Advertisement

ನನಸಾದ ಇಂಡಸ್ಟ್ರಿಯಲ್‌ ನೋಡ್‌ ಕನಸು

06:20 PM Jan 01, 2021 | Team Udayavani |

ತುಮಕೂರು: ಕಲ್ಪತರು ನಾಡಿನ ಜನರು ಬಹಳವರ್ಷಗಳಿಂದ ನಿರಿಕ್ಷಿಸಿದ್ಧ ತುಮಕೂರುಇಂಡಸ್ಟ್ರಿಯಲ್‌ ನೋಡ್‌ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲೆಯ ಜನರಲ್ಲಿ ಸಂತಸ ವ್ಯಕ್ತವಾಗಿದೆ.

Advertisement

ತುಮಕೂರಿನ ವಸಂತ ನರಸಾಪುರ ಕೈಗಾರಿಕಾಪ್ರದೇಶದಲ್ಲಿ ಕೈಗಾರಿಕಾ ಕೈಗಾರಿಕೆ ಸ್ಥಾಪನೆ ಮಾಡುವಕುರಿತು ಸಂಸದ ಜಿ.ಎಸ್‌.ಬಸವರಾಜ್‌ ಪತ್ರ ಬರೆದುಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಾದು ಹೋಗುವ.ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಲ್ಲಿ ವಸಂತನರಸಾಪುರದಲ್ಲಿ ಬಳಿ ಸ್ಥಾಪಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ಅಕ್ಟೋಬರ್‌-2012 ಪಡೆದಿದ್ದರು ಇದಕ್ಕಾಗಿ ಜೈಕಾ ಜಪಾನ್‌ ಸಂಸ್ಥೆಯಿಂದ ಪ್ರಿಲಿಮಿನರಿ ವರದಿ ಸಿದ್ಧಪಡಿಸಲಾಯಿತು.

ಇದೇ ಆವರಣದಲ್ಲಿ 2014ರಲ್ಲಿ ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಸ್ಥಾಪನೆಗೆ ಕೇಂದ್ರದ ತಾತ್ವಿಕಒಪ್ಪಿಗೆ ದೊರೆತ್ತಿತ್ತು. 2016 ರಲ್ಲಿ ಸಂಸದ ಜಿ.ಎಸ್‌.ಬಸವರಾಜ್‌ ತುಮಕೂರು ಇಂಡಸ್ಟ್ರಿಯಲ್‌ನೋಡ್‌ ಮಾಸ್ಟ್ರರ್‌ ಪ್ಲಾನಿಂಗ್‌ ಮಾಡಲು ಅಂದಿನ ಕಾಮರ್ಸ್‌ ಸಚಿವರಾದ ನಿರ್ಮಲಾ ಸಿತಾರಾಮನ್‌ಅವರಿಗೆ ಆಗ್ರಹಿಸಿ ಪತ್ರ ಬರೆದಿದ್ದರು. ಇಂಡಸ್ಟ್ರಿಯಲ್‌ ಕಾರಿಡಾರ್‌ ಸಂಬಂಧದಇಂಡಸ್ಟ್ರಿಯಲ್‌ ನೋಡ್‌ ನಿಗಾ ಕ್ಕೆ ಕೇಂದ್ರ ಸರ್ಕಾರದಿಂದ ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಡೆವಲಪೆ¾ಂಟ್‌ ಟ್ರಸ್ಟ ರಚನೆ ಮತ್ತು ರಾಜ್ಯ ಸರ್ಕಾರದೊಂದಿಗೆ ಸೇರಿ ಎಸ್‌ಸಿವಿ ರಚನೆಯಾಗಿತು. ಈ ದಿನ ಅನುಮೋದನೆಯಾದ ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ನಲ್ಲಿ ಏನೇನು ಬರಬಹುದು. ಮೊದಲ ಹಂತದಲ್ಲಿ 1736 ಎಕರೆ ಭೂ ಪ್ರದೇಶದಲ್ಲಿ ಕೈಗಾರಿಕಾನಗರ ತಲೆ ಎತ್ತಲಿದೆ. ಜಾಗತಿಕ ಮಟ್ಟದ ರಸ್ತೆ ಸೌಕಯ್‌ì, ಎಲ್ಲಾಮೂಲ ಭೂತ ಸೌಕರ್ಯ ಹೊಂದಿದ ವಿಶ್ವ ಮಟ್ಟದ ಕೈಗಾರಿಕನಗರ ಇದಾಗಲಿದ್ದು ಜಾಗತಿಕ ಮಟ್ಟದಲ್ಲಿ ಪ್ರಶಸ್ಥ ಹೂಡಿಕೆ ತಾಣವಾಗಲಿದೆ ಎಂದು ಶಾಸಕ ಜ್ಯೋತಿಗಣೇಶ್‌ ತಿಳಿಸಿದರು.

ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಕಮಿಟಿ ಆನ್‌ ಎಕ್ನಾಮಿಕ್‌ ಆರ್ಫೇರ್ಸ್‌ ನಿಂದ ಮಹತ್ವದ ಅನುಮೊದನೆ ಮತ್ತು 1701 ಕೋಟಿರೂ ಮೂಲ ಭೂತ ಸೌಕರ್ಯ ಪರಿಚಯಿಸಲು ಆದೇಶ ನೀಡಿದೆ. ತುಮಕೂರುಇಂಡಸ್ಟ್ರಿಯಲ್‌ ನೋಡ್‌ಗೆ ಮಲ್ಟಿಮಾಡಲ್‌ ಉನ್ನತಮಟ್ಟದ ಭೂಸಾರಿಗೆ ವ್ಯವಸ್ಥೆ ಇರಲಿದೆ. ಇಲ್ಲಿವಿವಿಧಸ್ವತಂತ್ರ ಕೈಗಾರಿಕಾ ವಲಯಗಳ ಜೊತೆಗೆ ನಾಲೆಡ್ಜ್ ಪಾರ್ಕ್‌, ಮಾಹಿತಿ ತಂತ್ರಜ್ಞಾನ್‌ ವಲಯ, ಎಮ್‌.ಎಸ್‌.ಎಂ.ಇ ವಲಯಕ್ಕೆ ಮೀಸಲು ವಲಯ ಮತ್ತು ಮುಂದಿನ ಹಂತದಲ್ಲಿ ಫ್ರೈಟ್‌-ವಿಲೇಜ್‌, ಮೆಗಾ ಸ್ಕಿಲ್‌ ಪಾರ್ಕ್‌, ಇರಲಿದೆ. ಎಮ್‌.ಎಸ್‌. ಎಂ.ಟೆಕ್ನಾಲಜಿ ಕೇಂದ್ರ ಸಹಾ ಬರಲಿದ್ದು ಇವೆಲ್ಲವೂತುಮಕೂರು ಯುವಕರು ಎಂಪ್ಲಾಯಬಲ್‌ ಆಗಲು ಸಹಕಾರಿ ಅಗಲಿದೆ.

ವಿವಿಧ ವ್ಯವಸ್ಥೆಗೆ ಅನುಕೂಲ :

Advertisement

ತುಮಕೂರು ಇಂಡಸ್ಟ್ರಿಯಲ್‌ ನೋಡ್‌ಗೆ ನಿಗಾಕ್ಕೆ ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಸ್ಪಿವಿ ಇದೆ. ಅದರ ಮೂಲಕ ಅಭಿವೃದ್ಧಿ, ನಿರ್ವಹಣೆ ಇದು ಭಾರತದ ಅಚ್ಚುಕಟ್ಟಾಗಿ ನಿರ್ವಹಣೆ, ಬ್ರಹತ್‌ ಔದ್ಯೋಮಿಕ ಕೇಂದ್ರ ವಾಗಿ 50000 ಕೋಟಿ ಹೂಡಿಕೆ ಆಗಲಿದೆ ಮತ್ತು ಎರಡು ಲಕ್ಷ ಉದ್ಯೋಗ ಸೃಷ್ಠಿ ಯಾಗಲಿದೆ. ಬೆಂಗಳೂರಿಗೆ ಪಡಸಾಲೆ ನಗರ ತುಮಕೂರು ಆಲ್ಟರ್‌ನೆಟ್‌ ಹೂಡಿಕೆಗೆ ಪ್ರಶಸ್ಥ ತಾಣಆಗಲಿದೆ. ಎರಡನೆಯ ಹಂತದಿಂದ ಐದನೇ ಹಂತದವರಿಗೆ ಒಟ್ಟು 13500 ಎಕರೆ ಭೂ ಪ್ರದೇಶದ ಮೆಗಾ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ನಿರ್ಮಾಣ ವಾಗಲಿದೆ.

ತುಮಕೂರು ಕೈಗಾರಿಕಾ ಪ್ರದೇಶಕ್ಕಾಗಿ ಕಳೆದ 3 ತಿಂಗಳಿನಿಂದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆವು, ಇಂದು ನೆಮ್ಮದಿಯಾಗಿದೆ. ಜಿ.ಬಿ.ಜ್ಯೋತಿಗಣೇಶ್‌, ಶಾಸಕ

ಮೇಕ್‌ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ್‌ ಭಾರತ್‌ಘೋಷಣೆಗೆ ಪೂರಕವಾದ ಕೈಗಾರಿಕಾಟೌನ್‌ ಶಿಪ್‌ ಭವಿಷ್ಯದಲ್ಲಿ ಇದು ಗ್ರೇಟರ್‌ ನೊಯಿಡಾ ಮಾದರಿಯಲ್ಲಿ ತುಮಕೂರು ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ . ಜಿ.ಎಸ್‌.ಬಸವರಾಜ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next