ಬಳ್ಳಾರಿ:ಜಿಲ್ಲೆಯಲ್ಲಿವಿವಿಧಉದ್ದಿಮೆಗಳನ್ನುಸ್ಥಾಪಿಸಲು ಹಾಗೂ ವಿವಿಧ ಉತ್ಪನ್ನಗಳನ್ನು ರಫು¤ ಮಾಡಲು ವಿಫುಲ ಅವಕಾಶಗಳಿದ್ದು, ಉದ್ದಿಮೆದಾರರಿಗೆ ಭೂಮಿ ಒದಗಿಸುವಿಕೆ, ಅನುಮೋದನೆ, ಕಾರ್ಮಿಕರ ಕೌಶಲ್ಯವೃದ್ಧಿ ಸೇರಿದಂತೆ ವಿವಿಧ ರೀತಿಯ ಅಗತ್ಯ ಸಹಕಾರಗಳನ್ನು ಜಿಲ್ಲಾಡಳಿತ ಆದ್ಯತೆ ಮೇರೆಗೆ ಒದಗಿಸಲಿದೆ.ಕಡ್ಡಾಯವಾಗಿಸ್ಥಳೀಯರಿಗೆಉದ್ಯೋಗ ನೀಡುವುದಕ್ಕೆ ಉದ್ದಿಮೆಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಸೂಚನೆ ನೀಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾಣಿಜ್ಯ ಸಪ್ತಾಹದ ರಫು¤ ಉತ್ತೇಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೈಗಾರಿಕಾ ನೀತಿ, ಟೆಕ್ಸ್‌ಟೈಲ್ ಪಾಲಿಸಿ, ಕಾಂಪಿಟ್ ವಿತ್ ಚೀನಾ ಯೋಜನೆಗಳಲ್ಲಿ ವಿವಿಧ ರೀತಿಯ ಕೌಶಲ್ಯಕ್ಕೆ ಉತ್ತೇಜನ ಇದೆ. ಜಿಲ್ಲಾ ಖನಿಜ ನಿಧಿ ಅಡಿಯೂ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನೂ ಯಾವ ರೀತಿಯ ಕೌಶಲ್ಯ ಅಗತ್ಯ ಎಂದು ಉದ್ದಿಮೆದಾರರು ತಿಳಿಸಿದಲ್ಲಿ ಜಿಲ್ಲಾಡಳಿತದಿಂದಲೂ ಕೌಶಲ್ಯ ತರಬೇತಿಯನ್ನು ಸ್ಥಳೀಯರಿಗೆ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಡಿಸಿ ಮಾಲಪಾಟಿ ಅವರು ತಾವು ಕೂಡ ಸ್ಥಳೀಯ ಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು ಎಂದರು. ಬಳ್ಳಾರಿಯಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆಯಲ್ಲಿ ಶೇ. 80ರಷ್ಟು ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ. ಅದರ ಬದಲು ಇಲ್ಲಿಯೇ ಪ್ರೊಸೆಸಿಂಗ್ ಯೂನಿಟ್ ಸ್ಥಾಪಿಸಿದರೆ ಸಾಗಾಣಿಕೆ ವೆಚ್ಚ ಉಳಿಯುವುದರ ಜತೆಗೆ ಒಳ್ಳೆಯ ದರ ರೈತರಿಗೆ ಸಿಗುತ್ತದೆ ಮತ್ತು ಉದ್ದಿಮೆದಾರರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿಯೂ ಇಲ್ಲಿನ ಉದ್ದಿಮೆದಾರರುಯೋಚಿಸಬೇಕು.ಬಳ್ಳಾರಿಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿಕಾಯಿ ಸಂಸ್ಕರಣಾಘಟಕಕ್ಕೆ 9 ಎಕರೆ ಹಂಚಿಕೆ ಮಾಡಲಾಗಿದ್ದು, ಇನ್ನೂ 3 ಎಕರೆ ಹಂಚಿಕೆ ಮಾಡಲಾಗುವುದು ಎಂದರು.
ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮೂಲಸೌಕರ್ಯ ಕಲ್ಪಿಸುವಿಕೆಯಲ್ಲಿ ವಿಫುಲ ಅವಕಾಶಗಳಿದ್ದು, ಈ ಬಗ್ಗೆಯೂ ಗಮನಹರಿಸಿ ಹೂಡಿಕೆ ಮಾಡುವುದಕ್ಕೆ ಉದ್ದಿಮೆದಾರರು ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿಲಭ್ಯವಿರುವಉತ್ಪನ್ನಗಳಿಗೆರಫ್ತಿಗೆಇರುವ ಅವಕಾಶಗಳ ಬಗ್ಗೆ ಪರಿಚಯಿಸುವುದು. ಈಗಾಗಲೇ ಜಿಲ್ಲೆಯಿಂದ ರಫ್ತಾಗುತ್ತಿರುವ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಬೇಡಿಕೆ ಇರುವಂತೆ ದೇಶಗಳಿಗೆ ರಫು¤ ಮಾಡುವ ಬಗ್ಗೆ ಅರಿವು ಮೂಡಿಸುವುದು. ರಫು¤ ಕ್ಷೇತ್ರದಲ್ಲಿ ದೇಶ ಮತ್ತು ವಿದೇಶಗಳಲ್ಲಿರುವ ಅವಕಾಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ರಫ್ತು ಉತ್ತೇಜನಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ರಫ್ತು ಉತ್ತೇಜನಾ ಸಮಿತಿ ರಚಿಸಲಾಗಿದ್ದು, ರಫ್ತು ಉತ್ತೇಜನಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗನುಗುಣವಾಗಿ ಪ್ರತಿ ಜಿಲ್ಲೆಯನ್ನು ರಫ್ತು ಕೇಂದ್ರವಾಗಿಸುವ ದೃಷ್ಟಿಯಿಂದ ಜಿಲ್ಲಾ ರಫ್ತು ಹಬ್ ಅನ್ವಯ ಗ್ರಾನೈಟ್, ಜೀನ್ಸ್, ಐರಾನ್ ಸಂಬಂ ಧಿತ ಉತ್ಪನ್ನಗಳು, ಎಂಜನಿಯರಿಂಗ್ ಉತ್ಪನ್ನಗಳು, ಅಂಜೂರ, ಮೆಣಸಿನಕಾಯಿ, ಉಡುಪುಗಳು, ಅಕ್ಕಿಯನ್ನು ಗುರುತಿಸಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನದತ್ತ ಗಮನ, ರಫ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ರಫ್ತು ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.
ಅಮೆಜಾನ್ ಫ್ಲಿಫ್ ಕಾರ್ಟ್‌ನೊಂದಿಗೆ ಒಪ್ಪಂದ: ಬಳ್ಳಾರಿ ಜಿಲ್ಲೆಯಲ್ಲಿರುವ ಸ್ಥಳೀಯ ಉತ್ಪನ್ನಗಳಿಗೆ ಇ-ಕಾಮರ್ಸ್ ಫ್ಲಾಟ್‌ಫಾರಂ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ತಿಳಿಸಿದರು. ಜಿಲ್ಲೆಯಲ್ಲಿರುವ ಉದ್ದಿಮೆದಾರರು, ಉತ್ಪಾದಕರು ಹಾಗೂ ವ್ಯಾಪಾರಸ್ಥರು ತಮ್ಮ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡಬಹುದಾಗಿದೆ. ಈಗಾಗಲೇ ಅಮೆಜಾನ್ ಸಂಸ್ಥೆ ಮತ್ತು ಉದ್ದಿಮೆದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿ ಉದ್ದಿಮೆಗಳನ್ನು ಇ-ಕಾಮರ್ಸ್ ಮೂಲಕ ಆನ್‌ಬೋರ್ಡ್ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು. ರಫು¤ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೊಸ ಕೈಗಾರಿಕಾ ನೀತಿಯು ರಫ್ತು ಉದ್ದಿಮೆಗಳಿಗೆ ವಿಶೇಷವಾದ ರಿಯಾಯ್ತಿ ಮತ್ತು ಸೌಲಭ್ಯಗಳನ್ನು ಮತ್ತು ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ಅವರು ವಿವರಿಸಿದರು. ಜಿಲ್ಲೆಯಲ್ಲಿರುವ ಉತ್ಪಾದಕರು, ಉದ್ದಿಮೆದಾರರ ಹಾಗೂ ಕುಶಲಕರ್ಮಿಗಳು ಈ ರಫು¤ ಉತ್ತೇಜನಾ ಕಾರ್ಯಕ್ರಮಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ಅವರು ಮಾತನಾಡಿ, ರಫ್ತುದಾರರಿಗೆ ಉತ್ಪನ್ನಗಳ ರಫ್ತು ಸಂದರ್ಭದಲ್ಲಿ ಸಾಕಷ್ಟು ಗೊಂದಲಗಳು ಮತ್ತು ಪ್ರಶ್ನೆಗಳು ಮೂಡುವುದು ಸಹಜ. ಅವುಗಳಿಗೆಲ್ಲವುಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಮತ್ತು ಅನೇಕ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಪಾಲನ್ನ, ವಿಜಯನಗರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕ ಕೊತಂಬರಿ, ಡಿಜೆಎಫ್‌ಐನ ಅಕ್ಷಯಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜ ಸೇರಿದಂತೆ ಉದ್ದಿಮೆದಾರರು ಇದ್ದರು. ನಂತರ ರಫ್ತಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆದವು.
ಜಿಲ್ಲಾ ಸಂಕೀರ್ಣ ನೂತನ ಕಟ್ಟಡದ ವಿನ್ಯಾಸ ಕಾರ್ಯ ಪೂರ್ಣ
ಬಳ್ಳಾರಿ: ನಗರದ ಸರ್ಕಾರಿ ಅತಿಥಿಗೃಹದ ಸಮೀಪ ನಿರ್ಮಾಣವಾಗುತ್ತಿರುವ ಜಿಲ್ಲಾ ಸಂಕೀರ್ಣ ಕಟ್ಟಡದಲ್ಲಿ ಇಲಾಖೆಗಳ ಕಚೇರಿಗಳಿಗೆ ಸ್ಥಳ ಕಲ್ಪಿಸುವ ಮತ್ತು ವಿನ್ಯಾಸ ಅಂತಿಮಗೊಳಿಸುವಿಕೆ ಸಂಬಂಧಿಸಿದಂತೆ ನೂತನ ಜಿಲ್ಲಾ ಸಂಕೀರ್ಣ ಕಟ್ಟಡದ ಕೋರ್ಟ್ ಸಭಾಂಗಣದಲ್ಲಿ ಶುಕ್ರವಾರ ಸಭೆ ಜರುಗಿತು. ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮೊದಲಿಗೆ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಕರ್ನಾಟಕ ಗೃಹಮಂಡಳಿ ಕಾರ್ಯನಿರ್ವಾಹಕ ಎಂಜನಿಯರ್ ಶಿವಶಂಕರ್ ಅವರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ವಿವಿಧ ಇಲಾಖೆಗಳು ಕೋರಿರುವ ಸ್ಥಳಾವಕಾಶ ಸರಿಯಾಗಿದೆಯೇ ಮತ್ತು ಇನ್ನಿತರೆ ಏನಾದರೂ ವಿನ್ಯಾಸದಲ್ಲಿ ಬದಲಾವಣೆ ಅವಶ್ಯವಿದೆಯೇ, ತಮ್ಮ ಕಚೇರಿಯಲ್ಲಿರುವ ಅಧಿಕಾರಿಗಳು ಮತ್ತು ಹುದ್ದೆಗಳ ಸಂಖ್ಯೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಈ ಸಂದರ್ಭದಲ್ಲಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಆಕಾಶ ಶಂಕರ್, ತಹಶೀಲ್ದಾರ್ ರೆಹಮಾನ್ ಪಾಶಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.