Advertisement

ಇಂದ್ರಾಣಿ ನದಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ

09:00 PM Jan 25, 2020 | mahesh |

ಉಡುಪಿ: ಉಡುಪಿ ನಗರಸಭೆ ಕಲ್ಸಂಕದ ಮೂಲಕ ಹಾದುಹೋಗುವ ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಿದೆ.

Advertisement

36 ಲ.ರೂ. ಕಾಮಗಾರಿ
ನಗರಸಭೆ ಸುಮಾರು 36 ಲ.ರೂ. ವೆಚ್ಚದಲ್ಲಿ ಕಲ್ಸಂಕ, ಮಠದಬೆಟ್ಟು, ನಿಟ್ಟೂರು ಶಾರದ ಇಂಟರ್‌ ನ್ಯಾಶನಲ್‌ ಹೊಟೇಲ್‌, ಮೂಡುಬೆಟ್ಟು, ಕೊಡವೂರು ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದಲ್ಲಿ ಹರಿಯುವ ಇಂದ್ರಾಣಿ ನದಿಯ ಹೂಳೆತ್ತಲಾಗುತ್ತದೆ. ಇದರ ಕಾಮಗಾರಿಯನ್ನು ಪುರುಷೋತ್ತಮ ಶೆಣೈ ಅವರು ವಹಿಸಿಕೊಂಡಿದ್ದು, ಎರಡು ಹಿಟಾಚಿಗಳ ಮೂಲಕ ನದಿಯ ಹೂಳೆತ್ತಲಾಗುತ್ತಿದೆ.

ನದಿಯಲ್ಲಿ ಪ್ಲಾಸ್ಟಿಕ್‌ ರಾಶಿ
ಪ್ರಸ್ತುತ ಇಂದ್ರಾಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ ತುಂಬಿಕೊಂಡಿದೆ. ಸಾರ್ವಜನಿಕರು ತ್ಯಾಜ್ಯವನ್ನು ಮಳೆ ನೀರು ಹರಿಯುವ ಚರಂಡಿ, ನದಿಗೆಸೆವ ಸುಲಭ ವಿಲೇವಾರಿ ದಾರಿಯನ್ನು ಕಂಡಿದ್ದಾರೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಾಟಲಿ, ಚೀಲ, ಗಿಡಗಂಟಿ, ಹೂವಿನ ಗಿಡ, ಚಾಪೆ, ಶೂ, ಚಪ್ಪಲಿ, ಸೀಯಾಳದ ಇಡಿ ಚಿಪ್ಪು, ಟಯರ್‌ಗಳು ನದಿಯಲ್ಲಿ ಕಾಣಸಿಗುತ್ತಿವೆ. ಕಳೆದ ಬಾರಿ ನದಿ ಹೂಳೆತ್ತದ ಪರಿಣಾಮ ನಗರಸಭೆ ವ್ಯಾಪ್ತಿಯ ಅನೇಕ ವಾರ್ಡ್‌ಗಳ ಮನೆಗಳು ಜಲಾವೃತವಾಗಿದ್ದವು.

ಹೂಳು ತುಂಬಿ ನೆರೆ
ಕಿನ್ನಿಮೂಲ್ಕಿ, ಕಲ್ಸಂಕ, ಮೂಡುಬೆಟ್ಟು, ಮಠದಬೆಟ್ಟು, ಕೊಡವೂರು, ಬೈಲಕೆರೆ, ಗುಂಡಿಬೈಲು ಸಹಿತ ಹಲವೆಡೆ ಮಳೆಗಾಲದಲ್ಲಿ ತೋಡು ಉಕ್ಕಿ ಹರಿಯುತ್ತದೆ. ಹೂಳು ತುಂಬಿಯೂ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿ ಕಟ್ಟಿದ ಮನೆಗಳಿಗೆ ನೀರು ನುಗ್ಗುತ್ತದೆ.

ಒಂದು ವರ್ಷದ ಬಳಿಕ ಕಾಮಗಾರಿಗೆ ಚಾಲನೆ
ಹಿಂದೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಇಂದ್ರಾಣಿ ಹೊಳೆತ್ತುವ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬರೋಬ್ಬರಿ ಒಂದು ವರ್ಷದ ಬಳಿಕ ಕಾಮಗಾರಿಗೆ ಟೆಂಡರ್‌ ಆಗಿ ಚಾಲನೆ ದೊರಕಿದೆ.

Advertisement

ಕ್ರಮ ಕೈಗೊಂಡಿಲ್ಲ
ಇಂದ್ರಾಣಿ ನದಿಯ ಹೂಳೆತ್ತಿದರೂ ಒಳಚರಂಡಿ ಪಂಪಿಂಗ್‌ ತೊಂದರೆಯಿಂದಾಗಿ ತ್ಯಾಜ್ಯ, ಕಶ್ಮಲ ಉಕ್ಕಿ ಮಳೆ ನೀರು ಹರಿವ ತೋಡಿನಲ್ಲೇ ಹರಿಯುತ್ತಿದ್ದು ಪರಿಸರ ಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಉಲ್ಲಂ ಸುತ್ತಿದೆ. ನಗರ ಸಭೆಯ ಸಂಬಂಧಿತರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ..
– ವಿಜಯ ಕುಮಾರ್‌, ಸ್ಥಳೀಯರು

ಮೂರು ತಿಂಗಳು ಕಾಮಗಾರಿ
ನಗರಸಭೆ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಸುಮಾರು ಮೂರು ತಿಂಗಳ ಕಾಲ ನಿರಂತರವಾಗಿ ಕಾಮ ಗಾರಿ ನಡೆಯಲಿದೆ.
– ಸಂತೋಷ್‌ ಜತ್ತನ್‌, ನಗರಸಭೆ ಸದಸ್ಯ, ನಿಟ್ಟೂರು ವಾರ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next