Advertisement

ಕೋವಿಡ್‌-19 ಅಟ್ಟಹಾಸಕ್ಕೆ ನೆಲಕಚ್ಚಿದ ಉದ್ಯಮ ವಲಯ

03:20 PM May 13, 2021 | Team Udayavani |

ಬೆಳಗಾವಿ: ಕೊರೊನಾ ಹೊಡೆತ ಕಳೆದವರ್ಷದಂತೆ ಈ ಬಾರಿಯ ಎರಡನೇ ಅಲೆಯಲ್ಲೂ ಅನೇಕ ಉದ್ಯಮಗಳಮೇಲೆ ಬಿದ್ದಿದ್ದು, ಜಿಲ್ಲೆಯ ಜವಳಿ,ಸ್ವರ್ಣೋದ್ಯಮ, ಆಟೋಮೊಬೆ„ಲ್‌,ರಿಯಲ್‌ ಎಸ್ಟೇಟ್‌ ಉದ್ಯಮಗಳುಭಾರಿ ನಷ್ಟಕ್ಕೆ ಒಳಗಾಗಿವೆ. ಕೆಲದಿನಗಳ ಹಿಂದೆಯಷ್ಟೇ ಜಾರಿಯಾದಕರ್ಫ್ಯೂದಿಂದಾಗಿ ಕೋಟ್ಯಂತರ ರೂ.ನಷ್ಟ ಅನುಭವಿಸುತ್ತಿವೆ.

Advertisement

ಕಳೆದ ಸಲದಂತೆ ಈ ವರ್ಷವೂಮಹಾಮಾರಿ ಅಟ್ಟಹಾಸಮೆರೆಯುತ್ತಿದ್ದು, ಕೊರೊನಾ ಇಡೀಉದ್ಯಮ ವಲಯವನ್ನೇ ನುಂಗಿಬಿಡುತ್ತಿದೆ. ಕೆಲ ಉದ್ಯಮಗಳುಕಳೆದ ಒಂದೆರಡು ತಿಂಗಳಿಂದ ಕಣ್ಣುಬಿಡುವಷ್ಟರಲ್ಲಿ ಮತ್ತೆ ಮಹಾಮಾರಿಯಅಲೆ ಅಪ್ಪಳಿಸಿದ್ದು, ಇದರಿಂದಉದ್ಯಮವಷ್ಟೇ ಅಲ್ಲ, ಇದನ್ನುನಂಬಿರುವ ಸಾವಿರಾರು ಕಾರ್ಮಿಕರಕುಟುಂಬಕ್ಕೂ ಹೊಡೆತ ಬಿದ್ದಿದೆ.ಜಿಲ್ಲೆಯಲ್ಲಿ ಕೊರೊನಾದಿಂದಾಗಿಅನೇಕ ಕುಟುಂಬಗಳು ಬೀದಿಗೆಬೀಳುತ್ತಿವೆ.

ಜಿಲ್ಲೆಯಲ್ಲಿ ಜವಳಿಉದ್ಯಮವನ್ನು ನಂಬಿಕೊಂಡಿರುವವರಪಾಲಿಗೆ ಕೊರೊನಾ ಅಕ್ಷರಶಃನರಕವಾಗಿದೆ. ಸೀರೆ ಉದ್ಯಮದಿಂದಬದುಕು ಕಟ್ಟಿಕೊಂಡ ಕಾರ್ಮಿಕರುಈ ಕೆಲಸವೇ ಸಾಕು ಎಂಬ ಮನಸ್ಥಿತಿಗೆಬಂದಿದ್ದಾರೆ.ಸೀರೆ ಉದ್ಯಮಕ್ಕೆ ಮತ್ತೂಂದುಹೊಡೆತ: ಜಿಲ್ಲೆಯ ರಾಮದುರ್ಗ,ಸುರೇಬಾನ, ಕಡಕೋಳ, ಶಹಾಪುರ,ವಡಗಾಂವ, ಸುಳೇಭಾವಿ, ಖಾಸಬಾಗಸೇರಿದಂತೆ ವಿವಿಧ ಕಡೆಗಳಲ್ಲಿ ಸೀರೆಉದ್ಯಮವನ್ನೇ ನಂಬಿರುವ ಅನೇಕರುಇದ್ದಾರೆ. ಈಗ ಲಾಕ್‌ಡೌನ್‌ದಿಂದಗಿಈ ಉದ್ಯಮ ಸ್ಥಗಿತಗೊಂಡಿದೆ. ಕಚ್ಚಾವಸ್ತು ಬಾರದ್ದಕ್ಕೆ ಮತ್ತು ಸೀರೆಗಳುಬೇರೆ ಕಡೆಗೆ ಹೋಗದ್ದಕ್ಕೆ ಉದ್ಯಮಸಂಪೂರ್ಣ ನಿಶ್ಯಬ್ದವಾಗಿದೆ.ನೇಕಾರರು ಕೆಲಸವಿಲ್ಲದೇ ಖಾಲಿಕುಳಿತು ಬದುಕು ಕಟ್ಟಿಕೊಳ್ಳುವುದುಹೇಗೆ ಎಂಬ ಚಿಂತೆಯಲ್ಲಿದಾರೆ.

