Advertisement

ಏಳು ವರ್ಷಗಳ ಬಳಿಕ ಕೈಗಾರಿಕಾ ಪ್ರಗತಿ ಶೇ. 4.3 ಕುಸಿತ

09:44 AM Nov 12, 2019 | Hari Prasad |

ಮುಂಬಯಿ: ದೇಶದ ಆರ್ಥಿಕತೆ ಸತತವಾಗಿ ಕುಸಿಯುತ್ತಿದ್ದು ಇದೀಗ ಉತ್ಪಾದನಾ ವಲಯದಲ್ಲೂ ಭಾರೀ ಕುಸಿತ ಕಂಡುಬಂದಿದೆ. ಕೈಗಾರಿಕೆಗಳಲ್ಲಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಶೇ. 4.3ರಷ್ಟು ಕುಸಿತ ಕಂಡು ಬಂದಿದೆ ಎಂದು ಕೈಗಾರಿಕೆಗಳ ಅಗಸ್ಟ್ ತಿಂಗಳಲ್ಲಿ ಇದು ಶೇ. 1.1ರಷ್ಟು ಮಾತ್ರ ಕುಸಿತ ಕಂಡಿತ್ತು. ಆದರೆ ನಂತರದ ತಿಂಗಳು ಶೇ. 4.3ರಷ್ಟು ಇಳಿಕೆಯಾಗುವುದರ ಮೂಲಕ ಉತ್ಪಾದನಾ ವಲಯ ಅಪಾಯದಲ್ಲಿದೆ ಎದು ಹೇಳಿದೆ.

Advertisement

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ದೇಶದ ಕೈಗಾರಿಕಾ ಬೆಳವಣಿಗೆಯ ದರ ಇದಾಗಿದೆ. ಉತ್ಪಾದಕ ವಲಯ ಮತ್ತು ಭಾರಿ ಯಂತ್ರೋಪಕರಣ ಉದ್ಯಮ ವಲಯಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದೇ ಇರುವುದರಿಂದ ಒಟ್ಟಾರೆ ಪ್ರಗತಿಯಲ್ಲಿ ಇಳಿಕೆ ಕಾಣುವಂತಾಗಿದೆ.

ಇದು 7 ವರ್ಷಗಳ ಬಳಿಕ ಕಂಡ ಮಹಾ ಕುಸಿತವಾಗಿದೆ. ಉತ್ಪಾದಕ ವಲಯ ಅಗಸ್ಟ್ ನಲ್ಲಿ ಶೇ. 39ರಷ್ಟಿದ್ದರೆ ಜುಲೈನಲ್ಲಿ ಶೇ. 1.2ನಷ್ಟು ಇಳಿಕೆಯಾಗಿತ್ತು. ಗಣಿ ಕ್ಷೇತ್ರ ಶೇ. 8.5ರಷ್ಟು ಕುಸಿದಿದ್ದು, ಅಗಸ್ಟ್ನಲ್ಲಿ ಶೇ. 0.1ರಷ್ಟು ಇಳಿಕೆಯಾಗಿತ್ತು. ಇನ್ನು ಪ್ರಾಥಮಿಕ ಉತ್ಪನ್ನಗಳು ಶೇ. 1.1ರಿಂದ ಶೇ. 5.1ಕ್ಕೆ ಕುಸಿದಿದೆ. ಕ್ಯಾಪಿಟಲ್ ಗೂಡ್ಸ್ 20.7 ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next