Advertisement
ಇಂದ್ರಾಳಿ: ಒಂದೆಡೆ ಇಂದ್ರಾಣಿ ಗದ್ದೆ, ತೋಟಗಳಲ್ಲಿ ಹರಿದು ಸಾಗುವಾಗ ಗುಳ್ಮೆ ತೀರ್ಥ ಸೇರಿಕೊಂಡು ದೊಡ್ಡದಾಗುತ್ತಾಳೆ. ಬಳಿಕ ಇಂದ್ರಾಳಿ ರೈಲ್ವೇ ಸ್ಟೇಶನ್‌ನಲ್ಲಿ ಮಂಚಿ ತೀರ್ಥವೂ ಸೇರಿ ಸಾಗುತ್ತಾರೆ ಸಾಗರದ ಕಡೆಗೆ.
Related Articles
ಮಣ್ಣಪಳ್ಳದಿಂದ ತುಂಬಿ ಹರಿಯುವ ಹಾಗೂ ಹತ್ತಿರದ ಅಂತರ್ಜಲದ ಸೆಲೆಯೇ ಈ ತೀರ್ಥಕ್ಕೆ ಕಾರಣ. ಇದರ ನೀರು ಕುಡಿಯಲು ಯೋಗ್ಯ. ನಾವೆಲ್ಲ ಕೆಲವೊಮ್ಮೆ ಇದನ್ನು ಬಳಸುತ್ತೇವೆ. ಈ ತೀರ್ಥ ಹರಿಯುವುದರಿಂದಲೇ ನಮ್ಮ ಬಾವಿಗಳಲ್ಲಿ ಸಾಕಷ್ಟು ನೀರಿದೆ ಎನ್ನುತ್ತಾರೆ ಸ್ಥಳೀಯವಾಗಿ ತೋಟ ಮಾಡಿಕೊಂಡಿರುವ ನಾಗರಿಕರೊಬ್ಬರು.
Advertisement
ಇದೂ ಕಲುಷಿತವಾಗುತ್ತಿದೆಈಗ ನಗರಸಭೆಯೂ ಸೇರಿದಂತೆ ನಾಗರಿಕರ ಜವಾ ಬ್ದಾರಿ ಇರುವುದು ಈ ಗುಳ್ಮೆ ತೀರ್ಥ ಕಲುಷಿತವಾಗ ದಂತೆ ತಡೆಯುವುದು. ಅಲ್ಲಿ ಈಗಾಗಲೇ ಕೆಲವರು ಸಂಜೆ ಕುಡಿತ ಪಾರ್ಟಿಗಳಿಗೆ ಹೋಗುವುದುಂಟು. ಅದಕ್ಕೆ ನಿದರ್ಶನವಾಗಿ ಅಲ್ಲಿ ಸಾಕಷ್ಟು ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ಗಳು ರಾಶಿ ಬೀಳತೊಡಗಿವೆ. ವೀಕೆಂಡ್‌ಗಳಲ್ಲಿ ತುಸು ಹೆಚ್ಚಿನ ಜನಸಂದಣಿ ಇರುತ್ತದೆ. ಯುವಜನರೇ ಹೆಚ್ಚು ಎನ್ನುತ್ತಾರೆ ಸ್ಥಳೀಯರೊಬ್ಬರು.
ಅವರ ಪ್ರಕಾರ ಇತ್ತೀಚೆಗೆ ಈ ಜನಸಂಖ್ಯೆ ಕಡಿಮೆ ಯಾಗಿದೆ. ಅದಕ್ಕಿಂತ ಮೊದಲು ಹತ್ತಿರದಲ್ಲೇ ಒಂದು ಮದ್ಯದಂಗಡಿ ಇತ್ತು. ಅಲ್ಲಿಂದಲೇ ಬಾಟಲಿ ಇತ್ಯಾದಿ ತಂದು ಕುಡಿಯುತ್ತಿದ್ದರು. ನಾವೀಗ ಸಂಜೆಯಾದ ಮೇಲೆ ಹೋಗಲು ಬಿಡುವುದಿಲ್ಲ. ಆದರೂ ಕೆಲವರು ಕೇಳುವುದಿಲ್ಲ ಎಂಬುದು ಅವರ ಅಭಿಪ್ರಾಯ. ಭದ್ರತೆ ಬೇಕು
ಇದು ಗುಡ್ಡದ ಪ್ರದೇಶವಾಗಿರುವುದರಿಂದ ಸ್ಥಳೀಯ ಯುವಜನರು ಹಾಗೂ ಹೊರಗಿನ ವಿದ್ಯಾರ್ಥಿಗಳು ಇಲ್ಲಿಗೆ ಹೋಗಿ ಮೋಜು ಮಸ್ತಿ ಮಾಡುವ ಉದಾಹರಣೆಗಳಿವೆ. ಇದರಿಂದ ಸ್ಥಳೀಯ ಕೌಟುಂಬಿಕ ವಾತಾವರಣವೂ ಹಾಳಾಗುವುದಲ್ಲದೆ, ಶುದ್ಧ ಜಲಮೂಲವೊಂದು ನಾಶವಾಗುವ ಸಾಧ್ಯತೆ ಹೆಚ್ಚು. ಕೊನೇಪಕ್ಷ ಇದನ್ನು ಉಳಿಸಲು ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ನಗರಸಭೆ ಕ್ರಮ ಕೈಗೊಳ್ಳಲು