Advertisement

ಮತ್ತೂಂದು ಕೈಗಾರಿಕಾಭಿವೃದ್ಧಿ ಕೇಂದ್ರ ಅಗತ್ಯ : ಅರಸಪ್ಪ ಒತ್ತಾಯ

12:35 PM Aug 27, 2020 | sudhir |

ಹಾಸನ: ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ಬಂದರಿಗೆ ಕೊಂಡಿಯಾಗಿರುವ ಹಾಸನದಲ್ಲಿ ಹೊಸದಾಗಿ ಮತ್ತೂಂದು
ಕೈಗಾರಿಕಾ ಬೆಳವಣಿಗೆ ಕೇಂದ್ರವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ
ಕೆ.ಬಿ.ಅರಸಪ್ಪ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕಾಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ನಿವೇ ಶನಗಳು ಸಂಪೂರ್ಣವಾಗಿ ಹಂಚಿಕೆಯಾಗಿವೆ ಹಾಗಾಗಿ ಕೆಐಎಡಿಬಿ ಮತ್ತೂಂದು ಕೈಗಾರಿಕಾ ಬೆಳವಣಿಗೆ ಕೇಂದ್ರವನ್ನು ಸ್ಥಾಪಿಸಬೇಕು ಎಂದರು.

Advertisement

ಕೈಗಾರಿಕಾ ಮೂಲ ಸೌಕರ್ಯ ಒದಗಿಸಿ: ಹೊಸ ಕೈಗಾರಿಕಾ ನೀತಿಗೆ ಅನುಗುಣವಾಗಿ ಪಿಪಿಪಿ ಮಾದರಿಯಲ್ಲಿ ಇಂತಹ ಕೈಗಾರಿಕಾ
ವಸಾಹತುಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಯೋಚಿಸಬಹುದು ಮತ್ತು ಖಾಸಗಿ ಡೆವಲಪ್‌ರ್‌ಗಳೂ ವಸಾಹತುಗಳನ್ನು ಸ್ಥಾಪಿ ಸಲು ಸರ್ಕಾರ ಪ್ರೋತ್ಸಾಹಿಸುತ್ತದೆ. ಹಾಸನ ಜಿಲ್ಲೆಯು ಕೃಷಿ, ಪ್ರವಾಸೋದ್ಯಮದಲ್ಲಿ ವಿಫ‌ುಲ ಅವಕಾಶಗಳಿರುವುದರಿಂದ ಹೊಸ ಕೈಗಾರಿಕಾ ಕೇಂದ್ರ ಸ್ಥಾಪನೆಯಾದರೆ ಕೈಗಾರಿಕೆ ಗಳನ್ನು ಉತ್ತೇಜಿಸಲು ಕೈಗಾರಿಕಾ ಮೂಲ ಸೌಕರ್ಯಗಳನ್ನು ಒದಗಿಸಿದಂತಾಗುತ್ತದೆ ಎಂದರು.

ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು: ವಿದ್ಯುತ್‌ ಸರಬರಾಜಿನ ಅಡೆತಡೆಗಳು ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕಾರ್ಯಾ ಚರಣೆಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುವುದ ರಿಂದ ಗುಣಮಟ್ಟದ ವಿದ್ಯುತ್‌ ಸರಬರಾಜಿನ ಅವಶ್ಯಕತೆ ಇದೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸರಕು ಸಾಗಾಟಣೆಗೆ ಅವಕಾಶ ಕಲ್ಪಿಸುವ ಸಲುವಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸ ಬೇಕು ಎಂದು ಆಗ್ರಹಪಡಿಸಿದರು.

ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹಿಸಿ: ಹಾಸನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ದೇಶೀಯ ಮತ್ತು ಅಂತರಾಷ್ಟ್ರೀಯ ಸರಕುಗಳ ಸಾಗಣೆ ಗಾಗಿ ಮಂಗಳೂರು ಬಂದರಿಗೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಇದರಿಂದ ಹಾಸನ ಜಿಲ್ಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಹಾಸನ – ಬೆಂಗಳೂರು ಮಾರ್ಗದಲ್ಲಿ ರೈಲುಗಳ ಚಲನೆಯ ವೇಗವನ್ನು ಹೆಚ್ಚಿಸುವ ಮೂಲಕ ಹಾಸನ ದಲ್ಲಿ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೈಲ್ವೆಯೊಂದಿಗೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ಪುನಶ್ಚೇತನಕ್ಕೆ ಒತ್ತು: ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಂ.ಎಸ್‌.ಎಂ.ಇ.ಗಳನ್ನು ಬೆಂಬಲಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಾಸಿಯಾ ಪ್ರಸಕ್ತ ಸಾಲಿನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಶೇ.20ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸಣ್ಣ ಕೈಗಾರಿಕೆಗಳ ಅನೇಕ ಘಟಕಗಳು ತಮ್ಮ ವಹಿವಾಟುವಿನಲ್ಲಿ ಶೇ. 30 ರಿಂದ 70ರಷ್ಟು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇ ತನಕ್ಕೆ ಸರ್ಕಾರ ಒತ್ತು ನೀಡುವುದುಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

Advertisement

ಸಂಘದ ಗೌರವ ಕಾರ್ಯದರ್ಶಿ ಎನ್‌. ಆರ್‌.ಜಗದೀಶ್‌, ಗೌರವ ಪ್ರಧಾನ ಕಾರ್ಯದರ್ಶಿ ಜಯಕುಮಾರ್‌, ಜಂಟಿ ಕಾರ್ಯದರ್ಶಿ ಎಸ್‌. ಶಂಕರನ್‌, ಖಜಾಂಚಿ ಎಂ ಆರ್‌.ರಂಗಸ್ವಾಮಿ, ಜಿಲ್ಲಾ ಸಂಘದ ಅಧ್ಯಕ್ಷ ಮಹಾಂತಪ್ಪ, ಗೌರವಾಧ್ಯಕ್ಷ ಎಚ್‌.ಆರ್‌.
ಮದನ್‌ಕುಮಾರ್‌, ಉಪಾಧ್ಯಕ್ಷ ಎಚ್‌.ಎ. ಕಿರಣ್‌, ಪ್ರಕಾಶ್‌ಯಾಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next