2019ರಲ್ಲಿ ಅಪ್ಪಳಿಸಿದಪ್ರವಾಹದಿಂದ 20ರಿಂದ 25ಸಾವಿರ ವಿದ್ಯುತ್‌ ಮಗ್ಗಗಳುಹಾಳಾಗಿ ಹೋಗಿದ್ದವು. 2020ರಲ್ಲಿಲಾಕಡೌನ್‌ದಿಂದಾಗಿ 50ಲಕ್ಷಕ್ಕೂಹೆಚ್ಚು ಸೀರೆಗಳು ಮನೆಯಲ್ಲಿ ಬಿದ್ದುಕೊಳೆಯುವಂತಾಗಿದ್ದವು. ಈಗ ಮತ್ತೆಸೀರೆ ವ್ಯವಹಾರಕ್ಕೆ ಕೊಕ್ಕೆ ಬಿದ್ದಿದೆ. ಸತತಮೂರು ವರ್ಷಗಳ ಕಾಲ ನೇಕಾರಿಕೆನಂಬಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಲ, ಆಂಧ್ರ ಪ್ರದೇಶ ಸೇರಿದಂತೆವಿವಿಧ ರಾಜ್ಯಗಳಿಗೆ ಹೋಗುತ್ತಿದ್ದಸೀರೆಗೆ ಈಗ ಬೇಡಿಕೆ ಇಲ್ಲವಾಗಿದೆ.

ಬದುಕೇ ಬಂಗಾರ: ಅಕ್ಷಯತƒತೀಯ ಎಂದರೆ ಹಿಂದೂಗಳಿಗೆಬಂಗಾರ ಖರೀದಿಸುವ ಶುಭ ದಿನ.ಹೀಗಾಗಿ ಇದಕ್ಕೆ ಬಡವರಾದರೂಸಿರಿವಂತನಾದರು ಸ್ವಲ್ಪವಾದರೂಬಂಗಾರ ಖರೀದಿಸುತ್ತಾರೆ. ಆದರೆಕಳೆದ ಎರಡು ವರ್ಷದಿಂದಅಕ್ಷಯ ತƒತಿಯದಂದು ಬಂಗಾರಖರೀದಿಸುವ ಯೋಗವೇ ಇಲ್ಲವಾಗಿದೆ.ಅಕ್ಷಯ ತƒತೀಯದಂದು ಪ್ರತಿ ವರ್ಷಬೆಳಗಾವಿ ನಗರವೊಂದರಲ್ಲಿಯೇಸುಮಾರು 40ರಿಂದ 50 ಕೊಟಿ ರೂ.ವರೆಗೆ ಬಂಗಾರ ಖರೀದಿ ಆಗುತ್ತದೆ.

Advertisement

ಆದರೆ ಈ ವ್ಯವಹಾರಕ್ಕೆ ಸಂಪೂರ್ಣಕೊಕ್ಕೆ ಬಿದ್ದಿದೆ. ಬಂಗಾರವೇಬದುಕು ಎನ್ನುವುದಕ್ಕಿಂತ ಬದುಕೇಬಂಗಾರವಾಗಿದೆ.ಕೋಟ್ಯಂತರ ರೂ. ಸರ್ಕಾರಕ್ಕೆಸಂದಾಯವಾಗುವ ಜಿಎಸ್‌ಟಿಯೂಇಲ್ಲವಾಗಿದೆ. ಸ್ವರ್ಣೋದ್ಯಮದಿಂದಾಗಿಪ್ರತಿ ತಿಂಗಳು ನೂರಾರು ಕೋಟಿರೂ. ವ್ಯವಹಾರ ಬೆಳಗಾವಿಜಿಲ್ಲೆಯೊಂದರಲ್ಲಿಯೇ ನಡೆಯುತ್ತದೆ.ಈಗ ಲಾಕ್‌ಡೌನ್‌ದಿಂದಾಗಿ ಈವ್ಯಾಪಾರ-ವಹಿವಾಟು ಸಂಪೂರ್ಣಸ್ಥಗಿತಗೊಂಡಿದೆ.