ಇದು ಸಕಾಲ. ಇದಕ್ಕೆ ಭೇಟಿ ನೀಡುವವರಿಗೆ ಕೆಲವು ಸಮಯ ನಿಗದಿಪಡಿಸುವುದು, ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸುವುದು, ಮದ್ಯ ಮತ್ತು ಧೂಮಪಾನ ಸೇವನೆಯನ್ನು ನಿರ್ಬಂಧಿಸುವುದು, ಮೋಜು ಮಸ್ತಿಗೆ ಕಡಿವಾಣ ಹಾಕುವುದೂ ಸೇರಿದಂತೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಇಲ್ಲವಾದರೆ ಮತ್ತೂಂದು ಪ್ರಮಖ ಜಲಮೂಲ ನಾಶವಾಗಲಿದೆ. ಇಂದ್ರಾಣಿ ನದಿ ಸಮಸ್ಯೆಗೆ ಪರಿಹಾರ ಕ್ರಮ ಆರಂಭಿಸಿದ್ದೇವೆ : ಪೌರಾಯುಕ್ತ
ಉಡುಪಿ, ಮಾ. 2: ಇಂದ್ರಾಣಿ ನದಿ ಸಮಸ್ಯೆ ಎಷ್ಟು ವರ್ಷದಿಂದ ಇದೆ ಎನ್ನುವುದರ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಆದರೆ ನಾವೀಗ ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ತಿಳಿಸಿದ್ದಾರೆ. ಇಂದ್ರಾಣಿ ನದಿ ಕುರಿತು ಉದಯವಾಣಿಗೆ ಪ್ರತಿಕ್ರಿಯಿಸಿರುವ ಅವರು, ಇಂದ್ರಾಣಿ ನದಿ ಸಮಸ್ಯೆ, ಯುಜಿಡಿ ಸಮಸ್ಯೆ ಎಷ್ಟು ವರ್ಷಗಳಿಂದ ಇದೆ ಎನ್ನುವ ಮಾಹಿತಿ ನನ್ನಲ್ಲಿಲ್ಲ. ಹಿಂದೆ ವೆಟ್‌ವೆಲ್‌ಗಳಲ್ಲಿ ಜನರೇಟರ್ ವ್ಯವಸ್ಥೆ ಯಾಕೆ ಕಲ್ಪಿಸಿಲ್ಲ ಎನ್ನುವ ಬಗ್ಗೆಯೂ ತಿಳಿದಿಲ್ಲ. ನಾವೀಗ ಸಮಸ್ಯೆಯನ್ನು ಮಾತ್ರ ಹಂತ ಹಂತವಾಗಿ ಪರಿಹರಿಸುತ್ತಿದ್ದೇವೆ ಎಂದಷ್ಟೇ ಹೇಳಬಹುದು ಎಂದರು. ವೆಟ್‌ವೆಲ್‌ಗಳ ನಿರ್ವಹಣೆಗೆ ಟೆಂಡರ್ ಕರೆಯುವ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ವೆಟ್‌ವೆಲ್‌ಗಳ ಸಂಪೂರ್ಣ ನಿರ್ವಹಣೆಯನ್ನು ಗುತ್ತಿಗೆದಾರರು ಕೈಗೊಳ್ಳಲಿದ್ದಾರೆ. ವಾರ್ಷಿಕ ನಿರ್ವಹಣೆ ಗುತ್ತಿಗೆ ಪದ್ಧತಿ ಜಾರಿಗೆ ತರುವುದರ ಬಗ್ಗೆಯೂ ಈಗಾಗಲೇ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಹಣ ನಗರಸಭೆಯಿಂದ ನೀಡಲಾಗುತ್ತದೆ. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸುವ ಹಿನ್ನೆಲೆಯಲ್ಲಿ ಸಾಕಷ್ಟು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಯುಜಿಡಿ ಸಮಸ್ಯೆ ನಾನು ಉಡುಪಿಗೆ ಬರುವ ಹಿಂದಿನಿಂದಲೂ ಇತ್ತು. ಹೊಸ ಯುಜಿಡಿಗೆ ಅನುದಾನದ ಅಗತ್ಯವಿದೆ. 