Advertisement

“ಆತ್ಮನಿರ್ಭರ’ರೆಫ್ರಿಜರೇಟರ್‌ ರಂಗ ನಿರ್ಮಾಣಕ್ಕೆ ಚಿಂತನೆ

02:20 PM Jun 10, 2022 | Team Udayavani |

ನವದೆಹಲಿ: ರೆಫ್ರಿಜರೇಟರ್‌ ರಂಗದಲ್ಲಿ ಭಾರತವು ಅತಿಯಾಗಿ ವಿದೇಶಿ ಆಮದಿನ ಮೇಲೆ ಅವಂಬಿತವಾಗಿರುವುದನ್ನು ತಪ್ಪಿಸುವ ಉದ್ದೇಶದಿಂದ, ವಿದೇಶಗಳಿಂದ ರೆಫ್ರಿಜರೇಟರ್‌ಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣದ ಮೇಲೆ ಇತಿ-ಮಿತಿಗಳನ್ನು ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Advertisement

ಜೊತೆಗೆ, ದೇಶೀಯ ಮಟ್ಟದಲ್ಲಿ ರೆಫ್ರಿಜರೇಟರ್‌ ರಂಗಕ್ಕೆ ಉತ್ತೇಜನ ನೀಡಿ ಈ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿಸುವ ಯೋಜನೆಯನ್ನು ರೂಪಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ವಾರ್ಷಿಕವಾಗಿ 38 ಸಾವಿರ ಕೋಟಿ ರೂ. ವ್ಯವಹಾರ ನಡೆಯುವ ದೇಶೀಯ ರೆಫ್ರಿಜರೇಟರ್‌ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳು ಹೊಂದಿರುವ ಹಿಡಿತವನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಎಲ್‌ಜಿ, ಸ್ಯಾಮ್ಸಂಗ್‌ನಂಥ ಕಂಪನಿಗಳು ತಮ್ಮ ರೆಫ್ರೆಜರೇಟರ್‌ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸುವುದು, ಸದ್ಯಕ್ಕಿರುವ ಉಚಿತ ಆಮದು ನೀತಿಯನ್ನು ರದ್ದುಗೊಳಿಸಿ ಆಮದು ರೆಫ್ರಿಜರೇಟರ್‌ಗಳ ಮೇಲೆ ಸುಂಕ ವಿಧಿಸುವುದು ಇತ್ಯಾದಿಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next