Advertisement

ನಾಡದೋಣಿ ಮೀನುಗಾರರ ಕೈಹಿಡಿದ ಕೈಗಾರಿಕಾ ಸೀಮೆ ಎಣ್ಣೆ

01:02 AM Jun 12, 2024 | Team Udayavani |

ಮಂಗಳೂರು: ಈ ಬಾರಿ ರಾಜ್ಯ ಸರಕಾರವು ಕೈಗಾರಿಕಾ ಸೀಮೆಎಣ್ಣೆ ಪೂರೈಸು ತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದೋಣಿ ಮೀನುಗಾರರು ನಿಟ್ಟು ಸಿರು ಬಿಡುವಂತಾಗಿದೆ.ಮಾಲಿನ್ಯಕಾರಕ ಎನ್ನುವ ಕಾರಣಕ್ಕೆ ಕೇಂದ್ರ ಸರಕಾರವು ರಾಜ್ಯ ಗಳಿಗೆ ನೀಡುವ ಸೀಮೆ ಎಣ್ಣೆಯನ್ನು ಕಡಿಮೆ ಮಾಡುತ್ತ ಬಂದಿತ್ತು.

Advertisement

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರ ಇದಕ್ಕಾಗಿ ಕೈಗಾರಿಕೆಯಿಂದ ನೇರ ಖರೀದಿ ಮಾಡಿ ಕರಾವಳಿಯ ಮೂರು ಜಿಲ್ಲೆಗಳ 8,030 ಪರವಾನಿಗೆದಾರರಿಗೆ ರಿಯಾಯಿತಿ ದರದಲ್ಲಿ ಪ್ರತೀ ತಿಂಗಳು ಪರವಾನಿಗೆಗೆ 200 ಲೀ.ಗಳಂತೆ ಸೆಪ್ಟಂಬರ್‌ನಿಂದ ಮೇ ತಿಂಗಳ ವರೆಗೆ ನೀಡುತ್ತಿರುವುದು ಅನುಕೂಲವಾಗಿದೆ.

ಸಾಮಾನ್ಯವಾಗಿ ನಾಡದೋಣಿ ಮೀನುಗಾರರ ಚಟುವಟಿಕೆ ಚುರು ಕಾಗುವುದು ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಘೋಷಣೆಯಾದ ಬಳಿಕ. ಅದಕ್ಕಾಗಿ ಇತರ ತಿಂಗಳುಗಳಲ್ಲಿ ಬರುವ ಸೀಮೆ ಎಣ್ಣೆಯನ್ನು ಮಿತವಾಗಿ ಬಳಸಿ, ಮಳೆಗಾಲಕ್ಕಾಗಿ ತೆಗೆದಿರಿಸುತ್ತಾರೆ.

ಎಚ್‌ಪಿಸಿಎಲ್‌ನಿಂದ ಸೀಮೆ ಎಣ್ಣೆ
ಪ್ರಸ್ತುತ ಮಂಗಳೂರಿನ ಎಚ್‌ಪಿಸಿಎಲ್‌ ಕಂಪೆನಿಯಿಂದ ಬಿಳಿ ಸೀಮೆ ಎಣ್ಣೆಯನ್ನು ಕರ್ನಾಟಕ ಮೀನು ಗಾರಿಕಾ ಅಭಿವೃದ್ಧಿ ನಿಗಮದವರು ಖರೀದಿಸಿ, ಮೂರೂ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ಸೊಸೈಟಿಗಳಿಗೆ ಕಳುಹಿಸುತ್ತಿದ್ದಾರೆ.

ಹಿಂದೆ ಸಬ್ಸಿಡಿ ರಹಿತ ಪಡಿತರ ಸೀಮೆ ಎಣ್ಣೆಯನ್ನು ಕೇಂದ್ರ ಸರಕಾರ ಲೀಟರ್‌ಗೆ 35 ರೂ.ನಂತೆ ಕೊಡುತ್ತಿತ್ತು. 4 ಸಾವಿರ ಮೀನುಗಾರಿಕಾ ಪರ ವಾನಿಗೆ ಮಾತ್ರವೇ ಇಲಾಖೆಯಲ್ಲಿ ತೋರಿಸಲ್ಪಟ್ಟಿರುವ ಕಾರಣ ಹೆಚ್ಚುವರಿ 4,030 ಪರವಾನಿಗೆಗಳಿಗೂ ಸೀಮೆ ಎಣ್ಣೆ ಹಂಚುವ ಒತ್ತಡ ಇಲಾಖೆಗೆ ಇತ್ತು. ಈಗ ದರ ತುಸು ಹೆಚ್ಚಾದರೂ ಸೀಮೆ ಎಣ್ಣೆ ಪ್ರತೀ ತಿಂಗಳೂ ಸಿಗುತ್ತಿದೆ. ಹಿಂದೆ 35 ರೂ. ಇದ್ದರೆ ಈಗ 56.75 ರೂ.ನಂತೆ ಮೀನುಗಾರರಿಗೆ ಪೂರೈಕೆ ಮಾಡ ಲಾಗುತ್ತಿದೆ. ಮಾರುಕಟ್ಟೆ ದರ ದಿಂದ ಸರಕಾರ ನೀಡುವ 35 ರೂ. ಸಬ್ಸಿಡಿ ಕಳೆದು ಈ ದರದಲ್ಲಿ ನೀಡ ಲಾಗು ತ್ತಿದೆ. ರಾಜ್ಯ ಸರಕಾರದ ಈ ಯೋಜನೆ ಯನ್ನು ಮೀನುಗಾರಿಕಾ ಅಭಿವೃದ್ಧಿ ನಿಯಮ ಅನುಷ್ಠಾನ ಮಾಡುತ್ತಿದೆ.

Advertisement

ಬ್ಯಾಟರಿ ಎಂಜಿನ್‌ ಬಂದಿಲ್ಲ
ಸೀಮೆ ಎಣ್ಣೆ ಪರಿಸರಕ್ಕೆ ಮಾಲಿನ್ಯಕಾರಿ ಎಂಬ ಕಾರಣಕ್ಕೆ ದೋಣಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೇಂದ್ರ ಸರಕಾರ ಹಿಂದೆ ಹೇಳಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಪರ್ಯಾಯವಾಗಿ ಬ್ಯಾಟರಿ ಎಂಜಿನ್‌ ಇನ್ನೂ ಬಂದಿಲ್ಲ ಎನ್ನುತ್ತಾರೆ ಸಾಂಪ್ರದಾಯಿಕ ದೋಣಿ ಮೀನುಗಾರರು.

ರಾಜ್ಯ ಸರಕಾರದ ಯೋಜನೆಯಿಂದ ಸೀಮೆ ಎಣ್ಣೆ ನಿರಂತರ ಸಿಗುತ್ತಿದೆ. ಮತ್ಸ é ಕ್ಷಾಮ ಇರುವ ಸಂದರ್ಭ ದೂರ ಹೋಗುವುದು ವೆಚ್ಚ ದಾಯಕ. ಹಾಗಾಗಿ ಮಳೆಗಾಲದಲ್ಲಿ ಇತರ ಮೀನುಗಾರಿಕೆ ನಿಂತಾಗ ನಮಗೆ ಸ್ವಲ್ಪ ಲಾಭವಾಗುತ್ತದೆ.
-ಅಶ್ವತ್ಥ್ ಕಾಂಚನ್‌, ಅಧ್ಯಕ್ಷರು,
ದ.ಕ. ಮೂಲ ಮೀನುಗಾರರ ಸಂಘ

-ವೇಣು ವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next