿ ಬೃಹತ್ ದಾಖಲೆ ಮುರಿಯುವತ್ತ ರೋಹಿತ್ ಚಿತ್ತ

05:03 PM Jan 11, 2024 | Team Udayavani |

ಮೊಹಾಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸುಮಾರು 14 ತಿಂಗಳ ನಂತರ ಅಂತಾರಾಷ್ಟ್ರೀಯ ಟಿ20 ಆಕ್ಷನ್‌ ಗೆ ಮರಳಲಿದ್ದು, ಗುರುವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ನವೆಂಬರ್ 2022 ರಲ್ಲಿ ರೋಹಿತ್ ಕೊನೆಯ ಬಾರಿಗೆ ಅ ಪಂದ್ಯವನ್ನು ಆಡಿದ್ದರು ಅದು ಟಿ20 ವಿಶ್ವಕಪ್ 2022 ರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯವಾಗಿತ್ತು. 2024ರ ಟಿ20 ವಿಶ್ವಕಪ್ ಗೆ ಸಿದ್ದತೆ ಆರಂಭವಾದಂತೆ ರೋಹಿತ್ ಸಹ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯೊಂದಿಗೆ ಮತ್ತೆ ತಂಡ ಸೇರಿಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ರಿಟರ್ನ್ ವಿಶೇಷವಾಗಿದ್ದರೆ, ನಾಯಕನಾಗಿ ರೋಹಿತ್ ಬೃಹತ್ ದಾಖಲೆಯನ್ನು ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ.

ಗೆದ್ದ ಪಂದ್ಯಗಳಿಗೆ ಸಂಬಂಧಿಸಿದಂತೆ ರೋಹಿತ್ ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕನಾಗುವ ಅಂಚಿನಲ್ಲಿದ್ದಾರೆ. ಎಂಎಸ್ ಧೋನಿ ಪ್ರಸ್ತುತ 72 ಪಂದ್ಯಗಳಿಂದ 41 ಗೆಲುವಿನೊಂದಿಗೆ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ರೋಹಿತ್ 51 ಸಂದರ್ಭಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದು, ತಂಡವು 39 ರಲ್ಲಿ ವಿಜಯಶಾಲಿಯಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭಾರತವು ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾದರೆ ರೋಹಿತ್ ಶರ್ಮಾ ಅವರು ಧೋನಿ ದಾಖಲೆ ಮುರಿದು ಭಾರತದ ಪರ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ನಾಯಕನಾಗುತ್ತಾರೆ.

ಭಾರತ ತಂಡ

Advertisement

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್ , ಅವೇಶ್ ಖಾನ್, ಮುಖೇಶ್ ಕುಮಾರ್.

Advertisement

Udayavani is now on Telegram. Click here to join our channel and stay updated with the latest news.

Next