ಸಂಕಷ್ಟದಲ್ಲಿ ಬಟ್ಟೆ ಉದ್ಯಮ: ಅಕ್ಷಯತೃತೀಯ, ರಂಜಾನ್‌ ಹಬ್ಬ, ಬಸವಜಯಂತಿ ಸೇರಿದಂತೆ ವಿವಿಧ ಹಬ್ಬಗಳುಸಾಲು ಸಾಲಾಗಿ ಬಂದಿವೆ. ಈಹಬ್ಬಗಳಿಗಾಗಿ ಬಟ್ಟೆ ಖರೀದಿಯಂತೂಜೋರಾಗಿಯೇ ಇರುತ್ತದೆ. ಮೇ,ಜೂನ್‌, ಜುಲೆ„ ತಿಂಗಳಲ್ಲಿ ಮದುವೆಮುಹೂರ್ತ ಹೆಚ್ಚಾಗಿ ಇರುತ್ತವೆ. ಬಟ್ಟೆಖರೀದಿ ಬಹಳ ಜೋರಾಗಿ ಇರುತ್ತದೆ.ಆದರೆ ಲಾಕ್‌ಡೌನ್‌ದಿಂದಾಗಿ ಈಉದ್ಯಮ ಸಂಪೂರ್ಣ ಇಲ್ಲವಾಗಿದೆ.ಕಳೆದ ವರ್ಷವೂ ಬಟ್ಟೆ ಉದ್ಯಮವನ್ನುನಂಬಿಕೊಂಡಿರುವ ಸಾವಿರಾರುಉದ್ಯಮಿಗಳು ಈ ಸಲವೂ ಭಾರೀನಷ್ಟ ಅನುಭವಿಸುತ್ತಿದ್ದಾರೆ.ರಿಯಲ್‌ ಎಸ್ಟೇಟ್‌ ಸಂಪೂರ್ಣಜೀರೋ: ರಿಯಲ್‌ ಎಸ್ಟೇಟ್‌ಉದ್ಯಮದಲ್ಲಿ ಪ್ರತಿ ತಿಂಗಳುಕೋಟ್ಯಂತರ ರೂ. ವ್ಯಾಪಾರವಹಿವಾಟು ನಡೆಯುತ್ತದೆ.

ಜಾಗ,ಮನೆ ಖರೀದಿ ಬಲು ಜೋರಾಗಿನಡೆಯುತ್ತದೆ. ಆದರೆ ಲಾಕ್‌ಡೌನ್‌ ಹೊಡೆತದಿಂದ ಜನ ಮನೆಬಿಟ್ಟು ಹೊರಗೆ ಬರಲಾರದಂತಸ್ಥಿತಿಗೆ ಬಂದು ತಲುಪಿದೆ. ಕಳೆದಒಂದೆರಡು ತಿಂಗಳ ಹಿಂದೆ ಸ್ವಲ್ಪಪ್ರಮಾಣದಲ್ಲಿ ಚೇತರಿಸಿಕೊಂಡಿದ್ದರೀಯಲ್‌ ಎಸ್ಟೇಟ್‌ ಉದ್ಯಮ ಈಗಸಂಪೂರ್ಣವಾಗಿ ಜೀರೋ ಆಗಿಬಿಟ್ಟಿದೆ.ಜಾಗ, ಮನೆ ಖರೀದಿಸುವಲ್ಲಿಜನರು ಹಿಂದೇಟು ಹಾಕುತ್ತಿದ್ದಾರೆ.ನಿತ್ಯ ನೂರಾರು ಜಾಗಗಳ ಖರೀದಿನಡೆಯುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿಈಗ ಶೂನ್ಯಕ್ಕೆ ಬಂದು ತಲುಪಿದೆ.ಕೋಟ್ಯಂತರ ರೂ. ತೆರಿಗೆ ಹಣಸರ್ಕಾರಕ್ಕೆ ಸಂದಾಯವಾಗುತ್ತಿತ್ತು.

ಈಉದ್ಯಮದ ಬಾಗಿಲನ್ನೂ ಲಾಕ್‌ಡೌನ್‌ಮುಚ್ಚಿ ಬಿಟ್ಟಿದೆ.ಕೈಗಾರಿಕೆಗಳು ಬಂದ್‌ ಆಗಿದ್ದರಿಂದಸಾವಿರಾರು ಕಾರ್ಮಿಕರು ಕೆಲಸಇಲ್ಲದೇ ಮನೆಯಲ್ಲಿಯೇಕುಳಿತುಕೊಂಡಿದ್ದಾರೆ. ರಾಷ್ಟ್ರೀಯಮತ್ತು ಅಂತಾರಾಷ್ಟ್ರೀಯಮಾರುಕಟ್ಟೆಗಳೂ ಬಂದ್‌ ಆಗಿಬಿಟ್ಟಿವೆ,. ಬೆಳಗಾವಿ ಕೈಗಾರಿಕೆಯಿಂದಉತ್ಪಾದನೆ ಆಗುವ ವಸ್ತುಗಳು ಬೇರೆಬೇರೆ ಕಡೆಗೆ ರಫು¤ ಆಗುತ್ತಿತ್ತು.ವಿಮಾನ ಸೇವೆ ಬಂದ್‌ ಆಗಿದ್ದರಿಂದಈಗ ಕೈಗಾರಿಕೋತ್ಪನ್ನಗಳಿಗೆ ಬೇಡಿಕೆಇಲ್ಲ. ಜೊತೆಗೆ ಬೆಳಗಾವಿಯಲ್ಲಿಕೈಗಾರಿಕೆಗಳು ಬಾಗಿಲು ಮುಚ್ಚಿವೆ.ಇದರಿಂದ ಕೋಟ್ಯಾಂತರ ರೂ.ವ್ಯವಹಾರ ಸಂಪೂರ್ಣ ಬಂದ್‌ ಆಗಿಬಿಟ್ಟಿದೆ.

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next