10 ದಿನಗಳಿಂದ ವೆಟ್‌ವೆಲ್‌ಗಳ ಪಂಪ್ ದುರಸ್ತಿ ಮಾಡಲಾಗಿದೆ. ಇದೀಗ ಎಲ್ಲ ವೆಟ್‌ವೆಲ್ ಪಂಪ್‌ಗ್ಳು ಕಾರ್ಯಾಚರಿಸುತ್ತಿವೆ. ನಿಟ್ಟೂರು ಎಸ್‌ಟಿಪಿ ಲಗೂನ್ ಗೇರ್ ಬಾಕ್ಸ್ ಖರೀದಿಗೆ ಅಗತ್ಯವಿರುವ ಸಿದ್ಧತೆ ಪೂರ್ಣಗೊಂಡಿದೆ. ಅದು ಸರಿಯಾದ ಮೇಲೆ ಸಮಸ್ಯೆ ಸಾಕಷ್ಟು ಬಗೆಹರಿಯಲಿದೆ ಎಂದರು. ಪತ್ರಿಕೆಯಲ್ಲಿ ಬಂದ ವರದಿಗಳನ್ನು ಗಮನಿಸಿದ್ದೇನೆ. ಆ ಹಿನ್ನೆಲೆಯಲ್ಲಿ ಹಲವು ಉಪಕ್ರಮಗಳನ್ನು ಜರುಗಿಸುತ್ತಿದ್ದೇವೆ. ಆದರೆ ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಕ್ರಮ ಕೈಗೊಳ್ಳಬೇಕಿದೆ. ಅದನ್ನೇ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಮ್ಮನ್ನು ದೂರುವುದು ಸರಿಯಲ್ಲ
ವಿವಿಧ ಇಲಾಖೆಗಳು ಇಂದ್ರಾಣಿ ನದಿ ಮಾಲಿನ್ಯದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರೂ ನಗರಸಭೆ ಸ್ಪಂದಿಸಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿ, ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ ಇಲಾಖೆಗಳ ಸಮಸ್ಯೆಗಳಿಗೆ ಹೊಣೆ ನಾವಲ್ಲ. ಎಲ್ಲರೂ ಒಟ್ಟಾಗಿ ನಗರಸಭೆಯನ್ನು ದೂರುವುದು ಸರಿಯಲ್ಲ ಎಂದು ಪೌರಾಯುಕ್ತರು ಹೇಳಿದರು. ನಗರಸಭೆ ಕೈಗೊಳ್ಳುತ್ತಿರುವ ವಿವಿಧ ಪರಿಹಾರ ಕ್ರಮಗಳ ಇನ್ನಷ್ಟು ವಿವರವನ್ನು ಕೇಳಿದ್ದಕ್ಕೆ ವಿವರಿಸಿದ ನಗರಸಭೆ ಎಇಇ ಮೋಹನ್ ರಾಜ್, ಎರಡು ಜನರೇಟರ್‌ಗಳಿಗೆ ಅಗತ್ಯವಿರುವ 11 ಲ.ರೂ. ಮೊತ್ತದ ಅಂದಾಜುಪಟ್ಟಿ ಸಿದ್ಧಗೊಂಡಿದೆ. ಎಸ್‌ಟಿಪಿ ಗೇರ್ ಬಾಕ್ಸ್ ಸಂಬಂಧಿಸಿದಂತೆ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರವೇ ಗೇರ್‌ಬಾಕ್ಸ್‌ಗೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು. ಗುಳ್ಮೆ ತೀರ್ಥ ಸದಾ ಹರಿಯುವಂಥದ್ದು. ನಾವು ಚಿಕ್ಕಂದಿನಿಂದಲೂ ಅದನ್ನು ನೋಡಿದ್ದೇವೆ. ಇಲ್ಲಿನ ಇಂದ್ರಾಣಿ ನದಿಗೆ ಅದೂ ಸೇರಿ ದೊಡ್ಡ ನದಿಯಾಗುತ್ತದೆ. ಆ ಬಳಿಕ ಮಂಚಿ ತೀರ್ಥವೂ ಸೇರಿಕೊಳ್ಳುತ್ತದೆ. ಇಲ್ಲೆಲ್ಲೂ ಕಲುಷಿತವಾಗುತ್ತಿರುವುದು ನಮಗೆ ಕಂಡುಬಂದಿಲ್ಲ .
-ಸಂಜೀವ, ಸ್ಥಳೀಯರು